ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯು ೨೦೧೯ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ೫ ಮಂದಿ ಸಾಧಕರಿಗೆ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ೧೦ ಮಂದಿಗೆ ಸಾಹಿತ್ಯಶ್ರೀ ಪ್ರಶಸ್ತಿ, ೧೯ ಲೇಖಕರಿಗೆ ಪುಸ್ತಕ ಬಹುಮಾನ ಹಾಗೂ ೯ ದತ್ತಿನಿಧಿ ಬಹುಮಾನ ಪ್ರಕಟಿಸಲಾಗಿದೆ. ರಾಣೇಬೆನ್ನೂರು ಸಮೀಪ ಕೂನಬೇವುಗ್ರಾಮದ ಸಾಹಿತಿ ಚಂಸು (ಚಂದ್ರಶೇಖರ ಪಾಟೀಲ)ಅವರ ಬೇಸಾಯದ ಕತಿಗೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ(ಸಿಂಪಿ ಲಿಂಗಣ್ಣ ದತ್ತಿ, ಜೀವನಚರಿತ್ರೆ) ಪ್ರಶಸ್ತಿ ಲಭಿಸಿದೆ.
ಚಂದ್ರಶೇಖರ ಸುಭಾಸಗೌಡ ಪಾಟೀಲರು ರಾಣೇಬೆನ್ನೂರು ಕೂನಬೇವುಗ್ರಾಮದವರಾಗಿದ್ದು, ವೃತ್ತಿಯಿಂದ ಕೃಷಿಕರಾಗಿದ್ದು, ಪೃವ್ರತ್ತಿಯಿಂದ ಲೇಖಕರಾಗಿದ್ದಾರೆ. ೨೦೦೨ ರಿಂದ ೨೦೦೬ ರವರೆಗೆ ನೋಟ, ಕ್ರಾಂತಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿಯು ಇವರು ಕಾರ್ಯನಿರ್ವಹಿಸಿದ್ದಾರೆ. ೨೦೦೭ ರಿಂದ ಕೂನಬೇವುನಲ್ಲಿ ಕೃಷಿಯಲ್ಲಿ ತಮ್ಮನ್ನುತೊಡಗಿಸಿಕೊಂಡಿರುವ ಇವರು ಬಿಎಪದವಿಧರರಾಗಿದ್ದಾರೆ.
೧೯೯೫ರಲ್ಲಿ ಗೆಳೆಯನಿಗೆ, ೨೦೦೪ ರಲ್ಲಿ ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು, ೨೦೦೯ರಲ್ಲಿ ಅದಕ್ಕೇ ಇರಬೇಕು ಎನ್ನುವ ಕವನಸಂಕಲಗಳನ್ನು ಪ್ರಕಟಿಸಿದ್ದಾರೆ.೨೦೧೮ ಬೇಸಾಯದ ಕತಿ ಕೃತಿ ಪ್ರಕಟಗೊಂಡಿದೆ. ಬೇಸಾಯದ ಕತಿಗೆ ಕೃತಿಗೆ ಸಾಹಿತ್ಯ ಅಕಾಡೆಮಿಯ ಸಿಂಪಿ ಲಿಂಗಣ್ಣ ದತ್ತಿ, ಜೀವನಚರಿತ್ರೆ ಪ್ರಶಸ್ತಿ ಲಭಿಸಿದೆ.