Kourava News

ಹಾವೇರಿ ಶಹರದಅಂಜುಮನ್ ಎ-ಇಸ್ಲಾಂ ಸಂಸ್ಥೆಗೆ ಚುನಾವಣೆ ನಡೆಸಲು ಆಗ್ರಹ

ಸಮಾಜದ ಮುಖಂಡರಿಂದ ಜಿಲ್ಲಾಧಿಕಾರಿಗಳ ಮೂಲಕ ವಕ್ಫ ಮಂಡಳಿಗೆ ಮನವಿ


ಹಾವೇರಿ ಶಹರದಅಂಜುಮನ್ ಎ-ಇಸ್ಲಾಂ ಸಂಸ್ಥೆಗೆ ಚುನಾವಣೆ ನಡೆಸಲು ಆಗ್ರಹ
ಹಾವೇರಿ: ಹಾವೇರಿ ಶಹರದ ಅಂಜುಮನ್ ಎ-ಇಸ್ಲಾಂ ಸಂಸ್ಥೆಗೆ ಈ ಮೊದಲು ಅಡಾಕ ಕಮಿಟಿ ರಚಿಸಲಾಗಿದ್ದು, ಸದರಿ ಕಮಿಟಿ ಅವಧಿ ಮುಗಿದಿದ್ದು, ಅಂಜುಮನ್ ಎ-ಇಸ್ಲಾಂ ಸಂಸ್ಥೆಗೆಚುನಾವಣೆ ನಡೆಸುವಂತೆ ಗುರುವಾರ ಸಮಾಜದ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕರಾಜ್ಯ ವಕ್ಫ ಮಂಡಳಿಗೆ ಮನವಿ ಅರ್ಪಿಸಿದ್ದಾರೆ.
ಹಾವೇರಿ ಶಹರದ ಅಂಜುಮನ್ ಸಂಸ್ಥೆಗೆ ಚುನಾವಣೆ ನಡೆಯುವವರೆಗೆ ಸರ್ಕಾರ ಆಡಳಿತ ಅಧಿಕಾರಿಯನ್ನು ನೇಮಿಸಬೇಕು. ಇತ್ತೀಚೆಗೆ ಬ್ಯಾಡಗಿ ಹಾಗೂ ಸವಣೂರಿನ ಮತದಾರ ಪಟ್ಟಿ ರಚಿಸುವ ಹಂತದಲ್ಲಿರುತ್ತದೆ ಎಂದು ತಿಳಿದು ಬಂದಿರುತ್ತದೆ. ಆದರೆ ಹಾವೇರಿ ಶಹರದ ಅಂಜುಮನ್‌ಎ-ಇಸ್ಲಾಂ ಸಂಸ್ಥೆಯ ಅಡಾಕ ಕಮಿಟಿಯು ಅವಧಿ ಮುಗಿದಿದ್ದರೂ ಸಹ ಸರ್ಕಾರ ಆಡಳಿತ ಅಧಿಕಾರಿಯನ್ನು ನೇಮಿಸಿರುವುದಿಲ್ಲ.
ಇದರಿಂದ ಸಾಮಾಜಿಕ ಕಾರ್ಯಗಳ ನಿರ್ವಹಣೆಗೆ ಹಿನ್ನಡೆ ಉಂಟಾಗುತ್ತದೆ. ತುರ್ತಾಗಿ ಹಾವೇರಿ ಶಹರದ ಅಂಜುಮನ್‌ಎ-ಇಸ್ಲಾಂ ಸಂಸ್ಥೆಗೆ ಆಡಳಿತಾಧಿಕಾರಿಯನ್ನು ನೇಮಿಸಿ ಚುನಾವಣೆ ಘೋಷಣೆ ಮಾಡಬೇಕೆಂದು ಸಮಾಜದ ಮುಖಂಡರಾದ ಅಮೀರಜಾನ್ ಬೇಪಾರಿ,ಶಾಹೀದದೇವಿಹೊಸೂರ, ದಾದಾಪೀರ ಮೇಗಳಮನಿ, ಸೈಯದ್‌ಜಮಾದಾgರ ಇನ್ನಿತರರು ಜಿಲ್ಲಾಧಿಕಾರಿಗಳಾದ ಸಂಜಯ್ ಶೆಟ್ಟಣ್ಣನವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದ್ದಾರೆ.