ಬ್ಯಾಡಗಿ

ಬ್ಯಾಡಗಿ ಮಾರುಕಟ್ಟೆಗೆ೨.೫೫ ಲಕ್ಷ ಚೀಲ ಮೆಣಸಿನಕಾಯಿ ಆವಕ, ನೂತನ ದಾಖಲೆ

ಬ್ಯಾಡಗಿ- ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯು ಸೋಮವಾರ ಮೆಣಸಿನಕಾಯಿ ಚೀಲಗಳಿಂದ ರಸ್ತೆಯಲ್ಲಿ ಒಡಾಡಲು ಕೂಡ ಸ್ಥಳವಿಲ್ಲದಂತೆ ಮೆಣಸಿನಕಾಯಿ ಚೀಲಗಳಿಂದ ತುಂಬಿ ಹೋಗಿತ್ತು.
೨.೫೫ ಲಕ್ಷ ಚೀಲಗಳಷ್ಟು ಮೆಣಸಿನಕಾಯಿ ಚೀಲಗಳು ವ್ಯಾಪಾರಕ್ಕೆ ಬಂದು ಈ ವರ್ಷದ ಹೆಚ್ಚು ಆವಕ ಎಂಬ ದಾಖಲೆಗೆ ಪಾತ್ರವಾಯಿತು. ಇಷ್ಟೊಂದು ಮೆಣಸಿನಕಾಯಿ ಚೀಲಗಳು ಬರುತ್ತವೆ ಎಂದು ಯಾರೂ ಉಹಿಸಿರಲಲ್ಲ. ಆದರೆ ಹಲವಡೆ ಮಳೆ ಆಗಿದ್ದು ಮತ್ತು ಗುರುವಾರ ಮಾರುಕಟ್ಟೆಯು ರಜೆ ಮಾಡಿದ ಹಿನ್ನಲೆಯಲ್ಲಿ ಈ ಪ್ರಮಾಣದ ಚೀಲಗಳು ಬಂದಿರುವದಾಗಿ ತಿಳಿದು ಬಂದಿದೆ. ಹಲವಾರು ಅಂಗಡಿಗಳಲ್ಲಿ ಮೆಣಸಿನಕಾಯಿ ಚೀಲಗಳನ್ನು ಇಳಿಸಲು ಸ್ಥಳದ ಅಭಾವ ಉಂಟಾಗಿ ನೂರಾರು ಮೆಣಸಿನಕಾಯಿ ತುಂಬಿದ ವಾಹನಗಳು ಮಾರುಕಟ್ಟೆಯಲ್ಲಿ ಹಾಗೆಯೇ ನಿಂತಿರುವದು ಕಂಡು ಬಂದಿತು. ರಾಜ್ಯ ಹಾಗೂ ರಾಜ್ಯಗಳ ವಾಹನಗಳು ಬಹಳ ಹೆಚ್ಚು ಬಂದಿದ್ದರಿಂದ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಬಳ್ಳಾರಿ, ಆಂದ್ರ ಪ್ರಧೇಶ ರಾಯಚೂರು ಹಾಗೂ ಇತರ ಸ್ಥಳಗಳಿಂದ ರೈತರು ತಮ್ಮ ತಮ್ಮ ಮೆಣಸಿನಕಾಯಿ ಚೀಲಗಳನ್ನು ಮಾರಾಟಕ್ಕೆ ತಂದಿದ್ದರು. ಪೊಲೀಸರು ಆಗಮಿಸಿ ಸಂಚಾರ ಮಾರ್ಗಗಳನ್ನು ಸುಮಗೊಳಿಸಲು ತೀವ್ರ ಪ್ರಯತ್ನ ನಡೆಸಿದರು.
ಸಾಯಂಕಾಲ ೪ ಗಂಟೆಯವರೆಗೆ ವರ್ತಕರಿಗೆ ಟೆಂಡರ್ ಹಾಕಲು ಅವಕಾಶ ನೀಡಲಾಗಿತ್ತು. ದ್ರೋಣ ಕ್ಯಾಮರಾ ಮೂಲಕ ಮಾರುಕಟ್ಟೆಗೆ ಬಂದ ಹೆಚ್ಚು ಮೆಣಸಿನಕಾಯಿ ಚೀಲಗಳನ್ನು ಚಿತ್ರೀಸಲಾಯಿತು. ಎಪಿಎಂಸಿ ಕಾರ್ಯದರ್ಶಿ ಎಸ್.ಬಿ.ನ್ಯಾಮಗೌಡ್ರ, ಸಿಪಿಐ ಭಾಗ್ಯವತಿ ಮತ್ತು ಪಿಎಸೈ ಮಹಾಂತೇಶ ಪೊಲೀಸರೊಂದಿಗೆ ಮಾರುಕಟ್ಟೆಯಲ್ಲಿ ಸಂಚರಿಸುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಿದರು.

Show More

Leave a Reply

Your email address will not be published. Required fields are marked *

Back to top button
Close