ದೊಡ್ಡಕೆರೆ ಸನಿಹದಲ್ಲಿ ಸಣ್ಣ ಕೊಳಚೆ ಹೊಂ
ರಾಣೆಬೆನ್ನೂರು: ಇಲ್ಲಿನ ರಂಗನಾಥ್ ನಗರದ ಗೂಡ್ ಶೆಡ್ ರೋಡ್ ಪಕ್ಕದಲ್ಲಿ ಕಾಲುವೆ ನಿರ್ಮಾಣ ಮಾಡುತ್ತಿದ್ದು ಈ ಕಾಲುವೆ ಕೊಳಚೆ ನೀರನ್ನು ರೇಲ್ವೆ ಹಳಿ ಪಕ್ಕದ ಗುಂಡಿಗೆ ಬಿಟ್ಟಿದರಿಂದ ಗುಂಡಿ ತುಂಬಿ ಕೊಳಚೆ ಹೊಂಡ ವಾಗಿ ಮಾರ್ಪಾಟಾಗಿದೆ.
ಈ ಹೊಂಡದ ಅಕ್ಕಪಕ್ಕ ಮನೆಗಳಿದ್ದು, ರೈಲ್ವೆ ಸ್ಟೇಷನ್ ಇದ್ದು ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ. ಸನಿಹದಲ್ಲಿಯೇ ದೊಡ್ಡಕೆರೆ ಇರುವುದರಿಂದ ಪಕ್ಕದಲ್ಲಿ ಕೊಳಚೆ ಹೊಂಡ ನಿರ್ಮಾಣವಾಗಿದೆ.
ನಗರಸಭೆಯವರು ಕೂಡಲೇ ಇತ್ತ ಕಡೆ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಕೊರಿದ್ದಾರೆ.