Kourava News

ಹಾವೇರಿ ಜಿಲ್ಲೆಯಲ್ಲಿ ಮೇ ೩೧ ರವರೆಗೆ ನಿಷೇಧಾಜ್ಞೆ ಮುಂದುವರಿಕೆ, “ಭಾನುವಾರ ಪೂರ್ಣ ಲಾಕ್‌ಡೌನ್- ಮಾಸ್ಕ್ ಧರಿಸುವುದು ಕಡ್ಡಾಯ”

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿಆದೇಶ

ಹಾವೇರಿ: ಕೊರೊನಾ ವೈರಸ್ ರೋಗ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಿದ ನಿಷೇಧಾಜ್ಞೆಯನ್ನು ಮೇ ೩೧ರ ವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ಆದೇಶ ಹೊರಡಿಸಿದ್ದಾರೆ.
ಕೋವಿಡ್-೩೧ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಪ್ರತ್ಯೇಕತೆ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನಿಷೇಧಾಜ್ಞೆ ಅವಧಿಯಲ್ಲಿ ಸಾರ್ವಜನಿಕರು ಐದು ಕ್ಕಿಂತ ಹೆಚ್ಚು ಜನ ಗುಂಪಾಗಿ ಸೇರುವುದನ್ನು ನಿಷೇಧಿಸಿದೆ. ತುರ್ತು ವೈದ್ಯಕೀಯ ಕಾರಣ ಅಥವಾ ಇತರೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಂತರ್ ರಾಜ್ಯಕ್ಕೆ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರು ಪ್ರಯಾಣಿಸಲು ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯ ಅನುಮತಿ ಪಡೆಯಬೇಕು. ಪ್ರತಿದಿನ ಸಂಜೆ ೭-೦೦ ಗಂಟೆಯಿಂದ ಬೆಳಿಗ್ಗೆ ೭-೦೦ ಗಂಟೆಯವರೆಗೆ ಎಲ್ಲಾ ಚಟುವಟಿಕೆಗಳ ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಭಾನುವಾರದಂದು ಹೆಚ್ಚುವರಿಯಾಗಿ ಎಲ್ಲಾ ಅವಶ್ಯಕವಲ್ಲದ ಚಟುವಟಿಕೆಗಳ ವ್ಯಕ್ತಿಗಳ ಸಂಚಾರವನ್ನು ನಿಷೇಧಿಸಿದೆ. ( ಭಾನುವಾರದಂದು ಪೂರ್ಣ ದಿನದ ಲಾಕ್ ಡೌನ್ ಇರುತ್ತದೆ.)
ಜಿಲ್ಲೆಯಲ್ಲಿನ ಎಲ್ಲಾ ಶಾಲಾ ಕಾಲೇಜುಗಳು/ ಶೈಕ್ಷಣಿಕ ಹಾಗೂ ತರಬೇತಿ ಸಂಸ್ಥೆಗಳನ್ನು ಮತ್ತು ಕೋಚಿಂಗ್ ಸೆಂಟರ್ ಗಳನ್ನು ತೆರೆಯುವುದನ್ನು ನಿರ್ಬಂಧಿಸಿದೆ. ಅದಾಗ್ಯೂ ಆನ್ ಲೈನ್ ಮತ್ತು ದೂರ ಶಿಕ್ಷಣ ದ ಮೂಲಕ ತರಬೇತಿ/ ಶಿಕ್ಷಣ ನೀಡಬಹುದಾಗಿದೆ. ಕೋವಿಡ್-೧೯ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಹಾಗೂ ಪ್ರವಾಸಿಗರಿಗೆ ಅಥವಾ ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿಗಳಿಗೆ ಮೀಸಲಿರಿಸಿರುವ ಅತಿಥಿ ಗೃಹಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅತಿಥಿ ಗೃಹಗಳು/ ಲಾಡ್ಜ ಗಳು/ ರೆಸಾರ್ಟ್ ಗಳು/ ಹೊಂ ಸ್ಟೆಗಳನ್ನು ತೆರೆಯುವುದನ್ನು ನಿಷೇಧಿಸಿದೆ. ಆದಾಗ್ಯೂ ಸಾರ್ವಜನಿಕರಿಗೆ ಹೋಟೆಲ್ ಗಳಲ್ಲಿ ಪಾರ್ಸಲ್ ಸೇವೆಯನ್ನು ಮಾತ್ರ ನಿಯಮಾನುಸಾರ ಮುಂದುವರೆಸಬಹುದಾಗಿದೆ.
