Kourava News

ದಿಂಗಾಲೇಶ್ವರಶ್ರೀ  ಪಾದಯಾತ್ರೆ ಮಾಡಲು ಸ್ವತಂತ್ರರು; ಹೊರಟ್ಟಿ


ದಿಂಗಾಲೇಶ್ವರಶ್ರೀ  ಪಾದಯಾತ್ರೆ ಮಾಡಲು ಸ್ವತಂತ್ರರು; ಹೊರಟ್ಟಿ
ಹಾವೇರಿ:  ೨೦೦೭ರಲ್ಲಿ ಸಿ.ಎಂ.ಉದಾಸಿ ಮಂತ್ರಿ ಆಗಿದ್ದ ವೇಳೆ ಹಿಂದಿನ ಪೂಜ್ಯರ
ಭಾವನೆಯಂತೆ ಕೆಎಲ್‌ಇ ಸಂಸ್ಥೆಗೆ ಭೂಮಿ ನೀಡಿದೆ. ಹಿಂದಿನ ಸ್ವಾಮೀಜಿ ಹೆಸರು ಅಜರಾಮರ ಆಗಿಸಲು ಮೆಡಿಕಲ್ ಕಾಲೇಜಿಗೆ ಭೂಮಿ ನೀಡಲಾಗಿದೆ. ಮೂರು ಸಾವಿರ ಮಠದ ಹಿಂದಿನ ಶ್ರೀಗಳ ಇಚ್ಛೆಯಂತೆಯೆ ಎಲ್ಲರೂ ಸೇರಿ ತೀರ್ಮಾನ ಮಾಡಿದ್ದೆವು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಹಾವೇರಿಯಲ್ಲಿ ಶುಕ್ರವಾರ ಹುಕ್ಕೆರಿಮಠಕ್ಕೆ ಭೇಟಿ ನೀಡಿದ್ದ ವೇಳೆ ಮೂರು ಸಾವಿರ ಮಠದ
ಆಸ್ತಿಯ ವಿಚಾರವಾಗಿ  ಪತ್ರಕರ್ತರು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು, ಅಖಂಡ
ಧಾರವಾಡ ಜಿಲ್ಲೆಯ ಶಾಸಕರು ಸೇರಿ ಮಠದ ಪೂಜ್ಯರ ಇಚ್ಚೆಯಂತೆ ಭೂಮಿ ಕೊಟ್ಟಿದ್ದೇವೆ. ಅದು
ಆಗಿದೆ, ಎಲ್ಲರೂ ಕೂಡಿ ತೀರ್ಮಾನ ಮಾಡಿದ್ದದು. ಬೆಂಗಳೂರಲ್ಲಿ ಉದಾಸಿಯವರ ಮನೆಯಲ್ಲಿ ಈ
ತೀರ್ಮಾನ ಆಗಿತ್ತು. ನಾಲಿಗೆ ಒಂದೆ ಇರಬೇಕು, ಹೀಗಾಗಿ ಗೊತ್ತಿದ್ದನ್ನ ಹೇಳಿದ್ದೇನೆ
ಎಂದರು.
ದಿಂಗಾಲೇಶ್ವರ ಶ್ರೀಗಳು ಪಾದಯಾತ್ರೆ ಮಾಡೋದು, ಮತ್ತೊಂದು ಮಾಡಲು ಅವರು ಸ್ವತಂತ್ರರು. ಪ್ರಜಾಪ್ರಭುತ್ವದಲ್ಲಿ ಅವರು ಸ್ವತಂತ್ರರಿದ್ದಾರೆ. ಅವರ ಬಗ್ಗೆ ನಾನೇನು
ಮಾತಾಡೋದಿಲ್ಲ. ತಪ್ಪುಗಳಿದ್ದರೆ ತಿಳಿಸಲಿ, ತಪ್ಪಿದ್ದರೆ ಸರಿ ಪಡಿಸೋಣ ಎಂದು ಅವರು
ಹೇಳಿದರು.
ಇನ್ನು ಸಭಾಪತಿ ಆಗಿದ್ದಕ್ಕೆ ಶಿಕ್ಷಕರಿಗೆ ಮಾತ್ರವಲ್ಲ ಈಡಿ ಉತ್ತರ ಕರ್ನಾಟಕ ಭಾಗಕ್ಕೆ
ಬಹಳ ಹೆಮ್ಮೆಯಾಗಿದೆ. ಜೆಡಿಎಸ್ ವರಿಷ್ಠ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ
ಮತ್ತು ಸಿಎಂ ಯಡಿಯೂರಪ್ಪ ಸೇರಿಕೊಂಡು ದೊಡ್ಡ ಜವಾಬ್ದಾರಿ ಸ್ಥಾನ ಕೊಟ್ಟಿದ್ದಾರೆ.
ಸಂದಿಗ್ದ ಪರಿಸ್ಥಿತಿಯಲ್ಲಿ ಸಭಾಪತಿ ಸ್ಥಾನ ಸಿಕ್ಕಿದೆ, ಅದನ್ನ ಸಮರ್ಥವಾಗಿ
ನಿಭಾಯಿಸಿಕೊಂಡು ಹೋಗುವೆ. ಕರ್ನಾಟಕ ಇತಿಹಾಸದಲ್ಲಿ ಹೊರಟ್ಟಿ ಇಂಥಾ ಕಾಲದಲ್ಲಿ
ಸಭಾಪತಿಯಾಗಿದ್ದರು ಎನ್ನುವಂತೆ ಕೆಲಸ ಮಾಡಿ ತೋರಿಸೋ ಬಗ್ಗೆ ಚಾಲೆಂಜ್ ಆಗಿ
ತಗೊಂಡಿದ್ದೇನೆ ಎಂದು ಹೊರಟ್ಟಿ  ಹೇಳಿದರು.
satta king gali 91 club Hdhub4u Hdhub4u