Kourava News

ಮಾಸ್ ಬೇಸ್ ನಿಂದ ಕೆಡರ್ ಬೇಸ್‌ನತ್ತ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ಸಜ್ಜಾಗಿ

ಜಿಲ್ಲಾಕಾಂಗ್ರೆಸ್ ಮುಖಂಡರು-ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ


ಹಾವೇರಿ: ಕಾಂಗ್ರೆಸ್ ಪಕ್ಷ ಎಂದರೆ ಮಾಸ್ ಬೇಸ್ ಪಕ್ಷ ಎನ್ನುವುದರಿಂದ ಹೊ ರಬಂದು ನಾವು ಕಾಂಗ್ರೆಸ್ ಪಕ್ಷವನ್ನು ಕೆಡರ್ ಬೇಸ್ ಪಕ್ಷವನ್ನಾಗಿ ಸಂಘಟಿಸಬೇಕು. ಕಾರ್ಯಕರ್ತರು, ಮುಖಂಡರು ಇದ್ದಕ್ಕೆ ಸಜ್ಜಾಗಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕರೆ ನೀಡಿದರು.
ಮೇ.೨೮ರಂದು ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲಿ ಜೂನ್ -೭ರಂದು ಬೆಂಗಳೂರಲ್ಲಿ ನಡೆಯುವ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದ ಹಿನ್ನಲೆಯಲ್ಲಿ ನಡೆದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಇತಿಹಾಸ ಹಾಗೂ ಕಾಂಗ್ರೆಸ್ ಪಕ್ಷದ ಹಿನ್ನಲೆಯನ್ನು ಮರೆಮಾಚಿ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಪಕ್ಷದ ಮುಖವಾಡ ಕಳಚುವ ಮಟ್ಟಿಗೆ ಪಕ್ಷದ ಕಾರ್ಯಕರ್ತರನ್ನು ನಾವು ತಯಾರಿಸಬೇಕಾಗಿದೆ ಎಂದು ಅವರು ಹೇಳಿದರು.
ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಪಕ್ಷವನ್ನು ಸಂಘಟಿಸಬೇಕಾಗಿದೆ. ಸಾಮಾಜಿಕ ನ್ಯಾಯ ತತ್ವವನ್ನು ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ಶ್ರಮಿಸಬೇಕಾಗಿದೆ. ಅದಕ್ಕಾಗಿ ಹೆಚ್ಚು ಹೆಚ್ಚು ವಿಚಾರ ಸಂಕಿರಣಗಳನ್ನು, ತರಬೇತಿಗಳನ್ನು ನಡೆಸುವ ಮೂಲಕ ಪ್ರಬುದ್ಧ ಕಾರ್ಯಕರ್ತರ ಪಡೆಯನ್ನು ಕಟ್ಟಬೇಕಾಗಿದೆ. ಅಂದಾಗ ಸಾಮಾನ್ಯ ಪ್ರಜೆಗೆ ದೇಶ ಇತಿಹಾಸವನ್ನು ತಿಳಿಸಲು ಸಾಧ್ಯವಾಗುತ್ತದೆ ಎಂದು ಜಾರಕಿಹೊಳಿ ತಿಳಿಸಿದರು.
ಕಳೆದ ಎರಡು ತಿಂಗಳ ಹಿಂದೆ ನೇಮಕಗೊಂಡಿರುವ ಕೆಪಿಸಿಸಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂನ್ ೭. ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ರಾಜ್ಯಾದ್ಯಂತ ೮ ಸಾವಿರ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ೪ ಲಕ್ಷ ಜನರು ಈಕ್ರಾಮದಲ್ಲಿ ಭಾಗಿಯಾಗಲಿದ್ದಾರೆ . ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯದಂತೆ ಈ ಸಮಾರಂಭವನ್ನು ಅದ್ದೂರಿಯಾಗಿ ಮಾಡುವ ಚಿಂತನೆ ಇತ್ತು. ಆದರೆ ಕೊರೊನಾ ಸಂಕಷ್ಟ ಸಮಯದಲ್ಲಿ ಅಂತಹ ಸಮಾರಂಭ ಮಾಡಿದರೆ, ವಿರೋಧಿಗಳ ಟೀಕೆ ಎದುರಿಸಬೇಕಲಾಗುತ್ತದೆ ಎಂಬ ಕಾರಣದಿಂದ ಹಿರಿಯ ನಾಯಕರ ಸಲಹೆ ಮೇರೆ ಬರಿ ೨೦೦ ಜನರ ಸಮ್ಮುಖದಲ್ಲಿ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಆದರೆ, ಈ ಸಮಾರಂಭದಲ್ಲಿ ರಾಜ್ಯದ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಸಾಕ್ಷಿಯಾಗಲಿ ಎಂಬ ಉದ್ಧೇಶದಿಂದ ೮ ಸಾವಿರ ಕಡೆಗಳಲ್ಲಿ ೮ ಸಾವಿರ ಟಿವಿ ಪರದೇ ಮೇಲೆ ಕಾರ್ಯಕ್ರಮ ನೋಡುವಂತಾಗಲು ಕ್ರಮ ಕೈಗೊಂಡಿದ್ದು, ಎಲ್ಲರೂ ತಮ್ಮ ತಮ್ಮ ವ್ಯಾಪ್ತಿಯಲ್ಲಿ ೫೦ ಜನರ ಮಿತಿಯಲ್ಲಿ ಸಮಾರಂಭ ವೀಕ್ಷಣೆ ಮಾಡಬೇಕು. ಈ ರೀತಿ ಸುಮಾರು ೪ ಲಕ್ಷ ಜನರು ಟಿವಿ ಪರದೆಯ ಮೇಲೆ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾದಂತೆ ಆಗುತ್ತದೆ ಎಂದು ತಿಳಿಸಿದರು.
ಎರಡು ತಿಂಗಳಿನಿಂದ ನಮ್ಮ ಪಕ್ಷ ಕೊವಿಡ್ ನಲ್ಲಿ ಸಕ್ರಿಯವಾಗಿ ಕೆಲಸ ಮಾಡಿದೆ. ಬಿಜೆಪಿ ಸರಕಾರ ಇದ್ದರು, ಅವರಿಗಿಂತ ಹೆಚ್ಚು ಜನರು ಸಂಕಷ್ಟ ದೂರ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ನಮಗೆ ಮೋಟಿವೆಟ್ ಮಾಡಿದ್ದಾರೆ. ಜನರಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ಕೆಲಸ ಮಾಡಿದ್ದಾರೆ. ಅಗತ್ಯ ವಸ್ತುಗಳ ಪೂರೈಸುವ ಕೆಲಸ ಮಾಡಿದ್ದಾರೆ. ಸರಕಾರ ಗಮನ ಸೆಳೆದು ಕೊರೊನಾ ಸಂಕಷ್ಟ ನಿವಾರಿಸುವಂತ ಕೆಲಸ ಮಾಡಿದ್ದಾರೆ. ಜೊತೆಗೆ ಈಗಿರುವ ಅಧ್ಯಕ್ಷರು ತುಂಬಾ ಸಮರ್ಥವಾಗಿದ್ದಾರೆ. ಹಾಗಾಗಿ ಅವರ ಜೊತೆಗೆ ಕೂಡಿ ಕೆಸಲ ಮಾಡಲು ಯಾರು ಯಾರು ಸಮರ್ಥವಾಗಿದ್ದಿರೋ ಅವರ ಮನೆ ಬಾಗಿಲಿಗೆ ಅಧಿಕಾರ ಹುಡುಕಿಕೊಂಡು ಬರುತ್ತದೆ . ಆದ್ದರಿಂದ ಹೆಚ್ಚು ಪಕ್ಷ ಸಂಘಟನೆ ಕಾರ್ಯದಲ್ಲಿ ಭಾಗವಹಿಸಲು ಆಧ್ಯತೆ ನೀಡಿ ಎಂದು ಜಾರಿಕಹೊಳಿ ಕರೆ ನೀಡಿದರು.
ಮಾಜಿ ಶಾಸಕ ಡಿ.ಆರ್.ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮನೋಹರ ತಹಶೀಲ್ದಾರ, ವಿ.ಪ.ಸದಸ್ಯ ಶ್ರೀನಿವಾಸ ಮಾನೆ, ಜಿ.ಪಂ. ಅಧ್ಯಕ್ಷ ಬಸನಗೌಡ ದೇಸಾಯಿ, ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ್, ಪ್ರಮುಖರಾದ ಪ್ರಕಾಶ ಹಾದಿಮನಿ, ಪ್ರಕಾಶಗೌಡ ಪಾಟೀಲ, ಟಿ.ಈಶ್ವರ, ಸಂಜೀವಕುಮಾರ ನೀರಲಗಿ, ಪ್ರೇಮಾ ಪಾಟೀಲ, ಎಸ್.ಎಫ್.ಎನ್.ಗಾಜೀಗೌಡ್ರ, ಕೆ.ಆರ್.ಬಸೇಗಣ್ಣಿ, ಪ್ರಭುಗೌಡ ಭಿಷ್ಟನಗೌಡ್ರ, ಆರ್.ಎಮ್.ಕುಬೇರಪ್ಪ, ಪ್ರಕಾಶ ಕೋಳಿವಾಡ ಸೇರಿದಂತೆ ಅನೇಕರು ಹಾಜರಿದ್ದರು.