Kourava News

ಅಗಡಿ ಮೂಲದ  ಪೊಲೀಸ್ ಪೇದೆ ಮುಸ್ತಾಕ್ ಕ್ವಾಟಿನಾಯ್ಕ್ ಬಂಧನ

 ಅಗಡಿ ಮೂಲದ  ಪೊಲೀಸ್ ಪೇದೆ ಮುಸ್ತಾಕ್ ಕ್ವಾಟಿನಾಯ್ಕ್ ಬಂಧನ
ಹಾವೇರಿ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ)
ಹುದ್ದೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಜ.೨೬ರಂದು ಹಾವೇರಿ ತಾಲೂಕಿನ
ಅಗಡಿಗ್ರಾಮದಲ್ಲಿ ಬಂಧಿಸಲಾಗಿರುವ ಬೆಂಗಳೂರಿನ ಸಿಟಿ ರಿಜರ್ವ ಪೊಲೀಸ್ ಪೇದೆ ಯನ್ನು ಮುಸ್ತಾಕ್ ಕ್ವಾಟಿನಾಯ್ಕ್ ಎಂದು ತಿಳಿದುಬಂದಿದೆ.
ಗೃಹಸಚಿವರ ತವರು ಜಿಲ್ಲೆ ಹಾಗೂ ಉಸ್ತುವಾರಿ ಜಿಲ್ಲೆಯಾಗಿರುವ ಹಾವೇರಿತಾಲೂಕಿನ
ಅಗಡಿಗ್ರಾಮದಲ್ಲಿದ್ದ ಮುಸ್ತಾಕ್ ಕ್ವಾಟಿನಾಯ್ಕ್ ಬಂಧಿಸಿರುವ ಬಗ್ಗೆ ಸಿಸಿಬಿ
ತನಿಖಾತಂಡದ ಮುಖ್ಯಸ್ತರು ಖಚಿತಪಡಿಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋUದ
ಸ್ಟೆನೋಗ್ರಾಫರ್ ಸನಾ ಬೇಡಿ ಅವರ ಸ್ನೇಹಿತ ಮತ್ತು ಎಫ್ಡಿಎ ಪರೀಕ್ಷೆಯ
ಅಭ್ಯರ್ಥಿಯಾಗಿದ್ದ ಮುಸ್ತಾಕ್ ಕ್ವಾಟಿನಾಯ್ಕ್ ಅವರನ್ನು  ಬಂಧಿಸಿ ಹೆಚ್ಚಿನ ತನಿಖೆಗೆ
ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಅಗಡಿ ಮೂಲದ  ಪೊಲೀಸ್ ಪೇದೆ ಮುಸ್ತಾಕ್ ಕ್ವಾಟಿನಾಯ್ಕ್ ಬಂಧನ ಬಗ್ಗೆ ಕೌರವಪತ್ರಿಕೆಯು
ಬುಧವಾರದ ಸಂಚಿಕೆಯಲ್ಲಿ ಬ್ಯಾನರ್ ಲೀಡ್ ಸುದ್ದಿಯನ್ನಾಗಿ ಪ್ರಕಟಿಸಿದ್ದನ್ನು ಇಲ್ಲಿಗಮನಿಸಬಹುದಾಗಿದೆ.