ಹಾವೇರಿ: ಕೋವಿಡ್ ಲಾಕ್ಡೌನ್ ಕಾರಣದಿಂದ ತೊಂದರೆಯಲ್ಲಿರುವ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿರುವ ಕಾರ್ಮಿಕರಿಗೆ ವಿತರಣೆ ಮಾಡಲು ಸರ್ಕಾರದಿಂದ ನಾಲ್ಕು ಸಾವಿರ ಕಿಟ್ಗಳು ಬಂದಿದ್ದು, ವಿವಿಧ ಕ್ಷೇತ್ರದ ಕಾರ್ಮಿಕರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ರಾದ ನೆಹರು ಓಲೇಕಾರ ಅವರು ತಿಳಿಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲೆಗೆ ಬಂದಿರುವ ನಾಲ್ಕು ಸಾವಿರ ಕಿಟ್ಗಳ ಪೈಕಿ ಈಗಾಗಲೇ ೪೦೦ ಕಿಟ್ ವಿತರಣೆ ಮಾಡಲಾಗಿದೆ. ಇನ್ನುಳಿದ ಕಿಟ್ಗಳನ್ನು ಇನ್ನೆರಡು ದಿನಗಳಲ್ಲಿ ಅರ್ಹರಿಗೆ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಮೇ.೨೬ರಂದು ಪೌರ ಕಾರ್ಮಿಕರಿಗೆ, ಸರ್ಕಾರಿ ಆಸ್ಪತ್ರೆಯ ಹೊರಗುತ್ತಿಗೆ ಕಾರ್ಮಿಕರಿಗೆ, ಮಹಿಳಾ ಟೈಲರ್ ಹಾಗೂ ಛಾಯಾಗ್ರಾಹಕರಿಗೆ,ಇತರ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶಂಕರ್ ಜಿ.ಎಸ್, ಸಗರಸಭೆ ಆಯುಕ್ತ ಬಸವರಾಜ ಜಿದ್ದಿ, ನಗರ ಸಭೆ ನಾಮನಿರ್ದೇಶಿತ ಸದಸ್ಯರಾದ ಬಾಬುಸಾಬ್ ಮೋಮಿನಗಾರ, ಶಿವರಾಜ ಮತ್ತಿಹಳ್ಳಿ, ಸವಣೂರ ತಾಲೂಕ ಪಂಚಾಯತ್ ಅಧ್ಯಕ್ಷರಾದ ತಿಪ್ಪಣ್ಣ ಸುಬ್ಬಣ್ಣನವರ, ಶ್ರೀಕಾಂತ ಪೂಜಾರ, ಮಂಜುನಾಥ ಮಡಿವಾಳರ, ಚಂದ್ರಹಾಸ್ ಕ್ಯಾತಣ್ಣನವರ, ನಗರಸಭೆ ಸದಸ್ಯರಾದ ಗಿರೀಶ ತುಪ್ಪದ, ಜಗದೀಶ ಮಲಗೋಡ ಹಾಗೂ ಕೃಷ್ಣ ಈಳಗೇರ,ಹನುಮಂತಪ್ಪ ಬಂಡಿ ಒಡ್ಡರ , ರಾಜು ಕನವಳ್ಳಿ, ಮಂಜು ಇಟಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.