Kourava News

ಹಾವೇರಿ ಶಹರ ಯುವಕಾಂಗ್ರೆಸ್‌ಘಟಕದ ಅಧ್ಯಕ್ಷರಾಗಿ ಸೈಯದಉಮರ ಇನಾಮದಾರ ಆಯ್ಕೆ

ಹಾವೇರಿ ಶಹರ ಯುವಕಾಂಗ್ರೆಸ್‌ಘಟಕದ ಅಧ್ಯಕ್ಷರಾಗಿ ಸೈಯದಉಮರ ಇನಾಮದಾರ ಆಯ್ಕೆ
ಹಾವೇರಿ: ಹಾವೇರಿ ಶಹರ ಯುವಕಾಂಗ್ರೆಸ್ ‌ಘಟಕದ ಅಧ್ಯಕ್ಷರಾಗಿ ಶಹರದ ಯುವಕಾಂಗ್ರೆಸ್ ಮುಖಂಡ ಸೈಯದ ಉಮರ ಇನಾಮದಾರ ಆಯ್ಕೆಯಾಗಿದ್ದಾರೆ. ಹಾವೇರಿ ಶಹರ ಘಟಕಕ್ಕೆ ಇತ್ತೀಚೆಗೆ ಆನ್‌ಲೈನ್ ಮೂಲಕ ಚುನಾವಣೆ ನಡೆದಿತ್ತು. ಚುನಾವಣೆಗೆ ಮೂವರು ಸ್ಪರ್ಧಿಸಿದ್ದರು. ಚಲಾವಣೆಯಾದ ೩೫೨ಮತಗಳಲ್ಲಿ ಸೈಯದ ಉಮರ ಇನಾಮದಾರ ೨೦೪ಮತಗಳನ್ನು ಪಡೆದು ಹಾವೇರಿ ಶಹರ ಯುವಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಮಗೆ ಮತ ನೀಡುವ ಮೂಲಕ ಹಾವೇರಿ ಶಹರದ ಯುವಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಮಾಲಿಸಲು ಅವಕಾಶ ಮಾಡಿಕೊಟ್ಟಿರುವ ಯುವಕಾಂಗ್ರೆಸ್ ಮತದಾರರಿಗೆ ಇನಾಮದಾರ ಕೃತಜ್ಞತೆ ಸಲ್ಲಿಸಿದ್ದಾರೆ.