ಹಾವೇರಿ: ದಾರಿತಪ್ಪಿದ ಮೊಲದ ಮರಿಯೊಂದು ಇಲ್ಲಿನ ನಾಗೇಂದ್ರನಮಟ್ಟಿಯ ಶಾಂತಿನಗರದ ಜನವಸತಿ ಪ್ರದೇಶಕ್ಕೆ ಮೇ.೪ರಂದು ಸೋಮವಾರ ಬಂದಿತ್ತು. ಮೊಲದ ಮರಿ ಓಡಾತ್ತಿರುವುದನ್ನು ಗಮನಿಸಿದ ಪತ್ರಕರ್ತ, ವನ್ಯಜೀವಿ ಪ್ರೇಮಿ ವೀರೇಶ ಹ್ಯಾಡ್ಲ್ ಈಮೊಲದ ಮರಿಯನ್ನು ರಕ್ಷಿಸಿ ಅರಣ್ಯ ರಕ್ಷಕ ಕೃಷ್ಣಾ ನಾಯಕ್ ಅವರಿಗೆ ಕರೆಮಾಡಿದರು.
ಅರಣ್ಯ ಸಿಪಾಯಿ ಮೌಲಾಲಿ ರಾಮಾಪುರ ಶಾಂತಿನಗರಕ್ಕೆ ಬಂದು ಮೊಲದಮರಿಯನ್ನು ಪಡೆದು ಅದನ್ನು ಕರ್ಜಗಿಯ ರಕ್ಷಿತ ಅರಣ್ಯಕ್ಕೆ ಬಿಟ್ಟಿದ್ದಾರೆ. ನಾಯಿಗಳ ಪಾಲಾಗಬೇಕಾಗಿದ್ದ ಮೊಲದ ಮರಿ ಸದ್ಯಕ್ಕೆ ಸುರಕ್ಷಿತವಾಗಿ ಅರಣ್ಯ ಸೇರಿದೆ.