Kourava News

ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಅಜ್ಜ-ಮೊಮ್ಮಗನಿಗೆ ಕರೊನಾ ಸೋಂಕು ಕಂಡುಬಂದಿಲ್ಲ,ದೃಢ ಪಡಿಸಿದ ಲ್ಯಾಬ್ ರಿಪೊಟ್

ಹಾವೇರಿ: ವಿದೇಶಿ ಪ್ರವಾಸದಿಂದ ವಾಪಸ್ ಆಗಿದ್ದ ಹಾನಗಲ್ಲ ಮೂಲದ ಇಬ್ಬರಿಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಈಇಬ್ಬರ ರಕ್ತ ಮತ್ತು ಗಂಟಲು ದ್ರವದ ಮಾದರಿ ಪಡೆದು ಶಿವಮೊಗ್ಗದ ಲ್ಯಾಬ್‌ಗೆ ಆರೋಗ್ಯ ಇಲಾಖೆ ಕಳಿಸಿತ್ತು. ಶಿವಮೊಗ್ಗದ ಲ್ಯಾಬ್ ರಿಪೋಟ್ ಬಂದಿದ್ದು, ಕೊರೊನಾ ಸೋಂಕು ಇಬ್ಬರಲ್ಲಿ ಕಂಡುಬಂದಿಲ್ಲ, ಇಬ್ಬರದು ನೆಗೆಟಿವ್ ರಿಪೊಟ್ ಎಂದು ಲ್ಯಾಬ್ ರಿಪೊಟ್ ತಿಳಿಸಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ನಾಗರಾಜ್ ನಾಯಕ್ ಅವರು ತಿಳಿಸಿದ್ದಾರೆ.
ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿರುವ ೬೦ ವರ್ಷದ ಅಜ್ಜ ಮತ್ತು ಮೂರು ವರ್ಷದ ಮೊಮ್ಮಗನನ್ನು
ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗಿರುವ ಪ್ರತ್ಯೇಕ ವಾರ್ಡ್ ನಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಅಜ್ಜ-ಮೊಮ್ಮಗನಿಗೆ ಕೊರೊನಾ ಸೋಂಕು ಕಂಡುಬಂದಿಲ್ಲ ಎಂದು ಲ್ಯಾಬ್ ರಿಪೊಟ್ ದೃಢ ಪಡಿಸಿದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಆತಂಕಗೊಂಡಿದ್ದ ಸಾರ್ವಜನಿಕರು ಇದಿಗ ನಿರಾಳರಾಗಿದ್ದಾರೆ.
ಆರೋಗ್ಯ ಇಲಾಖೆಯವರು ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಅಜ್ಜ-ಮೊಮ್ಮಗನಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಇವರ ರಕ್ತ ಮತ್ತು ಗಂಟಲು ದ್ರವದ ಮಾದರಿ ಪಡೆದು ಶಿವಮೊಗ್ಗದ ಲ್ಯಾಬ್‌ಗೆ ಆರೋಗ್ಯ ಇಲಾಖೆ ಕಳಿಸಿತ್ತು. ಶಿವಮೊಗ್ಗದ ಲ್ಯಾಬ್ ರಿಪೋಟ್ ಬಂದಿದ್ದು, ಕರೊನಾ ಸೋಂಕು ಇಬ್ಬರಲ್ಲಿ ಕಂಡುಬಂದಿಲ್ಲ, ಇಬ್ಬರದು ನೆಗೆಟಿವ್ ರಿಪೊಟ್ ಎಂದು ಲ್ಯಾಬ್ ರಿಪೊಟ್ ತಿಳಿಸಿದ್ದು, ಆರೋಗ್ಯ ಇಲಾಖೆಯವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.