Kourava News

ಕಾಮ್ರೆಡ್ ರುದ್ರಪ್ಪ ಜಾಬೀನ್ @ ೮೫……….

ರುದ್ರಪ್ಪ ಜಾಬೀನ ಅನ್ನುವುದಕ್ಕಿಂತ ಕಾಮ್ರೆಡ್ ರುದ್ರಪ್ಪ ಜಾಬೀನ ಅಂದರೆ ಎಲ್ಲರಿಗು ಚೆಕಗಕನೆ ಹೊಳೆಯುವ ವ್ಯಕ್ತತ್ವ ರುದ್ರಪ್ಪ ಅವರದು.
ರುದ್ರಪ್ಪ ಸಂಗಪ್ಪ ಜಾಬೀನರಿಗೆ ಈಗ ೮೫ ರ ಹರೆಯ. ೦೮-೦೪-೧೯೩೫ ಹಾವೇರಿಯಲ್ಲಿ ಜನನ. ೪ ಜನ ತಮ್ಮಂದಿರು. ಈಗತ ಒಬ್ಬರೂ ಬದುಕಿಲ್ಲ. ಅಕ್ಕ ಪಾರ್ವತಮ್ಮ ಹತ್ತಿಕಾಳ ಮಾತ್ರ. ಕುಟುಂಬದ ಇನ್ನೊಂದು ಕುಡಿ.
ಯಾವಾಗಲೂ ಹೆಗಲ ಮೇಲೊಂದು ಕೆಂಪು ವಸ್ತ್ರ. ಎಂತಹ ದೊಡ್ಡ ಸಭೆಯೆ ಇರಲಿ ರುದ್ರಪ್ಪ ಬಂದಾರೋ ಇಲ್ಲ ಎಂಬುದನ್ನು ಅವರ ಕೆಂಪು ವಸ್ತ್ರದಿಂದ ಗುರುತಿಸ ಬಹುದು. ಅಷ್ಟು ಅಚ್ಚು ಒತ್ತಿದ ವ್ಯಕ್ತಿತ್ವ. ಯಾವ ಸಭೆಯೇ ಇರಲಿ, ಯಾರೇ ಕರೆಯಲಿ ಅಲ್ಲಿ ಕೆಂಪು ನಿಶಾನೆಯ ರುದ್ರಪ್ಪ ಖಾತ್ರಿ ಹಾಜರ್. ಮುಂದಿನ ಸಾಲಿನಲ್ಲಿಯೇ ಕುಳಿತು, ಇಡೀ ಸಭೇಯ ಎಲ್ಲ ಬಾಷಣಗಳನ್ನು ಕೇಳಿ ಸಂಯೋಜಕರಿಗೆ ಥ್ಯಾಂಕ್ಸ್ ಹೇಳಿ ಹೋಗುವ ಸಹೃದಯಿ.
ಇಂದಿನ ರಾಜಕಾರಣದಲ್ಲಿ ಕಮ್ಯುನಿಷ್ಟ ಪಕ್ಷ, ಶಕ್ತಿ ರಾಜಕಾರಣದಲ್ಲಿ ಅಷ್ಟಕಷ್ಟೆ. ಆದರೆ ಅದರ ಪಯುಳಕೆ ಎಂಬಂತೆ ಏಕೈಕ ಪ್ರತಿನಿಧಿ ರುದ್ರಪ್ಪ ಜಾಬೀನ್. ಭಾರತದ ಯಾವ ಮೂಲೆಯಲ್ಲಿಯೆ ಪಕ್ಷದ ಸಭೆ, ಪ್ರತಿಭಟನೆ, ರದಯಾಲಿ ನಡೆದರೂ ಅಲ್ಲಿ ಹಾಜರ್. ಅಲ್ಲಿ ನಡೆಯುವ ಎಲ್ಲ ಚರ್ಚೆ ಮಾತುಕತೆ, ವ್ಯಕ್ತಿಗಳ ಭೇಟಿ ಅಲ್ಲಿಯ ಕರಪತ್ರಗಳ, ಸುದ್ಧಿ ಪತ್ರಿಕೆಗಳು ಹಾವೇರಿಗೆ ಬರಲೇ ಬೇಕು, ಗೆಳೆಯರಿಗೆ ತೋರಿಸಲೇ ಬೇಕು.