ಜಿಲ್ಲೆಯಾದ್ಯಂತ ಚಿತ್ರಮಂದಿರ, ಎಲ್ಲಾ ರೀತಿಯ ಕ್ಲಬ್ ಗಳು, ನಾಟಕ ಪ್ರದರ್ಶನ, ಶ್ಯಾಪಿಂಗ್ ಮಾಲ್, ಜಿಮ್ ಸೆಂಟರ್, ಬೇಸಿಗೆ ಶಿಬಿರ ಕ್ರೀಡಾ ಸಮುಚ್ಚಯಗಳು, ಈಜು ಕೊಳಗಳು, ಮನರಂಜನಾ ಪಾರ್ಕ್ ಗಳು, ಬಾರ್ ಗಳು, ಆಡಿಟೊರಿಯಂಗಳನ್ನು ತೆರೆಯಲು ಅನುಮತಿಸಲಾಗಿದೆ. ಆದರೆ ಪ್ರೇಕ್ಷಕರಿಗೆ ಅನುಮತಿ ಇರುವುದಿಲ್ಲ. . ಧಾರ್ಮಿಕ ಸ್ಥಳಗಳಿಗೆ/ ಪ್ರಾರ್ಥನಾ ಮಂದಿರಗಳಿಗೆ/ ಚರ್ಚ್/ ಗುರುದ್ವಾರಗಳಲ್ಲಿ ಸಾರ್ವಜನಿಕ ಪ್ರಾರ್ಥನೆ/ ಧರ್ಮ ಸಭೆ ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
೬೫ ವರ್ಷ ವಯಸ್ಕರು ಮತ್ತು ೧೦ ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರು ಓಡಾಡುವುದನ್ನು ನಿಷೇಧಿಸಿದೆ. ಅವಶ್ಯಕ ಸಂದರ್ಭದಲ್ಲಿ ಅಥವಾ ವೈದ್ಯಕೀಯ ಕಾರಣಗಳ ಮೇಲೆ ಮಾತ್ರ ಬರಬಹುದು. ಸಾರ್ವಜನಿಕ ಪಾರ್ಕ್ ಗಳನ್ನು ಬೆಳಗ್ಗೆ ೭-೦೦ ಗಂಟೆಯಿಂದ ಸಂಜೆ ೭-೦೦ ಗಂಟೆಯವರೆಗೆ ನಿಯಮಾನುಸಾರ ತೆರೆಯಲು ಅನುಮತಿಸಿದೆ.
ಪ್ರಯಾಣಿಕರ ವಾಹನಗಳು ಮತ್ತು ಬಸ್ ಗಳ ಅಂತರ್ ರಾಜ್ಯ ಚಲನೆ, ರಾಜ್ಯಗಳು / ಯು.ಟಿ. ಗಳ ಪರಸ್ಪರ ಒಪ್ಪಿಗೆಯೊಂದಿಗೆ ಅನುಮತಿಸಿದೆ. ಕೆ.ಎಸ್.ಆರ್.ಟಿ.ಸಿ / ಎನ್.ಇ.ಕೆ.ಆರ್.ಟಿ.ಸಿ./ ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಅಂತರ್ ರಾಜ್ಯ ಸಂಚಾರಕ್ಕೆ ಮುಂಚಿತವಾಗಿ ಸಂಬಂಧಿಸಿದ ರಾಜ್ಯಗಳ ಯು.ಟಿ.ಗಳ ಒಪ್ಪಿಗೆಯನ್ನು ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಅನುಮತಿ ಪಡೆಯತಕ್ಕದ್ದು. ರಾಜ್ಯಾದ್ಯಂತ ಪ್ರವಾಸಿ ವಾಹನಗಳು ರೈಲುಗಳು ಮತ್ತು ಬಸ್ಸುಗಳು ಒಳಗೊಂಡಂತೆ ಸಾರಿಗೆ ಬಸ್ ಸೇವೆ ಮುಫೋಸಿಲ್ ಬಸ್ ಸರ್ವಿಸ್, ಸಬ್ ಅರ್ಬನ್ ರೈಲು ಸೇವೆಗಳು ಮತ್ತು ಖಾಸಗಿ ಬಸ್ ಗಳು ಸಾಮಾಜಿಕ ಅಂತರ ಕ್ರಮಗಳನ್ನು ಕೈಗೊಂಡು ಸಂಚರಿಸಲು ಅನುಮತಿಸಿದೆ. ಜನರ ಮತ್ತು ವಾಹನದ ಅಂತರ್ ಜಿಲ್ಲಾ ಸಂಚಾರಕ್ಕೆ ಯಾವುದೇ ಪಾಸ್ ಅಗತ್ಯವಿಲ್ಲ.
