ಸವಣೂರಲ್ಲಿ ವ್ಯಕ್ತಿಗೆ ಕೊರೊನಾ: ದೃಢಪಡಿಸಿದ ಜಿಲ್ಲಾಧಿಕಾರಿ ಭಾಜಪೇಯಿಪತ್ರಿಕಾ ಹೇಳಿಕೆಯ ಪ್ರತಿ.
ಹಾವೇರಿ ಜಿಲ್ಲೆಗೆ ಕೊನೆಗೂ ವಕ್ಕರಿಸಿದಕೊರೊನಾ ಸೋಂಕು…
ಸವಣೂರಲ್ಲಿ ವ್ಯಕ್ತಿಗೆ ಕೋವಿಡ್-೧೯, ದೃಢಪಡಿಸಿದ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ
ಹಾವೇರಿ; ಜಿಲ್ಲೆಯ ಸವಣೂರಲ್ಲಿ ವ್ಯಕ್ತಿಯೋರ್ವನಿಗೆ ಕೋವಿಡ್-೧೯ ತಗಲಿರುವುದನ್ನು
ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ದೃಢಪಡಿಸಿದ್ದಾರೆ.ಸೋಮವಾರಜಿಲ್ಲಾಡಳಿತ ಭವನದಲ್ಲಿ
ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈಬಗ್ಗೆ ಅವರು ಮಾಹಿತಿ ನೀಡಿದರು.
ಹಾವೇರಿ ಜಿಲ್ಲೆ ಸವಣೂರು ಮೂಲದ ೩೨ ವರ್ಷದ ವ್ಯಕ್ತಿಗೆ ಕೋವಿಡ್-೧೯ ತಗಲಿರುವುದನ್ನು
ದೃಢ ಪಡಿಸಿದ ಅವರು, ಏಪ್ರೀಲ್ ೨೮,೨೦೨೦ರಂದು ಮುಂಬೈನಿಂದ ಲಾರಿಯಲ್ಲಿ ಸವಣೂರಿಗೆ
ಆಗಮಿಸಿದ್ದಮನೆಯಲ್ಲಿದ್ದ ವ್ಯಕ್ತಿಯನ್ನ ಗುರುತು ಹಚ್ಚಿದ ಆರೋಗ್ಯ ಇಲಾಖೆಯ ಸಿಬ್ಬಂದಿ
ಏಪ್ರೀಲ್ ೨೯, ೨೦೨೦ರಂದು ಮುಂಬೈನಿಂದ ಬಂದಿದ್ದವನ ಸ್ಯಾಂಪಲ್ಸ್ ಲ್ಯಾಬ್ ಗೆ
ಕಳಿಸಿದ್ದರು. ಇತನ ಜೊತೆಗೆ ಇತನು ಸೇರಿ ಮುಂಬೈನಿಂದ ಮೂವರು ಬಂದಿದ್ದರು.
ಈಮೂವರ ಮೂವರ ಥ್ರೋಟ್ ಸ್ವ್ಯಾಬ್‌ನ್ನು ಲ್ಯಾಬ್‌ಗೆ ಪರೀಕ್ಷೆಗೆ ಆರೋಗ್ಯ ಇಲಾಖೆ
ಕಳಿಸಿತ್ತು. ಇದೀಗ ಕಳೆದ ರಾತ್ರಿ ಓರ್ವ ಪರೀಕ್ಷವರದಿ ಬಂದಿದ್ದು, ಇನ್ನಿಬ್ಬರ
ದ್ವಿತೀಯ ವರದಿಗಾಗಿ ಜಿಲ್ಲಾಡಳಿತ ನಿರೀಕ್ಷೆಯಲ್ಲಿದೆ.
ತನ್ನ ಅಣ್ಣ ಹಾಗೂ ಅಣ್ಣನ ಮಗನೊಂದಿಗೆ ಸವಣೂರಿಗೆ ಆಗಮಿಸಿದ್ದ ಸೋಂಕಿತ ವ್ಯಕ್ತಿ.
ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ೨೧ ಜನರನ್ನ ಜಿಲ್ಲಾಸ್ಪತ್ರೆಯಲ್ಲಿ
ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಸೋಂಕಿತನ ಕುಟುಂಬ, ಸ್ನೇಹಿತರು ಹಾಗೂ ಚಿಕಿತ್ಸೆ ನೀಡಿದ ವೈದ್ಯರ ತಂಡ
ಕ್ವಾರಂಟೈನ್‌ಗೆಒಳಪಡಿಸಲಾಗಿದೆ. ಸೋಂಕಿತನ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದ ೧೪ ಜನರ
ಪತ್ತೆಯಾಗಿದ್ದಾರೆ.ಈ ೧೪ ಜನರನ್ನ ಅವರವರ ಮನೆಗಳಲ್ಲಿ ಹೋಂ ಕ್ವಾರಂಟೈನ್ ಮಾಡಿ ಆರೋಗ್ಯ
ಇಲಾಖೆ ಚಿಕಿತ್ಸೆ ಮುಂದುವರೆಸಿದೆ.