ಕಾಲು ಮಣ ಭಾರದ ಚರ್ಮದ ಚೀಲ ಸದಾ ಕೈಯಲ್ಲಿ. ಬೆನ್ನಟ್ಟುವ ಕರಿ ಛತ್ರಿ ಬೆನ್ನ ಹಿಂದೆ, ತಲೆ ಮೇಲೆ ಗಾಂಧೀ ಟೋಪಿ, ಶುಭ್ರ ಬಟ್ಟೆ ಹಣೆಗೆ ವಿಭೂತಿ, ನಿಧಾನ ನಡೆ, ಕೈ ಹಿಡಿದು ಮಾತನಾಡಿಸುವ ಆತ್ಮೀಯ ಮಾತುಕತೆ, ಖುಷಿಯ ತುಂಬು ನಗೆಯ ಒಂಟಿ ಜೀವಿ. ಯಾವ ಬೈಕ್ ಕಾರು ನಂಬದೇ ಕಾಲ್ನಡಿಗೆಯ ಸಂಚಾರಿ. ಯಾವ ಸಭೆಗಾದರು ಸಮಯಕ್ಕೆ ಬದ್ಧ. ಸಭೆ ತಡವಾಗಿ ಆರಂಭವಾದರೆ- ಯಾಕ್ ಲೇಟ್ ಮಾಡ್ತರಿ ? ಅವ್ರು ಬರದಿದ್ರ ಏನಾತು ? ಆಮೇಲ ಬರ್ಲಿ ಬಿಡ್ರಿ ಎಂದು ಸಣ್ಣನೆಯ ತಕರಾರು ಇದ್ದದ್ದೆ.
ರುದ್ರಪ್ಪನವರಿಗೆ ೪ ಜನ ಮಕ್ಕಳು. ದಿ ಶಿವರಾಜ ಪತ್ರಕರ್ತರಾಗಿದ್ದರು. ಅಕಾಲಿಕವಾಗಿ ನಿಧನರಾದರು. ಇನ್ನುಳಿದಂತೆ ಸಿದ್ದರಾಜ, ಶಂಕರರಾ, ಹಾಗೂ ಬಸವರಾಜ ಇನ್ನಿತರ ಮಕ್ಕಳು. ಇವರುಗಳು ಸಹ ಸಕ್ರಿಯವಾಗಿ ಸಮಾಜದ ಎಲ್ಲ ಸೇವೆಯಲ್ಲಿ ತೊಡಗಿದವರು.
ಶ್ರೀಮತಿ ಮಮತಾ ಜಾಬಿನ ಸಮಾಜ ಸೇವೆಯಲ್ಲಿ ಹೆಚ್ಚು ಮುಂಚೂಣೆಯಲ್ಲಿದ್ದವರು. ಅನೇಕ ವಿಧಾಯಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಸಹಜ ನಡೆನುಡಿಯಿಂದ ಜನಮನ ಗೆದ್ದವರು. ಇನ್ನೋರ್ವ ಸೊಸೆ ಶ್ರೀಮತಿ ಗೌರಮ್ಮ ಶಂಕರಾಜ ಜಾನಪದ ಹಾಡುಗಾರ್ತಿ. ತುಂಬ ಅದ್ಭುತ ಕಂಠಶ್ರೀ ಹೊಂದಿದ ಹಾಡುಗಾರ್ತಿ. ಅದರಂತೆ ಜಯಮ್ಮ ಸಿದ್ದರಾಜ ಜಾಬೀನ್ ಕೂಡ ಸಕ್ರಿಯವಾಗಿ ಕುಟುಂಬ ಮತ್ತು ಸಮಾಜದಲ್ಲಿ ತಮ್ಮನ್ನೇ ತಾವು ಗುರುತಿಸಿಕೊಂಡವರು.
