ಹಾವೇರಿ: ಮುಖ್ಯಮಂತ್ರಿ ಯಡಿಯೂರಪ್ಪನವರ ಮೇ.೬ರಂದು ಘೋಷಿಸಿರುವ ವಿಶೇಷ ಪ್ಯಾಕೇಜ್ ಜನಸಾಮಾನ್ಯರ ಕಷ್ಟದ ಪರಿಸ್ಥಿತಿಗೆ ಅನುಕೂಲವಾಗಿದ್ದು, ಪತ್ರಕರ್ತರು, ರೈತಾಪಿವರ್ಗಕ್ಕೆ ಇನ್ನಷ್ಟು ನೆರವು ಘೋಷಣೆ ಅಗತ್ಯವಾಗಿತ್ತು ಎಂದು ಕೆಪಿಸಿಸಿ ಕಾರ್ಯದರ್ಶಿ ಡಾ.ಪ್ರಕಾಶಗೌಡ ಪಾಟೀಲ ತಿಳಿಸಿದ್ದಾರೆ.
ಈಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕ್ಷೌರಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರು, ಹೂ, ತರಕಾರಿ ಬೆಳಗಾರರು, ಕಟ್ಟಡ ಕಾರ್ಮಿಕರು ಸೇರಿ ಸರ್ವರ ಹಿತದೃಷ್ಟಿಯಿಂದ ಘೋಷಣೆ ಮಾಡಿರುವ ೧೬೧೦ಕೋಟಿ ವಿಶೇಷ ಪ್ಯಾಕೇಜ್. ಲಾಕ್ ಡೌನಯಿಂದ ಆರ್ಥಿವಾಗಿ ತತ್ತರಿಸಿದ ಸರ್ವ ಜನಾಂಗದ ಬದುಕಿಗೆ ಅನುಕೂಲವಾಗಿದೆ.
ಲಾಕ್‌ಡೌನ್ ನಿಂದ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ರೈತರು ಹೂವು, ತರಕಾರಿ ಬೆಳೆಗಳನ್ನು ನಾಶ ಮಾಡುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳು ಬರುತ್ತಿವೆ. ರೈತರಿಗೆ ಇನ್ನು ಹೆಚ್ಚಿನ ನೆರವು ಅಗತ್ಯವಾಗಿ ಬೇಕಾಗಿತ್ತು. ಇನ್ನು ಪತ್ರಿಕಾರಂಗದಲ್ಲಿ ಜೀವದ ಹಂಗು ತೊರೆದು ಸುದ್ದಿ ಬಿತ್ತರಿಸುವ ಕಾಯಕದಲ್ಲಿ ನಿರತರಾದ ಪತ್ರಕರ್ತರಿಗೂ ಸಹ ಸರ್ಕಾರದ ವಿಶೇಷ ವಿಮೆ ಮತ್ತು ನೆರವಿಗೆ ಧಾವಿಸಬೇಕೆಂದು ಮುಖ್ಯಮಂತ್ರಿಗಳನ್ನು ಪ್ರಕಾಶಗೌಡ ಪಾಟೀಲ ಆಗ್ರಹಿಸಿದ್ದಾರೆ.