Kourava News

ಹಾವೇರಿಜಿಲ್ಲೆಯಲ್ಲಿ ಏ.೨೭ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-೯೯, ಮೂವರ ಮರಣ

ಮನೆಯಲ್ಲಿಯೇ ಇರಿ, ಅನವಶ್ಯವಾಗಿ ಹೊರಗಡೆ ಬರಬೇಡಿರಿ............

ಹಾವೇರಿಜಿಲ್ಲೆಯಲ್ಲಿ ಏ.೨೭ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-೯೯, ಮೂವರ ಮರಣ
ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಏ.೨೭ರಂದು ಮಂಗಳವಾರಬರೋಬ್ಬರಿ ೯೯ ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಮೂವರು ಮರಣಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಏ.೨೭ ರಂದು ಸಂಜೆ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕರಣೆಯಲ್ಲಿ ದೃಢಪಡಿಸಲಾಗಿದೆ.
ಮೃತಪಟ್ಟಿರುವ ಮೂವರಲ್ಲಿ ಇಬ್ಬರು ಹಾವೇರಿ ತಾಲೂಕಿನವರಾಗಿದ್ದಾರೆ. ಇವರಲ್ಲಿ ಓರ್ವರು ಏ.೨೩ರಂದು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮತ್ತೊಬ್ಬರು ಏ.೨೫ರಂದು ಹುಬ್ಬಳ್ಳಿಯ ನವನಗರ ಕೋವಿಡ್ ಕೇರ್ ಸೆಂಟರ್‌ನಲ್ಲಿ , ಇನ್ನೊಬ್ಬರು ರಾಣೇಣೆಬೆನ್ನೂರು ತಾಲೂಕಿನವರಾಗಿದ್ದಾರೆ. ಇವರು ಏ.೨೨ರಂದು ಸಿಜೆ ಆಸ್ಪತ್ರೆ ದಾವಣಗೆರೆಯಲ್ಲಿ ಮೃತಪಟ್ಟಿದ್ದಾರೆ. ಸದರಿಯವರ ಅಂತ್ಯಕ್ರಿಯೆಯನ್ನು ಕೋವಿಡ್-೧೯ ನಿಯಮಾವಳಿಯ ಪ್ರಕಾರ ಕೈಗೊಳ್ಳಲಾಗಿದೆ.
ಏ. ೨೭ ರಂದು ಬ್ಯಾಡಗಿ-೧೪, ಹಾನಗಲ್ಲ-೧೩, ಹಾವೇರಿ-೧೦, ಹಿರೇಕೆರೂರು-೩೦, ರಾಣೇಬೆನ್ನೂರು-೧೭, ಸವಣೂರು-೦೩, ಶಿಗ್ಗಾವ-೧೧. ಇತರೆ ಪ್ರಕರಣಗಳು-೧ ಸೇರಿ ಜಿಲ್ಲೆಯಲ್ಲಿ ಒಟ್ಟು ೯೯ ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರ ತಿಳಿಸಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ೧೨೨೫೯ ಪ್ರಕರಣ ಗಳಿವೆ. ಕೋವಿಡ್ ಪಾಸಿಟಿವ ಪ್ರಕರಣಗಳಲ್ಲಿ ೧೧೫೧೯ ಜನರು ಗುಣಮುಖರಾಗಿದ್ದಾರೆ. ಏ.೨೭ರಂದು ೪೦ ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಏ.೨೭ರಂದು ದೃಢಪಡಿಸಲಾದ ಮೂವರ ಮರಣ ಸೇರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ೨೧೫ ಜನರು ಕೊರೋನಾ ರೋಗಕ್ಕೆ ಮೃತಪಟ್ಟಿದ್ದಾರೆ.