Kourava News

ರಾಣೆಬೆನ್ನೂರ ವ್ಯಕ್ತಿ ದುಬೈನಲ್ಲಿ ಅಂದರ್… ಯಾಕೆ ಗೊತ್ತಾ…?

ರಾಣೆಬೆನ್ನೂರ ವ್ಯಕ್ತಿ ದುಬೈನಲ್ಲಿ ಅಂದರ್… ಯಾಕೆ ಗೊತ್ತಾ…
ರಾಣೆಬೆನ್ನೂರ: ಹಾವೇರಿ ಜಿಲ್ಲೆಯ ರಾಣೆಬೆನ್ನೂರ ನಗರದ ಕೂನಬೇವು ಪ್ಲಾಟ್ ನಿವಾಸಿಯಾಗಿದ್ದ ರಾಕೇಶ ಬಿ ಕಿತ್ತೂರಮಠ ಫೇಸ್ ಬುಕ್ ನಲ್ಲಿ‌ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಎನ್ನುವ ಆರೋಪ ಹಿನ್ನಲೆಯಲ್ಲಿ ದುಬೈ ಪೋಲಿಸರು ‌ಬಂದಿಸಿದ್ದಾರೆ.
ಈತನು ದುಬೈನಲ್ಲಿ ಎಮ್ರಿಲ್ ಸರ್ವಿಸ್ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆಂದು. ಕೊರೊನಾ ವೈರಸ್ ವಿಚಾರದಲ್ಲಿ ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆಯೊಂದನ್ನು ಫೇಸ್‌ಬುಕ್‌ ಗೆ ಹಾಕಿದ್ದಾರೆ.
ಈ ಪೋಸ್ಟ್ ಹಾಕಿದ ನಂತರ ವಿರೋಧ
ವ್ಯಕ್ತವಾದ ಹಿನ್ನೆಲೆಯಲ್ಲಿ ಎಮ್ರಿಲ್ ಕಂಪನಿ ಈತನನ್ನು ವಜಾಗೋಳಿಸಿದೆ.
ನಂತರ ದುಬೈ ಪೋಲಿಸರು ರಾಕೇಶ ಕಿತ್ತೂರಮಠರನ್ನು ಬಂಧಿಸಿ ಜೈಲಗಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಬಂಧತನನ್ನುಬಿಡಿಸಲು ಆತನ ಕುಟುಂಬದವರು ರಾಣೆಬೆನ್ನೂರ ನಗರಸಭಾ ಸದಸ್ಯ ಶಶಿಧರ ಬಸೆನಾಯ್ಕರ ಮೂಲಕ ಪ್ರಯತ್ನ ನಡೆಸಿದ್ದಾರೆ.
ದುಬೈನಲ್ಲಿ ಬಂಧಿತನಾಗಿರುವ ಯುವಕನ ಮೊಬೈಲ್ ಕಡಿತಗೊಂಡಿದೆ ಎನ್ನಲಾಗಿದೆ. ಸದಸ್ಯ ಬಸೆನಾಯ್ಕರ್, ಬಂಧಿತವಾಗಿರುವ ಯುವಕನ ಬಿಡುಗಡೆಗೆ ಹಾವೇರಿ ಲೋಕಸಭಾ ಸದಸ್ಯರಾದ ಶಿವಕುಮಾರ್ ಉದಾಸಿ ಅವರ ಜೊತೆಗೆ ಚರ್ಚಿಸಿದ್ದಾರೆ, ಉದಾಸಿಯವರು ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ನೆರವು ನೀಡುವ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.