Kourava News

ಬಿಜೆಪಿ ಅಲ್ಪಸಂಖ್ಯಾತ ರಾಜ್ಯಮೋರ್ಚಾಕ್ಕೆ ಅಲ್ಲಾಭಕ್ಷ ತಿಮ್ಮಾಪುರ ನೇಮಕ

ಬಿಜೆಪಿ ಅಲ್ಪಸಂಖ್ಯಾತ ರಾಜ್ಯಮೋರ್ಚಾಕ್ಕೆ ಅಲ್ಲಾಭಕ್ಷ ತಿಮ್ಮಾಪುರ ನೇಮಕ
ಹಾವೇರಿ : ೨೦೨೦-೨೩ನೇ ಸಾಲಿಗೆ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸದಸ್ಯರನ್ನಾಗಿ ಹಾವೇರಿಯ ಅಲ್ಪಸಂಖ್ಯಾತ ಸಮುದಾಯದ ಮುಖಂಡ, ಹಾವೇರಿಜಿಲ್ಲಾ ವಕ್ಫ ಸಲಹಾ ಸಮಿತಿಯ ಮಾಜಿ ಛೇರಮನ್ನರಾದ ಅಲ್ಲಾಭಕ್ಷ ತಿಮ್ಮಾಪುರ ಅವರನ್ನು ನೇಮಿಸಿ ಪಕ್ಕದ ಅಲಸಂಖ್ಯಾತ ಮೋರ್ಚಾ ಅಧ್ಯಕ್ಷ ಮುಜ್ಹಾಮಿಲ್ ಅಹ್ಮದ್ ಬಾಬು ಆದೇಶ ಹೊರಡಿಸಿದ್ದಾರೆ.
ಅಲ್ಲಾಭಕ್ಷ ತಿಮ್ಮಾಪುರ ಅವರು ಹಾವೇರಿಜಿಲ್ಲಾ ವಕ್ಫ ಸಲಹಾ ಸಮಿತಿಯ ಛೇರಮನ್ನರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಜನಾನುರಾಗಿಯಾಗಿದ್ದರು. ಪರಿಸರ ಪ್ರೇಮಿಯಾಗಿರುವ ತಿಮ್ಮಾಪುರ ಅವರು ತಮ್ಮ ಸ್ನೇಹಿತರನ್ನು ಸೇರಿಸಿಕೊಂಡು ನಗರದ ವಿವಿಧ ಬಡಾವಣೆಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಅವುಗಳ ರಕ್ಷಣೆಗೆ ಶ್ರಮಿಸುತ್ತಾ , ಅಂಧ-ಅನಾಥರ ಸೇವೆಯಲ್ಲಿಯು ಸಹ ತಮ್ಮನ್ನು ತೊಡಗಿಕೊಳ್ಳುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಅಲ್ಲಾಭಕ್ಷ ತಿಮ್ಮಾಪುರ ನಿರ್ವಹಿಸುತ್ತಿದ್ದಾರೆ.