ವ್ಯಕ್ತಿಗಳ ಚಲನೆಗಾಗಿ Sಣಚಿಟಿಜಚಿಡಿಜ ಔಠಿeಡಿಚಿಣiಟಿg Possessoಡಿ ನಂತೆ ಕಾರ್ಯನಿರ್ವಹಿಸುವುದು, ಕಂಟೈನ್ ಮೆಂಟ್ ನೋಟಿಫೈಡ್ ಏರಿಯಾಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನು ನಿರ್ಬಂಧಿಸಿದೆ. ಯಾವುದೇ ವ್ಯಕ್ತಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ರ ಕಲಂ ೫೧ ಹಾಗೂ ಐ.ಪಿ.ಸಿ. ಸೆಕ್ಷನ್ ೧೮೮ರಡಿ ಶಿಕ್ಷೆಗೆ ಒಳಪಡುತ್ತಾರೆ. ಜಿಲ್ಲಾದ್ಯಂತ ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿ (ಎಸ್.ಓ.ಪಿ.) ಅನ್ವಯ ಸಲೂನ್ ಹಾಗೂ ಬ್ಯೂಟಿ ಪಾರ್ಲರ್ ಗಳನ್ನು ಆರಂಭಿಸಲು ಅನುಮತಿ ನೀಡಿದೆ. ಜಿಲ್ಲಾದ್ಯಂತ ಸಾಮಾಜಿಕ ಅಂತರ ಕಾಯ್ದುಕೊಂಡು ಆಟೋ ರಿಕ್ಷಾದಲ್ಲಿ ಡ್ರೈವರ್ ಸೇರಿ ೨ ಪ್ರಯಾಣಿಕರು ಮತ್ತು ಟ್ಯಾಕ್ಸಿಯಲ್ಲಿ ಡ್ರೈವರ್ ಸೇರಿ ೨ ಪ್ರಯಾಣಿಕರು ಮಾತ್ರ ನಿಯಮಾನುಸಾರ ಪ್ರಯಾಣಿಸಲು ಅನುಮತಿ ನೀಡಿದೆ
ಈ ನಿಯಮ ಪಾಲಿಸಿ: ಎಲ್ಲಾ ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಮೂಲಕ ಹೊರಡಿಸಲಾದ ಮಾರ್ಗಸೂಚಿಗಳ ಪ್ರಕಾರ ಸಾವ?ಜನಿಕ ಸ್ಥಳಗಳಲ್ಲಿ ಸಾರಿಗೆ ಸಂದರ್ಭಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳುವುದು, ಸಂಸ್ಥೆಗಳು/ ಸಾರ್ವಜನಿಕ ಸ್ಥಳಗಳ ವ್ಯವಸ್ಥಾಪಕರು ೦೫ ಅಥವಾ ಹೆಚ್ಚಿನ ಜನಗಳ ಸೇರುವಿಕೆಗೆ ಅವಕಾಶ ನೀಡಬಾರದು. ವಿವಾಹ ಕಾರ್ಯಕ್ರಮದಲ್ಲಿ ಉಲ್ಲೇಖ (೭)ರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ನಡೆಸಲು ಅನುಮತಿ ನೀಡಿದೆ. ವಿವಾಹ ಸಮಾರಂಭ ನಡೆಸಲು ಅನುಮತಿಗಾಗಿ ತಾಲ್ಲೂಕು ಕಛೇರಿಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ತಹಶೀಲ್ದಾರ್ ರಿಗೆ ಈ ಬಗ್ಗೆ ಮುಚ್ಚಳಿಕೆ ನೀಡುವುದು ಕಡ್ಡಾಯವಾಗಿದೆ. ಶವ ಸಂಸ್ಕಾರದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು, ಹಾಗೂ ೨೦ ಕ್ಕಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಪಾನ್ ಬಿಡಾ, ಗುಟಕಾ ಹಾಗೂ ತಂಬಾಕು ಸೇವೆನೆಯನ್ನು ನಿಷೇಧಿಸಿದೆ. ಮದ್ಯ ಮಾರಾಟ ಅಂಗಡಿ, ಪಾನ್/ ಬಿಡಾ/ ಗುಟಕಾ/ ತಂಬಾಕು ಮಾರಾಟದ ಅಂಗಡಿಗಳ ಬಳಿ ಕನಿಷ್ಟ ೦೬ ಅಡಿ ಅಂತರ ಕಾಪಾಡುವುದು ಹಾಗೂ ಅಂಗಡಿಗಳ ಬಳಿ ೦೫ ಜನಕ್ಕಿಂತ ಹೆಚ್ಚಿನ ಜನ ನಿಲ್ಲದಂತೆ ಮಾಲಿಕರು ಕ್ರಮ ವಹಿಸಲು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.