Kourava News

ಪತ್ರಕರ್ತ ವಿನಯ ಹುರಳಿಕುಪ್ಪಿ ಇನ್ನಿಲ್ಲ

ಶಿಗ್ಗಾವಿ: ಶಿಗ್ಗಾವಿ ಪತ್ರಕರ್ತ ವಿನಯ ಹುರಳಿಕುಪ್ಪಿಯವರು ಭಾನುವಾರ ರಾತ್ರಿ ನಿಧನರಾದರು.ಮ್ರತರು ತಾಯಿ, ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮ್ರತರ ಅಂತ್ಯ ಕ್ರಿಯೆ ಭಾನುವಾರ ರಾತ್ರಿ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಪ್ರಗತಿಪರ ಬರಹಗಳ ಮೂಲಕ ಹೆಸರಾಗಿದ್ದ ವಿನಯ ಅವರು ತಮ್ಮ ಸರಳ ಸಜ್ಜನಿಕೆಯ ನಡವಳಿಕೆಯ ಮೂಲಕ ಹೆಸರಾಗಿದ್ದರು.
ಅನೇಕ ಪ್ರಗತಿಪರ ಚಳುವಳಿಗಳಿಗೆ ಬೆಂಬಲಿಸುತ್ತಾ ಬಂದಿದ್ದ ವಿನಯ ಅವರ ನಿಧನದಿಂದ ಪತ್ರಿಕಾರಂಗಕ್ಕೆ ಬಹುದೊಡ್ಡ ಹಾನಿಯಾಗಿದೆ.