ಕಳೆದ ೩೪ ವರ್ಷಗಳಿಂದ ಮಕಾನ್ ಗಲ್ಲಿ ಮತ್ತು ಗಾಂಧಿ ಮಾರ್ಕೆಟ್ ನಲ್ಲಿ ಕಿರಾಣಿ ವ್ಯಾಪಾರಸ್ಥರಾಗಿರುವ ಬಸವರಾಜ ಜಾಬಿನ್ ರೇಣುಕ ಮಂದಿರ, ಬಣ್ಣದಮಠ, ಹುಕ್ಕೇರಿಮಠ ಮುಂತಾದ ಮಠಗಳಲ್ಲಿ ನಿರ್ದೇಶಕರಾಗಿ, ಸದಸ್ಯರಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಹಳ ಮುಖ್ಯವಾಗಿ ಯಾರಾದರೂ ತೀರೆ ಹೋದರೆ ಅವರ ಅಂತ್ಯ ಕ್ರಿಯೆಗೆ ಮೈತೊಳೆಯುವುದರಿಂದ ಹಿಡಿದು ಅಂತ್ಯ ಸಂಸ್ಕಾರದ ವರೆಗೂ ಸಹಾಯ ಹಸ್ತ ಚಾಚುವ ಸಮಾಜ ಪ್ರೀತಿಯ ಬಸವರಾಜರು.
ತುಂಬ ಸಂಸ್ಕಾರ ಹೊಂದಿದ ರುದ್ರಪ್ಪನವರು ಕರ್ನಾಟಕ ರಾಜ್ಯದ ಅನೇಕ ದೊಡ್ಡ ದೊಡ್ಡ ನಾಯಕರ ಜೊತೆಗೆ ನಿಕಟ ಬಾಂಧವ್ಯ ಹೊಂದಿದವರು. ಯಾರೇ ಬರಲಿ ಒಂದುಸಲ ನಿಂತು ರುದ್ರಪ್ಪನವರನ್ನು ಮಾತನಾಡಿಸದೆ ಹೋಗುವ ಮಾತೇ ಇಲ್ಲ. ಇದಕ್ಕೊಂದು ದೊಡ್ಡ ಉದಾಹರಣೆ ಎಂದರೆ ಕರ್ನಾಟಕದಲ್ಲಿ ಸಮಾಜವಾದಿ ಹೋರಾಟವನ್ನು ರೂಪಿಸಿದ ಶಾಂತವೇರಿ ಗೋಪಾಲಗೌಡರು.
ಮೈಸೂರಿನ ಡಾ. ಎಚ್.ಸಿ. ವಿಷ್ಣುಮೂರ್ತಿ ಗೋಪಾಲಗೌಡರ ಕುರಿತು ಒಂದು ಪುಸ್ತಕವನ್ನು ಪ್ರಕಟಿಸಿದ್ದಾರೆ. ಅದರ ಹೆಸರು ಗೋಪಾಲಗೌಡರ ಡೈರಿ. ನಿತ್ಯ ತಮ್ಮ ದಿನಚರಿಯನ್ನು ಬರೆಯುತ್ತಿದ್ದ ಗೋಪಾಲಗೌಡರು ಹಾವೇರಿಗೆ ಬಂದು ರುದ್ರಪ್ಪ ಜಾಬೀನ್‌ರನ್ನು ಭೇಟಿಯಾದ ಉಲ್ಲೇಖವಿದೆ. ಜೊತೆಗೆ ರಾಮಣ್ಣ ಕ್ಷೌರದ ಎಂಬ ಸಮಾಜವಾದಿ ಕುರಿತೂ ಉಲ್ಲೇಖವಿದೆ.
ಶಾಂತವೇರಿ ಗೋಪಾಲಗೌಡರು ಬಹು ದೊಡ್ಡ ಕ್ರಾಂತಿಕಾರಿ. ಊಳುವನೆ ಹೊಲದೊಡೆಯ ಎಂಬ ಹೋರಾಟಕ್ಕೆ ನಾಂದಿ ಹಾಡಿದವರು. ಒಂದು ಹಂತದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಅವಕಾಶ ಕೂಡ ಅವರಿಗೆ ಬಂದಿತ್ತು. ಶಿವಮೊಗ್ಗೆ ರಾಜಕಾರಣ ಗಣ್ಯಾತಿಗಣ್ಯರು ಬೆಳೆದದ್ದು ಇವರ ಪ್ರಬಾವದಿಂದ.ಅಷ್ಟೇಯಲ್ಲ ಗೋಪಾಲಕೃಷ್ಣ ಅಡಿಗ, ಪಿ.ಲಂಕೇಶ, ಡಾ. ಯು. ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಶ್ವಿ ಅವರುಗಳಿಗೆ ರಾಜಕೀಯ ಪ್ರಜ್ಞೆ ತುಂಬಿದವರು. ಇಂಥವರು ರುದ್ರಪ್ಪನವರ ಒಡನಾಡಿಯಾಗಿದ್ದರು.
