Kourava News

ಪ್ರಕಾಶ್‌ಗೌಡ ಪಾಟೀಲ್ ನೇತೃತ್ವದಲ್ಲಿ ಹಾನಗಲ್ಲನಲ್ಲಿ ಜನಸಾಮಾನ್ಯರಿಗೆ ಮಾಸ್ಕ್ ವಿತರಣೆ

ಹಾವೇರಿ: ಕರೋನಾ ಸೋಂಕು ವೈರಸ್ ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಪ್ರಕಾಶ್‌ಗೌಡ ಪಾಟೀಲ್‌ರ ನೇತೃತ್ವದಲ್ಲಿ ಸೋಮವಾರ ಹಾನಗಲ್ಲ ನಗರದ ಜನ ಸಾಮಾನ್ಯರಿಗೆ ಮಾಸ್ಕ್ ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ್, ತಾಲ್ಲೂಕು ಪಂಚಾಯಿತಿ ಸದಸ್ಯ ಮೈಲಾರಪ್ಪ ಕಬ್ಬೂರ, ಮುಖಂಡರುಗಳಾದ ಸುರೇಶ್ ದೊಡ್ಡಕುರಬರ, ರಾಜಣ್ಣ ಗುಡಿ, ರವೀಂದ್ರ ಚಿಕ್ಕೇರಿ, ರಾಘವೇಂದ್ರ ಕರಿಯಪ್ಪನವರ, ಗುಡ್ಡಪ್ಪ ಗೊಯಿಕಾಯಿ, ಸೋಮಶೇಖರ್ ಕೊತ್ತಂಬರಿ, ಸುರೇಶ್ ಗೊಲ್ಲರ್, ಬಸಣ್ಣ ಬೈಲವಾಳ, ವಿರೂಪಾಕ್ಷಯ್ಯ ಹಿರೇಮಠ್, ಹನುಮಂತಪ್ಪ ಕೋಣನಕೊಪ್ಪ, ಮೂಕಣ್ಣ ಪಡೆಪ್ಪನವರ, ಸಂಜೀವ್ ಶಿವನಗೌಡ್ರ, ಸಿದ್ದನಗೌಡ ಪಾಟೀಲ್, ಶಿವಾನಂದ ಮನ್ನಂಗಿ, ಪ್ರಭು ಹಡಪದ, ಶಿವಕುಮಾರ್ ಆಲದಕಟ್ಟಿ ಮತ್ತಿತರರು ಈವೇಳೆ ಹಾಜರಿದ್ದರು.
ಒಂದುಕಡೆಗೆ ಮಾಸ್ಕಗಳು ಸಿಗದೇ ಜನರು ಮಾಸ್ಕ್‌ಗಳಿಗೆ ಪರದಾಡುತ್ತಿದ್ದಾರೆ. ಈವೇಳೆಯಲ್ಲಿ ಮಾಸ್ಕಗಳನ್ನು ತರಿಸಿ ಜನಸಮಾನ್ಯರಿಗೆ ವಿತರಿಸುವ ಮೂಲಕ ಜನೋಪಯೋಗಿ ಕಾರ್ಯಮಾಡಿರುವ ಪ್ರಕಾಶಗೌಡ ಪಾಟೀಲ ಮತ್ತ ಅವರ ಸ್ನೇಹಿತರ ಕಾರ್ಯ ಅಭಿನಂದನಾರ್ಹವಾಗಿದೆ.