ಹಾವೇರಿಜಿಲ್ಲೆಯಲ್ಲಿ ಏ.24 ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-92, ಐವರ ಮರಣ
ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಏ.24ರಂದು ಶನಿವಾರ _ 92ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಐವರು ಮರಣಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಏ.24 ರಂದು ಸಂಜೆ ಬಿಡುಗಡೆ ಮಾಡಿರುವ ವರದಿಯಲ್ಲಿ ದೃಢಪಡಿಸಲಾಗಿದೆ.
ದೃಢಪಟ್ಟಿರುತ್ತದೆ. ಐವರು ವಿವಿಧ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಸದರಿಯವರ ಅಂತ್ಯಕ್ರಿಯೆಯನ್ನು ಕೋವಿಡ್-೧೯ ನಿಯಮಾವಳಿಯ ಪ್ರಕಾರ ಕೈಗೊಳ್ಳಲಾಗಿದೆ.
ಏ. 24 ರಂದು ಬ್ಯಾಡಗಿ-05, ಹಾನಗಲ್ಲ-28, ಹಾವೇರಿ-05, ಹಿರೇಕೆರೂರು-07, ರಾಣೇಬೆನ್ನೂರು-11 ಸವಣೂರು-05, ಶಿಗ್ಗಾವ-23. ಇತರೆ ಪ್ರಕರಣಗಳು-8ಸೇರಿ ಜಿಲ್ಲೆಯಲ್ಲಿ ಒಟ್ಟು 92 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರ ತಿಳಿಸಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 11983 ಪ್ರಕರಣ ಗಳಿವೆ. ಕೋವಿಡ್ ಪಾಸಿಟಿವ ಪ್ರಕರಣಗಳಲ್ಲಿ 11391 ಜನರು ಗುಣಮುಖರಾಗಿದ್ದಾರೆ. ಏ.24ರಂದು 38 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಏ.24ರಂದು ದೃಢಪಡಿಸಲಾದ ಐವರ ಮರಣ ಸೇರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 206 ಜನರು ಕೊರೋನಾ ರೋಗಕ್ಕೆ ಮೃತಪಟ್ಟಿದ್ದಾರೆ.