ರುದ್ರಪ್ಪ ಜಾಬೀನ್ ಸರಕಾರಿಯ ಸಭೆಗಳಾದ ಪೊಲೀಸ ಶಾಂತ ಸಭೆ, ಮಠಮಾನ್ಯದ ಜಾತ್ರಾ ಸಭೆಗಳಿರಲಿ ಅಲ್ಲಿ ಸದಾ ಸಲಹೆಗಾರರು. ಹುಕ್ಕೇರಿಮಠ, ಹೊಸಮಠ, ಶಿಂದಗಿಮಠ, ಹೋಳಿ ಹಬ್ಬ, ರಂಜಾನ್, ಕ್ರಸ್‌ಮಸ್ ಎಲ್ಲ ಸಭೆಗಳಲ್ಲಿ ಆಮಂತ್ರಿತ ಅತಿಥಿ. ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದವರು.
ಇವೆಲ್ಲದರ ಜೊತೆಗೆ ತನ್ನ ನಂಬುಗೆ, ತತ್ವ ಸಿದ್ಧಾಂತವನ್ನು ಬಿಟ್ಟುಕೊಡದ ಗಟ್ಟಿಗ. ತಪ್ಪೆಂದು ಅನಿಸಿದರೆ ತಕ್ಕಣವೇ ಎದ್ದು ಪ್ರತಿಭಟಿಸುವ ಒಂಟಿಧ್ವನಿ. ಒಂದು ಸಾಹಿತ್ಯ ಸಮ್ಮೇಳದಲ್ಲಿ ಮಧ್ಯಾಹ್ನದ ಪ್ರಾರ್ಥನೆಯೊಂದು ಕೇಳಿ ಬಂದಾಗ, ಭಾಷಣಕಾರರು ತಮ್ಮ ಮಾತನ್ನು ನಿಲ್ಲಸಿ ಮೌನ ಸಮ್ಮತಿ ನೀಡಿದರು. ಆದರೆ ರುದ್ರಪ್ಪ ತಕ್ಷಣವೇ ನೀವು ಮಾತು ನಿಲ್ಲಿಸಬಾರದು ಇದು ಸಾಹಿತ್ಯ ಸಮ್ಮೇಳನ ಎಂದು ಒಬ್ಬಂಟಿಯಾಗಿ ದನಿಯತ್ತಿದರು.
ರಾಜಕೀಯ, ಆಡಳಿತ, ಪಕ್ಷರಾಜಕೀಯ, ಜನ ಹೋರಾಟಗಳ ನಡುವೆ ಕಾಲು ದಾರಿಯ ಒಬ್ಬಂಟಿ ಹೋರಾಟಗಾರ. ಈಗ ಅವರಿಗೆ ೮೫ ತುಂಬಿದೆ. ಧರ್ಮ ಪತ್ನಿ ಶ್ರೀಮತಿ ಕೊಟ್ರಮ್ಮನವರ ಸಾಂಗತ್ಯಕ್ಕೆ ೫೦ ತುಂಬಿವೆ. ಕೊರೋನಾ ಕಾರಣದಿಂದಾಗಿ ತುಂಬ ಸರಳವಾಗಿ ದಿ. ೦೮-೦೫-೨೦೨೦ ರಂದು ಮನೆಯಲ್ಲಿಯೇ ಸಮಾರಂಭವನ್ನು ಸಂತೋಷಿಸಿದ್ದಾರೆ. ನಾವೆಲ್ಲ ಶುಭ ಕೊರೋಣ.

ಸತೀಶ ಕುಲಕರ್ಣಿ
ಹಿರಿಯ ಸಾಹಿತಿಗಳು, ಹಾವೇರಿ