ಬ್ಯಾಡಗಿ: ಮೆಕ್ಕೆಜೋಳ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಮನನೊಂದ ರೈತ ತೆನೆಕಟ್ಟಿದ ಮೆಕ್ಕೆಜೋಳ ಬೆಳೆಯನ್ನು ರೂಟವೇಟರ್ ಹೊಡೆದು ನಾಶ ಮಾಡಿದ ಹೃದಯ ವಿದ್ರಾವಕ ಘಟನೆ ಬ್ಯಾಡಗಿ ತಾಲೂಕಿನ ಹೊಸಶಿಡೇನೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕಳದೊಂದು ತಿಂಗಳಿಂದ ಮೆಕ್ಕೆಜೋಳದ ದರ ದಿಢೀರನೆ ಕುಸಿತದ ಹಿನ್ನೆಲೆಯಲ್ಲಿ ಹೊಸ ಶಿಡೇನೂರ ಗ್ರಾಮದ ಮಾದೇವಪ್ಪ ಒಡೆನಪುರದಎಂಬ ರೈತ ಮನನೊಂದು, ೧.ಎಕರೆ ೨೦.ಗುಂಟೆ ಜಮೀನಿನಲ್ಲಿ ಸಂಪೂರ್ಣ ತೆನೆಕಟ್ಟಿ ಬೆಳೆದು ನಿಂತ ಫಸಲನ್ನು ರೂಟವೇಟರ್ ಹೊಡೆದು ನಾಶಪಡಿಸುತ್ತಿರುವ ದೃಶ ಸುತ್ತಲಿನ ಗ್ರಾಮಕ್ಕೆ ತಿಳಿಯುತ್ತಿದ್ದಂತೆ ರೈತರು ಆಗಮಿಸಿ ರೈತನಿಗೆ ಸಾಂತ್ವನ ಹೇಳುತ್ತಿರುವ ದೃಶ ಮನಕುಲುಕುವಂತಿತ್ತು.
ಪತ್ರಿಕೆಯೊಂದಿಗೆ ಮಾತನಾಡಿದ ರೈತ ಮಾದೇವಪ್ಪ ಒಡೆನಪುರ, ಈ ವರ್ಷ ೮ ಎಕರೆ ಮೆಕ್ಕೆಜೋಳ ಹಾಕಿರುವೆ. ಬೆಳೆ ಕಟಾವು ಮಾಡಿ ರಾಶಿ ಮಾಡಲು ೧೫ರಿಂದ ೨೦.ಸಾವಿರ ಖರ್ಚು ಬರುತ್ತದೆ. ಅಲ್ಲದೇ ಮೆಕ್ಕೆಜೋಳವನ್ನು ಕಾಳನ್ನು ಬೆರ್ಪಡಿಸುವ ಯಂತ್ರಕ್ಕೆ ಸುಮಾರು ೫.ಸಾವಿರ ಖರ್ಚು ಬರುತ್ತದೆ. ಹೀಗೇ ಒಟ್ಟಾರೆ ಎಲ್ಲಾ ಖರ್ಚುಗಳು ಸೇರಿ ಎಕರೆಗೆ ೫೦.ಸಾವಿರ ಬರುತ್ತದೆ. ಆದರೆ ಕ್ವೀಂಟಲ್ ಮೆಕ್ಕೆಜೋಳಕ್ಕೆ ೮೦೦ ರಿಂದ ೯೦೦ ರೂಗಳಿದೆ ಎಂಬ ಸುದ್ದಿಯನ್ನು ಕೇಳಿ ಬೆಳೆದುನಿಂತ ಬೆಳೆಯನ್ನು ನಾಶ ಮಾಡಿರುವೆ ಎಂದು ತಮ್ಮ ಅಳಲನ್ನು ತೊಡಿಕೊಂಡರು.
ರೈತನ ಹೊಲಕ್ಕೆ ಆಗಮಿಸದ ರೈತ ಸಂಘದ ಕಾರ್ಯಾಧ್ಯಕ್ಷ ಕಿರಣಕುಮಾರ ಗಡಿಗೋಳ ಮಾತನಾಡಿ, ಕೃಷಿ ಸಚಿವರ ತವರು ಜಿಲ್ಲೆಯಲ್ಲಿಯೇ ಪರಿಸ್ಥಿತಿ ಹೀಗಾದರೇ ರಾಜ್ಯದ ರೈತರ ಪಾಡೇನು….? ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದರೆ ಸಾಲದು. ರೈತನ ಕಷ್ಟವನ್ನು ಅರಿಯಬೇಕು. ಕಳದ ನಾಲ್ಕೈದು ತಿಂಗಳಿಂದ ಮೆಕ್ಕೆಜೋಳ ಖರಿದಿ ಕೇಂದ್ರವನ್ನು ತೆರೆಯುವಂತೆ ತಾಲೂಕುಮಟ್ಟದಿಂದ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ. ಅಧಿರಿಗಳು ಮನವಿ ನೀಡಿದ ಮಾಹಿತಿ ಸರ್ಕಾರಕ್ಕೆ ತಿಳಿದಿಲ್ಲವೇ….? ಮೆಕ್ಕೆಜೋಳ ಖರಿದಿ ಕೇಂದ್ರ ಯಾಕೆ ತೆರೆಯುತ್ತಿಲ್ಲ. ರೈತ ಸತ್ತ ಮೇಲೆ ೫.ಲಕ್ಷ ಪರಿಹಾರ ಕೊಡುವುದಕ್ಕಿಂತ, ಜೀವಂತ ಇದ್ದ ರೈತನ ಸಮಸ್ಯೆಗಳಿಗೆ ಪರಿಹಾರ ನೀಡಿ ಬೆಳೆದ ಬೆಳೆಗೆ ಸರಿಯಾದ ದರ ನಿಗದಿ ಮಾಡ್ರಿ ಸ್ವಾಮಿ…. ಮುಂದಿನ ದಿನಗಳಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದರು.
ಹಾವೇರಿ ಜಿಲ್ಲೆಯ ಪ್ರಮುಖ ಬೇಳೆ ಮೆಕ್ಕೆಜೋಳ. ಕೊರೋನಾ ನೆಪ ಹೇಳಿ ರೈತನ ಬೆಳೆಗೆ ದರ ಕಡಿಮೆ ಮಾಡುವುದು ಸರಿಯಾದ ಕ್ರಮವಲ್ಲ. ಇದರಿಂದ ವ್ಯಾಪಾರಸ್ಥರಿಗೆ ಅನೂಕುಲ. ಹೀಗಾದರೆ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತವೆ ಇದಕ್ಕೆ ಸರ್ಕಾರವೇ ನೇರ ಕಾರಣ. ಬೆಂಬಲ ಬೇಲೆಯ ಜೊತೆಗೆ ಪ್ರೋತ್ಸಾಹ ಧನ ಸೇರಿ ೨೫೦೦ ರೂಗಳಿಗೆ ಖರಿದಿ ಮಾಡಬೇಕು. ಕೂಡಲೇ ಖರಿದಿ ಕೇಂದ್ರ ತೆರೆಯಬೇಕು. ಇಲ್ಲದಿದ್ದರೆ ಜಿಲ್ಲೆಯ ಎಲ್ಲ ಶಾಸಕರ ಸಚಿವರ ಕಾರ್ಯಕ್ರಮಗಳನ್ನು ತಡೆಯುವ ಮೂಲಕ ಉಗ್ರ ಹೋರಾಟ ಮಾಡಲಾಗುವುದು.
ಮಲ್ಲಿಕಾರ್ಜುನ ಬಳ್ಳಾರಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ.