Kourava News

ಶೇ.೧೦೦ ರಷ್ಟು ಸರಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗಿ: ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶ

ಬೆಂಗಳೂರು : ಕಂಟೇನ್ಮೆಂಟ್ ಝೋನ್ ಬಿಟ್ಟು ಉಳಿದೆಡೆ ಎಲ್ಲಾ ಸರ್ಕಾರಿ ಕಚೇರಿಗಳು ಇಂದಿನಿಂದ ಅಂದರೆ ಮಂಗಳವಾರ ತೆರೆಯಲಿದ್ದು. ಲಾಕ್‌ಡೌನ್ ೪ ದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು ತೆರೆಯಲಿದ್ದು, ಎಲ್ಲಾ ವೃಂದದ ಶೇ.೧೦೦ ರಷ್ಟು ಸಿಬ್ಬಂದಿ, ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಕಂಟೇನ್ಮೆಂಟ್ ಝೋನ್ ಬಿಟ್ಟು ಉಳಿದೆಡೆ ಎಲ್ಲಾ ಸರ್ಕಾರಿ ಕಚೇರಿಗಳು ತೆರೆಯಲಿದೆ. ಈ ಮುಂಚೆ ಅಗತ್ಯ ಸೇವೆಗಳನ್ನು ಪೂರೈಸುವ ಇಲಾಖೆಗಳಲ್ಲಿ ಶೇ.೧೦೦ ರಷ್ಟು ಎಲ್ಲಾ ವರ್ಗದ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಮತ್ತು ಇತರ ಇಲಾಖೆಗಳ ಶೇ.೩೩ ರಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.
ಕರ್ನಾಟಕ ಸರ್ಕಾರದ ಸುತ್ತೋಲೆಯಲ್ಲಿ ಇದೀಗ ಲಾಕ್‌ಡೌನ್ ಸಡಿಲಿಸಲು ತೀರ್ಮಾನಿಸಲಾಗಿದ್ದು, ಎಲ್ಲಾ ಕಚೇರಿಗಳು ತೆರೆಯಲಿದ್ದು, ಶೇ.೧೦೦ ರಷ್ಟು ಎ, ಬಿ, ಸಿ ಮತ್ತು ಡಿ ವೃಂದದ ಸಿಬ್ಬಂದಿ, ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

satta king gali 91 club Hdhub4u Hdhub4u