ಪಶ್ಚಿಮ ಪದವಿಧರರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ : ಬಸವರಾಜ ಗುರಿಕಾರ
ಹಾವೇರಿ: ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಾಥಮಿಕ ಹಾಗೂ ಉಪನ್ಯಾಸಕರ ವಿವಿಧ ಸಂಘಟನೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಶಿಕ್ಷಕರ ಮತ್ತು ಉಪನ್ಯಾಸಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದರಿಂದ ನನ್ನನ್ನು ಪದವಿಧರರೇ ಪಶ್ಚಿಮ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಗ್ರಹದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವೆ ಎಂದು ಬಸವರಾಜ ಗುರಿಕಾರ ತಿಳಿಸಿದರು.
ಶನಿವಾರ ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ನಾನು ಅಖಿಲಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ನ ಉಪಾಧ್ಯಕ್ಷನಾಗಿ, ಕರ್ನಾಟಕ ರಾಜ್ಯ ಶಿಕ್ಷಕಕರ, ಉಪನ್ಯಾಸಕರ ಮಹಾಮಂಡಳದ ಅಧ್ಯಕ್ಷರಾಗಿ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಪ್ರಮಾಣಿಕವಗಿ ಮಾಡುತ್ತ ಬಂದಿದ್ದೇನೆ ಈ ಕಾರಣಕ್ಕಾಗಿ ಅನೇಕ ಪದವಿಧರರು ನಾನು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದರಿಂದ ಪ್ರಸಕ್ತ ಚುನಾವಣಾ ಕಣದಲ್ಲಿರುವುದರಿಂದ ಪದವಿಧರರು ನನಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಡಿಸಿದರು.
ಪಶ್ಚಿಮ ಪದವಿಧರ ಮತ ಕ್ಷೇತ್ರದ ಧಾರವಾಡ, ಹಾವೇರಿ, ಗದಗ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಸಂಚರಿಸಿ ಮತಯಾಚನೆಯನ್ನು ಮಾಡಿದ್ದೇನೆ ಹಾಗೂ ಸಮೀಕ್ಷೆಯನ್ನು ಮಾಡಿರುವದಾಗಿ ಹೇಳಿದರು.
ಶಿಕ್ಷಕರ ಸಂಘಟನೆಗಳಲ್ಲಿ ಉತ್ತರ ಕರ್ನಾಟಕದವರು ರಾಜ್ಯಮಟ್ಟದಲ್ಲಿ ಅಧ್ಯಕ್ಷರಾಗಿ ಮತ್ತು ರಾಷ್ಟ್ರಮಟ್ಟದಲ್ಲಿ ಉಪಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡುವುದು ಎಂದರೆ ಸಾಮಾನ್ಯವದುದಲ್ಲ. ಈಗ ನಾನು ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ ಎಂದರೆ ನಾನು ಶಿಕ್ಷಕರ ಹಾಗೂ ಉಪನ್ಯಾಸಕರ ಕಷ್ಟಗಳಿಗೆ ಸ್ಪಂದನೆ ಮತ್ತು ಅವರ ಕಷ್ಟಗಳಿಗೆ ಸ್ಪಂದನೆ ನೀಡುತ್ತ ಬಂದಿದ್ದರಿಂದ ಇದು ಸಾಧ್ಯವಾಗಿದೆ. ಆದ್ದರಿಂದ ಪದವಿಧರ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಹೇಳಿದ್ದರಿಂದ ಸ್ಪರ್ಧಿಸುತ್ತಿರುವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆ.ಹೆಚ್.ಚಹ್ವಾಣ, ಎಸ್.ಕೆ.ಕೋಡಿಹಳ್ಳಿ, ರಘು ನರಗುಂದ ಸೇರಿದಂತೆ ಮತ್ತಿತರರು ಇದ್ದರು.