Kourava News

“ಗ್ರಾಮೀಣಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಾ.ಸಂಜಯ ಡಾಂಗೆ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಆರಂಭ”: ಡಾ.ಸಂಜಯ ಡಾಂಗೆ

“ಗ್ರಾಮೀಣಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಾ.ಸಂಜಯ ಡಾಂಗೆ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಆರಂಭ”: ಡಾ.ಸಂಜಯ ಡಾಂಗೆ
ಹಾವೇರಿ: ಹಾವೇರಿನಗರದಲ್ಲಿ ಡಾ.ಡಾಂಗೆ ನರ್ಸಿಂಗ್ ಹೋಮ್ ಮತ್ತು ಮಲ್ಟಿಸ್ಪೆಶ್ಯಾಲಿಟಿ ಆಸ್ಪತ್ರೆ ಆರಂಭಿಸಿ ೨೫ವರ್ಷ ಪೂರೈಸಿದ್ದು, ಬೆಳ್ಳಿಹಬ್ಬದ ಸವಿನೆನಪಿಗಾಗಿ ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿರುವ ಹಾವೇರಿಜಿಲ್ಲೆಯ ಗ್ರಾಮೀಣಭಾಗದ ವಿದ್ಯಾರ್ಥಿಗಳಿಗೆ ಉದ್ಯಾಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹಾವೇರಿನಗರದಲ್ಲಿ ಡಾ.ಸಂಜಯ ಡಾಂಗೆ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಆರಂಭಿಸಲಾಗಿದೆ. ಗ್ರಾಮೀಣಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಸಿಕೊಂಡು ಭವಿಷ್ಯ ರೂಪಿಸಿಕೊಳ್ಳವಂತೆ ಡಾ.ಸಂಜಯ ಡಾಂಗೆ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಕಾಲೇಜಿನ ಅಧ್ಯಕ್ಷ ಡಾ.ಸಂಜಯ ಡಾಂಗೆ ಕರೆ ನೀಡಿದರು.
ಇಲ್ಲಿನ ಅಶ್ವಿನಿನಗರದಲ್ಲಿ ಡಾ.ಸಂಜಯ ಡಾಂಗೆ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಕಾಲೇಜಿನ ಉದ್ಘಾಟನೆ ನೆರವೇರಿಸಿ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವ್ಯದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳಿವೆ. ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ, ಡಿಪ್ಲೋಮಾ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ, ಡಿಪ್ಲೋಮಾ ಇನ್ ಆಪರೇಷನ್ ಥಿಯೇಟರ್ ಮತ್ತು ಅನಸ್ತೇಶಿಯಾ ಟೆಕ್ನಾಲಜಿ, ಡಿಪ್ಲೋಮಾ ಇನ್ ಡಯಾಲಿಸಿಸ್ ಟೆಕ್ನಾಲಜಿ, ಡಿಪ್ಲೋಮಾ ಇನ್ ಆಪ್ತಾಲ್ಮಿಕ ಟೆಕ್ನಾಲಜಿ ಕೋರ್ಸಗಳನ್ನು ಆರಂಭಿಸಲಾಗಿದೆ. ಈಎಲ್ಲ ಕೋರ್ಸಗಳನ್ನು ಎಸ್.ಎಸ್.ಎಸ್.ಎಲ್. ಸಿ ಪಾಸಾದ ಯುವಕ-ಯುವತಿಯರು ಆಯ್ಕೆಮಾಡಿಕೊಳ್ಳಬಹುದಾಗಿದೆ. ಈಕೋರ್ಸಗಳನ್ನು ಮುಕ್ತಾಯಗೋಳಿಸಿದರೆ ಸರಕಾರಿ ಹಾಗೂ ಖಾಸಗಿ ವೈದ್ಯಕೀಯ ಕ್ಷೇತ್ರಗಳಲ್ಲಿ ಖಚಿತವಾಗಿ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ ಎಂದು ಅವರು ತಿಳಿಸಿದರು.
ನಮ್ಮ ಕಾಲೇಜಿನಲ್ಲಿ ಆರಂಭಿಸಲಾಗಿರುವ ಐದು ಕೋರ್ಸಗಳಿಗೆ ತಲಾಕೋರ್ಸಿಗೆ ೨೦ ರಂತೆ ಮೊದಲ ವರ್ಷವೆ ೧೦೦ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಶೀರ್ಘದಲ್ಲಿಯೇ ಬಿಎಸ್‌ಸಿ ನರ್ಸಿಂಗ್ ಕಾಲೇಜನ್ನು ಸಹ ಆರಂಭಿಸಲಾಗುವುದು. ಈ ಎಲ್ಲ ಕೋರ್ಸಗಳನ್ನು ಒಂದೇ ಸೂರಿನಡಿ ಹೊಂದಿರುವ ಹೆಮ್ಮೆ ನಮ್ಮದಾಗಿದೆ. ವಿದ್ಯಾರ್ಥಿಗಳು ಶೃದ್ಧೆಯಿಂದ ವಿದ್ಯಾಭ್ಯಾಸಮಾಡುವ ಮೂಲಕ ತಮ್ಮ ಭವಿಷ್ಯದ ಜೀವನವನ್ನು ರೂಪಿಸಿಕೊಂಡು ಹೆತ್ತವರ ಕನಸ ನನಸುಮಾಡಬೇಕು. ಈ ಕೋರ್ಸಗಳನ್ನು ಅಭ್ಯಾಸಮಾಡುವುದರಿಂದ ಉದ್ಯೋಗಾವಕಾಶಗಳು ಖಚಿತವಾಗಿ ಸಿಗುತ್ತವೆ. ವಿದ್ಯಾರ್ಥಿಗಳು ಶ್ರದ್ಧೆವಹಿಸಿ ಅಧ್ಯಯನಮಾಡುವಂತೆ ಡಾ.ಸಂಜಯ ಡಾಂಗೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಡಾ.ಲಿಲತಾ ಸಂಜಯ ಡಾಂಗೆ ಮಾತನಾಡಿ, ಹಾವೇರಿಯಲ್ಲಿ ಆರಂಭಿಸಲಾಗಿರುವ ಡಾ.ಸಂಜಯ ಡಾಂಗೆ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಕಾಲೇಜಿನಲ್ಲಿ ನುರಿತ ಉಪನ್ಯಾಸಕರಿದ್ದಾರೆ. ಅತ್ಯಾಧುನಿಕ ಲ್ಯಾಬ್‌ಗಳಿದ್ದು, ಈ ಕೋರ್ಸಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಂಡು ಸಂಸ್ಥೆ ಕೀರ್ತಿ ತನ್ನಿರಿ ಎಂದರು.
ಸಮಾರಂಭದಲ್ಲಿ ಡಾ.ಅಣ್ಣಯ್ಯ ಚಾವಡಿ, ಉಪನ್ಯಾಸಕರಾದ ಎಸ್.ಬಿ.ಪಾಟೀಲ, ಶೀಲಾ ದಾಸರ,ಅಶ್ವಿನಿ ಜೈನ್, ಗಣೇಶ ಮಾಂಡ್ರೆ, ಪ್ರೊ.ಈಶಪ್ಪ ಗಾಣೀಗೇರ ಸೇರಿದಂತೆ ವಿದ್ಯಾರ್ಥಿಗಳು, ಡಾ.ಡಾಂಗೆ ಆಸ್ಪತ್ರೆಯ ಸಿಬ್ಬಂದಿವರ್ಗದವರು ಹಾಜರಿದ್ದರು.