Kourava News

ಆಡೂರಲ್ಲಿ ಕೊರೊನಾ ವಾರಿಯರ‍್ಸ್‌ಗಳಿಗೆ ಆತ್ಮೀಯ ಸನ್ಮಾನ…….


ಹಾನಗಲ್ಲ: ಕೊರೊನಾ ಸೋಂಕು ಹರಡದಂತೆ ತಮ್ಮ ಜೀವದ ಹಂಗು ತೊರೆದು ಸೇವೆಸಲ್ಲಿಸುತ್ತಿರುವ ಕೊರೊನಾ ವಾರಿಯರ‍್ಸ್‌ಗಳಾಗಿರುವ ಪೊಲೀಸ್ ಇಲಾಖೆಯವರಿಗೆ, ಆರೋಗ್ಯ ಇಲಾಖೆಯವರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತೆಯರಿಗೆ ಮೇ.೧ರಂದು ಆಡೂರಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಮನೊಹರ ತಹಶೀಲ್ದಾರ್ ಮತ್ತು ಕೆ ಪಿ ಸಿ ಕಾರ್ಯದರ್ಶಿಗಳಾದ ಪ್ರಕಾಶ್‌ಗೌಡ ಪಾಟೀಲ್, ಮಾರನಬೀಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೀರಣ್ಣ ಮರುಡಿ ಕೊರೊನಾ ವಾರಿಯರ‍್ಸ್‌ಗಳಿಗೆ ಆತ್ಮೀಯವಾಗಿ ಸನ್ಮಾನಿಸಿ ಅವರ ಸೇವೆಯನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ಎಂ ತಹಸೀಲ್ದಾರ್, ಆಡೂರು ಪಿಎಸ್‌ಐ ಎಚ್. ಆಂಜನೇಯ, ಮುಖಂಡರಾದ ರವೀಂದ್ರ ಚಿಕ್ಕೇರಿ, ಸುರೇಶ ದೊಡ್ಡಕುರುಬರ, ಸಿದ್ದನಗೌಡ ಪಾಟೀಲ್, ಪಿಡಿಒ ಕಲ್ಲಪ್ಪ ಚಿಕ್ಕೇರಿ ಆಡೂರು ವೈದ್ಯಾಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ವರ್ಗಇನ್ನೂ ಅನೇಕ ಮುಖಂಡರುಗಳು ಭಾಗವಹಿಸಿದ್ದರು.