ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವಂತಹ ತೀರ್ಪು ಸ್ವಾಗತಿಸುತ್ತೇನೆ.
ಆದ್ದರಿಂದ ತಮ್ಮೆಲ್ಲರ ಅಪ್ಪಣೆ ಹಾಗೂ ಆರ್ಶಿವಾದದಿಂದ ನಾನು ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿನಲ್ಲಿರುವ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದೇನೆ. ಹಾಗೂ ಸಾಯಂಕಾಲ ೩ ಗಂಟೆಗೆ ಬೆಂಗಳೂರಿನಿಂದ ಹಿರೇಕೆರೂರ ತಾಲ್ಲೂಕಿಗೆ ಆಗಮಿಸುತ್ತಿದ್ದು. ತಾಲ್ಲೂಕಿನ ಬತ್ತೀಕೊಪ್ಪ ಕ್ರಾಸ್ ನಿಂದ ಹಿರೇಕೆರೂರನವರೆಗೆ ಬೈಕ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದು ಕಾರಣ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲ್ಲೂಕಿನ ಕಾರ್ಯಕರ್ತರು ಅಭಿಮಾನಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬ್ಯೆಕ್ ರ‍್ಯಾಲಿಯನ್ನು ಯಶಸ್ವಿಗೊಳಿಸಬೇಕೆಂದು ಸೇವಕ ಬಿ.ಸಿ.ಪಾಟೀಲ್ ಕೋರಿದ್ದಾರೆ.