Kourava News

ಫೆ.೧೬ಕ್ಕೆ ಬೆಂಗಳೂರಲ್ಲಿ ಅಸಂಖ್ಯ ಪ್ರಮಥ ಗಣಮೇಳ, ೨ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ

ಫೆ.೧೬ಕ್ಕೆ ಬೆಂಗಳೂರಲ್ಲಿ ಅಸಂಖ್ಯ ಪ್ರಮಥ ಗಣಮೇಳ, ೨ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ
ಬೆಳಗ್ಗೆ ೮ ಕ್ಕೆ ಶಿವಯೋಗ ಸಂಭ್ರಮ, ೧.೩೦ಕ್ಕೆ ಅಸಂಖ್ಯ ಪ್ರಮಥ ಗಣಮೇಳ, ಮದ್ಯಾಹ್ನ ೧.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ
ಪತ್ರಿಕಾಗೋಷ್ಠಿಯಲ್ಲಿ ಬಸವಶಾಂತಲಿಂಗಶ್ರೀ ಹೇಳಿಕೆ
ಹಾವೇರಿ: ೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಂಗಳು ಸಮಾವೇಶಗೊಂಡಿದ್ದರೆಂಬುದು ಒಂದು ಇತಿಹಾಸ. ಅದೇ ರೀತಿ ೨೧ ನೇ ಶತಮಾನದಲ್ಲಿ ಅಂತಹ ಒಂದು ಚಾರಿತ್ರಿಕ ಘಟನೆಗೆ ಸಾಕ್ಷಿ ಆಗಬೇಕೆಂಬ ಉದ್ದೇಶದಿಂದ ಫೆಬ್ರವರಿ ೧೬ರಂದು ಭಾನುವಾರ ಬೆಂಗಳೂರು ಬಳಿಯ ತುಮಕೂರುರಸ್ತೆಗೆ ಹೊಂದಿಕೊಂಡಿರುವ ನೈಸ್‌ರೋಡಪಕ್ಕದ ನಂದಿಗ್ರೌಂಡ್ಸ್‌ನಲ್ಲಿ ಚಿತ್ರದುರ್ಗದ ಬ್ರಹನ್ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಅಸಂಖ್ಯ ಪ್ರಮಥ ಗಣಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊಸಮಠದ ಬಸವಶಾಂತಲಿಂಗಸ್ವಾಮಿಜಿ ತಿಳಿಸಿದರು.
ಫೆ.೧೩ರಂದು ಹೊಸಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅಸಂಖ್ಯ ಪ್ರಮಥ ಗಣಮೇಳದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾತನಾಡಿದ ಅವರು,
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗ ಹಾಗೂ ಬಸವ ಕೇಂದ್ರಗಳು, ಬಸವ ಸಂಘಟನೆಗಳು, ವಿವಿಧ ಧಾರ್ಮಿಕ ಕೇಂದ್ರಗಳು ಹಾಗೂ ಸರ್ವಜನಾಂಗದ ಮಠಾಧೀಶರ ಸಹಯೋಗದೊಂದಿಗೆ ಬೆಂಗಳೂರಿನ ನಂದಿ ಮೈದಾನದಲ್ಲಿ ಫೆಬ್ರವರಿ ೧೬ರಂದು “ಜಾಗತಿಕ ಶಾಂತಿ ಮತ್ತು ಪ್ರಗತಿಗಾಗಿ ಶಿವಯೋಗ ಸಂಭ್ರಮ, ಅಸಂಖ್ಯ ಪ್ರಮಥರ ಗಣಮೇಳ ಮತ್ತು ಸರ್ವಶರಣರ ಸಮ್ಮೇಳನ ನಡೆಯಲಿದೆ ಎಂದರು.
ಮುರುಘ ಶ್ರೀಗಳ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಸುತ್ತೂರು ಶ್ರೀಗಳು, ಸಿದ್ದಗಂಗಾ ಶ್ರೀಗಳು, ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆರವರು, ಶ್ರೀ ರವಿಶಂಕರ ಗುರೂಜಿ, ರಾಜ್ಯಮಟ್ಟದ ಧಾರ್ಮಿಕ ಮುಖಂಡರು, ಸಂತರು ಸ್ವಾಮಿಗಳಲ್ಲದೆ ಜನಾಯಕರು, ಚಿಂತಕರು, ಕಲಾವಿದರು ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬರುವ ಲಕ್ಷಾಂತರ ಜನರು ಭಾಗಿಯಾಗಲಿದ್ದಾರೆ” ಎಂದು ಅವರು ತಿಳಿಸಿದರು.
೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಂಗಳು ಸಮಾವೇಶಗೊಂಡಿದ್ದರೆಂಬುದು ಒಂದು ಇತಿಹಾಸ. ಅದೇ ರೀತಿ ೨೧ ನೇ ಶತಮಾನದಲ್ಲಿ ಅಂತಹ ಒಂದು ಚಾರಿತ್ರಿಕ ಘಟನೆಗೆ ಸಾಕ್ಷಿ ಆಗಬೇಕೆಂಬ ಉದ್ದೇಶದಿಂದ ಫೆಬ್ರವರಿ ೧೬ನೇ ತಾರೀಕು ಭಾನುವಾರ ಅಸಂಖ್ಯ ಪ್ರಮಥ ಗಣಮೇಳ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಜಾತ್ಯತೀತ, ಪಕ್ಷಾತೀತವಾಗಿದ್ದು, ಬಸವಣ್ಣ ಅವರ ಆಶಯದಂತೆ ಈ ಗಣಮೇಳವನ್ನು ಸಂಘಟಿಸಿಸಲಾಗಿದೆ. ೨ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ. ಹಾವೆರಿಜಿಲ್ಲೆಯಿಂದ ೫೦೦ರಕ್ಕೂ ಹೆಚ್ಚುಜನರು ಈಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಬವಶಾಂತಲಿಂಗಸ್ವಾಮಿಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ನೆಹರು ಓಲೇಕಾರ, “ಜಾಗತಿಕ ಶಾಂತಿ ಮತ್ತು ಪ್ರಗತಿಗಾಗಿ ಶಿವಯೋಗ ಸಂಭ್ರಮ, ಅಸಂಖ್ಯ ಪ್ರಮಥರ ಗಣಮೇಳ ಮತ್ತು ಸರ್ವಶರಣರ ಸಮ್ಮೇಳನ ಅದ್ಬುತ ಕಾರ್ಯಕ್ರಮವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಣೇಬೆನ್ನೂರಿನ ವಿರಕ್ತಮಠದ ಗುರುಬಸವಶ್ರೀ ಹಾಜರಿದ್ದರು.