ಸೋಂಕಿತ ವ್ಯಕ್ತಿ ವಾಸ ಮಾಡ್ತಿದ್ದ ಸವಣೂರುಪಟ್ಟಣದ ಪ್ರದೇಶವನ್ನು ಸೀಲ್ ಡೌನ್
ಮಾಡಲಾಗಿದ್ದು, ಸೋಂಕಿತ ವ್ಯಕ್ತಿ ವಾಸವಿದ್ದ ಪ್ರದೇಶದ ೫ ಕಿ.ಮೀ ವ್ಯಾಪ್ತಿಯನ್ನ ಬಫರ್
ಜೋನ್ ಪ್ರದೇಶವೆಂದು ಘೋಷಣೆಮಾಡಲಾಗಿದೆ. ಸೀಲ್ ಡೌನ್ ಮಾಡಿರುವ ಪ್ರದೇಶದ ಜನರಿಗೆ
ಅಗತ್ಯ ವಸ್ತುಗಳನ್ನ ಪೂರೈಸಲು ಕಂಟ್ರೋಲ್ ರೂಂ ಸ್ಥಾಪಸಿಲಾಗಿದೆ ಎಂದು
ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮುಂಬೈಯಿಂದ ಬಂದ್ದದ್ದು ಹೇಗೆ: ಸವಣೂರ ಪಟ್ಟಣದ ಮೂಲ ನಿವಾಸಿಗಳಾದ ಮೂವರು ಸುಮಾರು
ವಷ೯ಗಳಿಂದ ಬಾಂಬೆ ನಗರದಲ್ಲಿ ವಾಸವಾಗಿದ್ದರು, ದಿನಾಂಕ ೨೬-೦೪-೨೦೨೦ ರಂದು ರಾತ್ರಿ
ಸಮಯದಲ್ಲಿ ಬಾಂಬೆಯಿಂದ ಶಿಗ್ಗಾವಿ ತಾಲೂಕಿನ ಹೊಸೂರು ಎತ್ನಳ್ಳಿ ಲಾರಿ ಚಾಲಕ
ಲಾರಿಯಲ್ಲಿ ಈ ೩ ಜನರನ್ನು ಕರೆತಂದಿದ್ದನು.
ದಿನಾಂಕ ೨೮-೦೪-೨೦೨೦ ರಂದು ಸವಣೂರ ಪಟ್ಟಣದ ಎಸ್.ಎಮ್.ಕೃಷ್ಣ ನಗರದ ತಮ್ಮ ಮನೆಗೆ
ಈಮೂವರು ಬಂದಿದ್ದರು. ಈ ವಿಷಯ ತಿಳಿದ ಅಲ್ಲಿನ ನಿವಾಸಿಗಳು ಆರೋಗ್ಯ ಇಲಾಖೆ ಮತ್ತು
ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು ಕೂಡಲೇ ಆರೋಗ್ಯ ಇಲಾಖೆಯವರು ಕಾರ್ಯಚರಣೆ ನಡೆಸಿ
ದಿನಾಂಕ ೦೧-೦೫-೨೦೨೦ ರಂದು ರಾತ್ರಿ ಸವಣೂರ ಪಟ್ಟಣದಿಂದ ಇವರನ್ನು ಚಿಕಿತ್ಸೆ ಕುರಿತು
ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆ ತಂದಿದ್ದು ಇವರ ಜೊತೆಗೆ ಅವರ ಸಂಪಕ೯ದಲ್ಲಿರುವ ೭
ಜನರನ್ನು ಸಹ ಜಿಲ್ಲಾ ಆಸ್ಪತ್ರಗೆ ಕರೆ ತಂದು ಇವರೆಲ್ಲರ ಗಂಟಲು ದ್ರವ ಮತ್ತು ರಕ್ತ
ಮಾದರಿಯನ್ನು ಲ್ಯಾಬಿಗೆ ಕಳುಹಿಸಿದ್ದರು. ಇರುತ್ತದೆ.
ಈ ಮೂರು ಜನ ಸಹೋದರರು ಬಾಂಬೆಯಲ್ಲಿ ವಾಸವಾಗಿದ್ದು ಬಾಂಬೆಯಿಂದ ಆಗಾಗ ಸವಣೂರ
ಪಟ್ಟಣಕ್ಕೆ ಬರುತ್ತಿರುವದಾಗಿ ತಿಳಿದು ಬಂದಿದೆ. ಕೊರೊನಾ ಸೋಂಕು ಮುಂಬೈಯಲ್ಲಿ
ಹರಡುತ್ತಿದ್ದಂತೆಯೇ ಇವರು ಜಿಲ್ಲೆಯ ಸವಣೂರಿಗೆ ಆಗಮಿಸಿದ್ದರೆಂದು ತಿಳಿದು ಬಂದಿದೆ.
ಇದರಿಂದ ಸೇಪ್ ಜೂನ್‌ನಲ್ಲಿದ್ದ ಹಾವೇರಿ ಜಿಲ್ಲೆಯಲ್ಲಿ ಮೊದಲ ಕೋವಿಡ್ -೧೯ ಪ್ರಕರಣ
ಪತ್ತೆಯಾದಂತಾಗಿದೆ. ಜಿಲ್ಲೆಯಜನರಲ್ಲಿ ಆತಂಕ ಮನೆಮಾಡಿದೆ.