Kourava News

“ರಂಜಾನ್ ಹಬ್ಬ ಮುಗಿಯುವವರೆಗೂ ಲಾಕ್‌ಡೌನ್ ಬಿಗಿ ಗೊಳಿಸಿ” ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಮನವಿ

ಹಾವೇರಿ: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಲಾಕ್‌ಡೌನ್ ಸಡಿಲಿಕೆಯನ್ನು ರಂಜಾನ್ ಹಬ್ಬದವರೆಗೂ “ಬಿಗಿ” ಗೊಳಿಸುವಂತೆ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಮನವಿ ಅರ್ಪಿಸಿ ಆಗ್ರಹಿಸಿದೆ.
ಜಗತ್ತು ಕೊರೊನಾ ವೈರಸ್ ಸಂಕಷ್ಟದಿಂದ ತೊಂದರೆ ಯಲ್ಲಿದೆ. ಇದಕ್ಕೆ ಹಾವೇರಿ ಜಿಲ್ಲೆಯು ಹೊರತಾಗಿಲ್ಲ. ಹಾವೇರಿ ಜಿಲ್ಲಾಡಳಿತ ಪರಿಶ್ರಮದಿಂದ ಕೊರೊನಾ ಸೋಂಕಿತರು ಕೇವಲ ಮೂವರು ಮಾತ್ರ ಇದ್ದಾರೆ. ಇದೀಗ ಹಾವೇರಿ ಜಿಲ್ಲೆ ಹಸಿರು ವಲಯಕ್ಕೆ ಸೇರುವುದರಿಂದ ತಾವು ಜಿಲ್ಲೆಯ ಎಲ್ಲ ಅಂಗಡಿಗಳನ್ನು ವಹಿವಾಟು ನಡೆಸಲು ಅನುಮತಿ ನೀಡಿರುತ್ತೀರಿ. ಮೇ ತಿಂಗಳಲ್ಲಿ ರಂಜಾನ್ ಹಬ್ಬವು ಇರುವುದರಿಂದ ಬಟ್ಟೆ ಅಂಗಡಿಗಳಲ್ಲಿ ಖರೀದಿಗಾಗಿ ಜನರು ಸಾಮಾಜಿಕ ಅಂತರವನ್ನು ಕಡೆಗಣಿಸುವ ಸಾಧ್ಯತೆ ಇದೆ.
ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕಗಳಲ್ಲಿ ಬಟ್ಟೆ ಅಂಗಡಿಗಳನ್ನು ಮುಚ್ಚಿಸಬೇಕು. ಪವಿತ್ರ ರಂಜಾನ್ ಹಬ್ಬಕ್ಕೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಇಪ್ತಿಹಾರ್ ಕೂಟಗಳನ್ನು ಸರಕಾರ ಈಗಾಗಲೇ ನಿಷೇಧಿಸಿದೆ. ಸರಕಾರದ ನಿರ್ಧಾರಕ್ಕೆ ತಲೆಬಾಗಿ ನಾವು ತಮ್ಮ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಆದರೆ ಬಟ್ಟೆ ಅಂಗಡಿಗಳನ್ನು ತೆರೆದಿರುವುದರಿಂದ ಆತಂಕವಾಗಿದೆ. ದಯಮಾಡಿ ಬಟ್ಟೆ ಅಂಗಡಿಗಳನ್ನು ರಂಜಾನ್ ಹಬ್ಬ ಮುಗಿಯುವವರೆಗೆ ಮುಚ್ಚಿಸಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಆಗ್ರಹಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಎಸ್. ಯೋಗೇಶ್ವರ್ ಅವರಿಗೆ ಮನವಿ ಸಲ್ಲಿಸಿದೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯೂನುಸ್ ಅಹ್ಮದ್ ಸವಣೂರು, ಕಾಂಗ್ರೆಸ್ ಮುಖಂಡರಾದ ಮಮ್ಮದ್ ಹನೀಫ್ ಸಾಬ್ ಕಲಂಗಡಿ ,ಇಬ್ರಾಹಿಂ ದಾವಣಗೆರೆ, ಹಾವೇರಿ ಜಿಲ್ಲಾ ಮಜ್ದೂರ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾದ ಜಮೀರ ಜಿಗರಿ, ಮುದಸೀರ್ ಸವಣೂರ ಉಪಸ್ಥಿತರಿದ್ದರು.