Kourava News

ಹಾವೇರಿಜಿಲ್ಲೆಯಲ್ಲಿ ಏ.೨೬ ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-೭೮, ಇಬ್ಬರ ಮರಣ

 

ಹಾವೇರಿಜಿಲ್ಲೆಯಲ್ಲಿ ಏ.೨೬ ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-೭೮, ಇಬ್ಬರ ಮರಣ
ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಏ.೨೬ರಂದು ಸೋಮವಾರ-೭೮ ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇಬ್ಬರು ಮರಣಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಏ.೨೬ ರಂದು ಸಂಜೆ ಬಿಡುಗಡೆ ಮಾಡಿರುವ ವರದಿಯಲ್ಲಿ ದೃಢಪಡಿಸಲಾಗಿದೆ.
ಇಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಏ.೨೧ ಹಾಗೂ ಏ.೨೨ರಂದು ಮೃತಪಟ್ಟಿರುತ್ತಾರೆ. ಸದರಿಯವರ ಅಂತ್ಯಕ್ರಿಯೆಯನ್ನು ಕೋವಿಡ್-೧೯ ನಿಯಮಾವಳಿಯ ಪ್ರಕಾರ ಕೈಗೊಳ್ಳಲಾಗಿದೆ.
ಏ. ೨೬ ರಂದು ಬ್ಯಾಡಗಿ-೦೧, ಹಾನಗಲ್ಲ-೨೭, ಹಾವೇರಿ-೧೩, ಹಿರೇಕೆರೂರು-೦೯, ರಾಣೇಬೆನ್ನೂರು-೧೩, ಸವಣೂರು-೦೦, ಶಿಗ್ಗಾವ-೦೯. ಇತರೆ ಪ್ರಕರಣಗಳು-೬ ಸೇರಿ ಜಿಲ್ಲೆಯಲ್ಲಿ ಒಟ್ಟು ೭೮ ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರ ತಿಳಿಸಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ೧೨೧೬೦ ಪ್ರಕರಣ ಗಳಿವೆ. ಕೋವಿಡ್ ಪಾಸಿಟಿವ ಪ್ರಕರಣಗಳಲ್ಲಿ ೧೧೪೭೯ ಜನರು ಗುಣಮುಖರಾಗಿದ್ದಾರೆ. ಏ.೨೬ರಂದು ೩೫ ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಏ.೨೬ರಂದು ದೃಢಪಡಿಸಲಾದ ಇಬ್ಬರ ಮರಣ ಸೇರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ೨೧೨ ಜನರು ಕೊರೋನಾ ರೋಗಕ್ಕೆ ಮೃತಪಟ್ಟಿದ್ದಾರೆ.