Kourava News

ಹಾವೇರಿ: ಭಾರೀ ಬಿರುಗಾಳಿಗೆ ವಿದ್ಯುತ್ ಕಂಬದ ಮೇಲೆ ಉರುಳಿದ ಮರಗಳು, ವಿದ್ಯುತ್ ಸ್ಥಗಿತ


ಹಾವೇರಿ: ಶುಕ್ರವಾರ ಬೆಳಗಿನಜಾವ ೨-೩೦ರಸುಮಾರಿಗೆ ಬೀಸಿದ ಭಾರೀ ಬಿರುಗಾಳಿಗೆ ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ಹರಿದು ಬಿದ್ದಿರುವ ಘಟನೆ ಇಲ್ಲಿನ ಹೊಸ ಈಶ್ವರ ದೇವಸ್ಥಾನರಸ್ತೆಯಲ್ಲಿ ನಡೆದಿದೆ. ನಗರದ ಅನೇಕ ಕಡೆಗಳಿಗೆ ಬಿರುಗಾಳಿಗೆ ಅನೇಕ ಕಡೆಗಳಲ್ಲಿ ಮರದ ಟೊಂಗೆಗಳು ಬಿದ್ದಿವೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸ್ಥಗಿತಗೊಳಿಸಿ ಕಂಬದಮೇಲೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಕಾರ್ಯಚರಣೆಯನ್ನು ಕೈಗೊಂಡರು. ಈವೇಳೆ ಈಭಾಗದಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ಭಾರೀ ಬಿರುಗಾಳಿಗೆ ಹಲವು ಕಡೆಗಳಲ್ಲಿ ಮಾವಿನಕಾಯಿಗಳು ನೆಲಕ್ಕುರುಳಿವೆ.
ಅರ್ಧಗಂಟೆಗೂ ಹೆಚ್ಚುವೇಳೆ ಸುರಿದ ಮಳೆಗೆ ನಗರದ ಚರಂಡಿಗಳು ತುಂಬಿ ಹರಿದವು. ಇಲ್ಲಿನ ಹಳೆ ಪಿ.ಬಿ. ರಸ್ತೆಗೆ ಹೊಂದಿಕೊಂಡಿರುವ ಪೊಲೀಸ್ ಕ್ವಾಟರ್ಸಬಳಿ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿತ್ತು. ಕೊಳೆಚೆ ರಸ್ತೆಯಮೇಲೆ ಹರಿದ ಪರಿಣಾ ಇಲ್ಲಿ ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ನಗರಸಭೆಯ ಪೌರಕಾರ್ಮಿಕರು ಸ್ಥಳಕ್ಕಾಗಮಿಸಿ ಸ್ವಚ್ಛತಾ ಕಾರ್ಯಕೈಗೊಂಡರು.