Kourava News

ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಅರ್ಜಿ ಆಹ್ವಾನ

ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಅರ್ಜಿ ಆಹ್ವಾನ
ಹಾವೇರಿ: ಕರ್ನಾಟಕ ಸಾಹಿತ್ಯ ಅಕಾಡೆಮಿಯು ೨೦೨೧ರ ಮಾರ್ಚ ತಿಂಗಳಲ್ಲಿ ಎಂ.ಗೋಪಾಲಕೃಷ್ಟ ಅಡಿಗರ ಜನ್ಮಶತಮಾನೋತ್ಸವ ನೆನಪಿಗಾಗಿ ‘ಗೋಪಾಲಕೃಷ್ಣ ಅಡಿಗ ಮತ್ತು ಕನ್ನಡ ಸಾಹಿತ್ಯ’ ಎಂಬ ವಿಷಯದಡಿ ರಾಷ್ಟ್ರೀಯ ವಿಚಾರ ಸಂಕೀರಣ ಹಮ್ಮಿಕೊಳ್ಳಲಾಗಿದೆ.
ಈ ವಿಚಾರ ಸಂಕಿರಣದಲ್ಲಿ ಪರ್ಯಾಯ ಗೋಷ್ಠಿಗಳು ನಡೆಯಲಿದ್ದು, ವಿಚಾರ ಸಂಕಿರಣದಲ್ಲಿ ಭಾಗವಹಿಸುವವರು ಅರ್ಜಿ ಸಲ್ಲಿಸಬೇಕು ಮತ್ತು ಪರ್ಯಾಯ ಗೋಷ್ಠಿಯಲ್ಲಿ ಅಡಿಗರ ಸಾಹಿತ್ಯ ಕುರಿತಾಗಿ ಪ್ರಬಂಧ ಮಂಡಿಸುವವರು ಅರ್ಜಿಯೊಂದಿಗೆ ಪ್ರಬಂಧವನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಫೆ.೨೫ ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‌ಸೈಟ್ www.karnatakasahityaacademy.org  ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.