ಹಾವೇರಿ; ವಿಷಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ
ಹಾವೇರಿ: ವಿಷಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆಮಾಡಿಕೊಂಡಿರುವ ಘಟನೆ
ತಾಲೂಕಿನ ನಾಗನೂರು ಗ್ರಾಮದ ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವವರನ್ನು
ವಿದ್ಯಾಶ್ರೀ ಗಾಳಿ (22) ಮತ್ತು ಇರ್ಷಾದ ಕುಡಚಿ (23) ಎಂದು ಗುರುತಿಸಲಾಗಿದೆ.
ಏಪ್ರೀಲ್ 24,2021ರಂದು ಬೆಳಗಿನ ಜಾವ ಮನೆಯಿಂದ ವಿದ್ಯಾಶ್ರೀ
ನಾಪತ್ತೆಯಾಗಿದ್ದಾರೆ ಎಂದು
ನಿನ್ನೆಯಷ್ಟೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೆಲವು ದಿನಗಳ ಹಿಂದೆ ಬೇರೊಬ್ಬ ಯುವಕನ ಜೊತೆ ವಿದ್ಯಾಶ್ರೀ ಅವರ ನಿಶ್ಚಿತಾರ್ಥ ನೆರವೇರಿತ್ತು.
ಇರ್ಷಾದ ಕುಟುಂಬಕ್ಕೆ ಸೇರಿದ ಜಮೀನಿನಲ್ಲೇ ಇಬ್ಬರು ಆತ್ಮಹತ್ಯೆಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಹಾವೇರಿ ಗ್ರಾಮೀಣ ಠಾಣೆ ಸಿಪಿಐ ನಾಗಮ್ಮ, ಮಹಿಳಾ ಠಾಣೆ ಸಿಪಿಐ ಚಿದಾನಂದ ಹಾಗೂ ಪೊಲೀಸರ ಭೇಟಿ ನೀಡಿ
ಪರಿಶೀಲನೆ ನಡೆಸಿದರು. ಶವಗಳನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.