ಹಾವೇರಿ

ರೈತರ ಸಮಾವೇಶ ಇಂದು, ಕೃಷಿಕರ ಸಮಸ್ಯೆಗಳ ಚರ್ಚೆ,

ಆತ್ಮಹತ್ಯೆಗೆ ಯಾರು ಮುಂದಾಗಬಾರದು: ರಾಮಣ್ಣ ಕೆಂಚಳ್ಳೇರ


ಹಾವೇರಿ: ಕೃಷಿ ವಲಯ ಇಂದು ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ದಿಕ್ಕು ತೋಚದೇ ರೈತರು ಆತ್ಯಹತ್ಯೆಯಂತ ಹಾದಿ ಹಿಡಿಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆಗಳಿಂದಾಗಿ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇದೆ. ಯಾವದೇ ಸಮಸ್ಯೆ ಎದುರಾದರು ಅದನ್ನು ಬಗೆ ಹರಿಸಲು ರೈತ ಸಂಘ ಸದಾ ಸಿದ್ದ ಇವೆ ಎಂದು ಕನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.
ಇಲ್ಲಿ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿರುವ ರೈತರ ಸಮಾವೇಶದ ಸಿದ್ದತೆಗಳನ್ನು ವೀಕ್ಷಿಸಿ ಭಾನುವಾರ ಸಂಜೆ ಪತ್ರಿಕೆಯ ಪ್ರತಿನಿಧಿಯೊಂದಿಗೆ ಅವರು ಮಾತನಾಡಿದರು, ಕಳೆದ ೧೦ವರ್ಷಗಳಿಂದ ರೈತರಪರವಾಗಿ ಕನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮೂಲಕ ಅನೇಕ ಹೋರಾಟಗಳನ್ನು ಸಂಘಟಿಸಿ ಕೇಂದ್ರ ರಾಜ್ಯ ಸರ್ಕಾರಗಳ ವಿರುದ್ಧ ಹೋರಾಟಗಳನ್ನು ಹಮ್ಮಿಕೊಂಡು ಬರಲಾಗಿದೆ. ಅನೇಕ ಚಳುವಳಿಗಳ ಮೂಲಕ ರೈತರ ಹಲವಾರು ಬೇಡಿಕೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರ ಸಾಲಮನ್ನಾಕ್ಕೆ ಹಲವಾರು ಕಂಡಿಶನ್ ಹಾಕಿದ್ದರಿಂದ ರೈತರಿಗೆ ಅನಾನುಕೂಲವಾಗಿದೆ. ತಕ್ಷಣ ಸಾಲಮನ್ನಾಮಾಡಿದ್ದರೇ ರೈತರಿಗೆ ಅನುಕೂಲವಾಗುತ್ತಿತ್ತು, ಕಂಡಿಶನ್‌ಗಳ ರಹಿತವಾಗಿ ಎಲ್ಲ ರೈತರ ಸಾಲವನ್ನು ಮನ್ನಾ ಮಾಡಬೇಕು, ಸ್ವಾಮಿನಾಥನ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತರವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ಯಾವುದೇ ಕಾರಣಕ್ಕೂ ರೈತರು ಎಂತದೇ ಸಮಸ್ಯೆ ಬಂದರೂ ಸಹ ಆತ್ಮಹತ್ಯೆಗೆ ಮುಂದಾಗಬಾರದು ಎನ್ನುವು ಪ್ರಮುಖ ಉದ್ದೇಶವನ್ನು ಇಟ್ಟುಕೊಂಡು ಸಮಾವೇಶ ಆಯೋಜಿಸಲಾಗಿದೆ. ಜ.೨೮ರಂದು ಹಾವೇರಿಯಲ್ಲಿ ೧೦ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರಿ ಬ್ರಹತ್ ಪ್ರತಿಭಟನೆ ಹಾಗೂ ರೈತ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕೆಂಚಳ್ಳೇರ ತಿಳಿಸಿದರು.
೫೮ಸಾವಿರಕೋಟಿ ಸಾಲಮನ್ನಾ ಬಜೆಟ್‌ನಲ್ಲಿ ೨೦ಸಾವಿರಕೋಟಿರೂಗಳನ್ನು ಘೋಷಣೆ ಮಾಡಲಾಗುತ್ತಿದೆ ಎನ್ನುವ ಮಾತಿದೆ. ಕಂಡಿಶನ ರಹಿತವಾಗಿ ಸಾಲಮನ್ನಾ ಆಗಬೇಕು ಎಂದು ಒತ್ತಾಯಿಸಿದ ಅವರು, ಜಿಲ್ಲೆಯನ್ನು ಬರ ಎಂದು ಘೋಷಣೆಮಾಡಲಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ರೇಸಾರ್ಟ ರಾಜಕಾರಣದಲ್ಲಿ ತೊಡಗಿದ್ದಾರೆ. ಜಾನುವಾರುಗಳಿಗೆ ಮೇವಿಲ್ಲ, ಕೆಲವು ಕಡೆಗಳಲ್ಲಿ ಕುಡಿಯಲು ನೀರಿಲ್ಲ, ಜಿಲ್ಲಾಡಳಿತ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳು ಆರಂಭವಾಗಬೇಕು, ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಆದರೆ ಚುನಾಯಿತ ಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಜಿಲ್ಲೆ ಎಲ್ಲರಂಗದಲ್ಲಿಯು ಹಿಂದುಳಿದಿದೆ. ತುಂಗಾಮೇಲ್ಡಂಡೆ ಯೋಜನೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಕಳೆದ ೧೫ವರ್ಷಗಳಿಂದ ಪರಿಹಾರ ನೀಡಿಲ್ಲ. ಒಟ್ಟು ೩೯೦೦ರೈತರಿಗೆ ೨೪೯ಕೋಟಿರೂಗಳನ್ನು ಪರಿಹಾರ ರೂಪವಾಗಿ ನೀಡಬೇಕಾದಿದೆ. ಪರಿಹಾರ ಪಡೆಯಲು ಹಲವಾರು ಪ್ರತಿಭಟನೆಗಳನ್ನು ನಡೆಸಿ ಮನವಿ ಅರ್ಪಿಸಿದರೂ ಕೂಡಾ ಪರಿಹಾರ ಇನ್ನು ದೊರೆತಿಲ್ಲ. ಶೂನ್ಯ ಬಡ್ಡಿದರದಲ್ಲಿ ರೈತರಿಗೆ ೧೦ಲಕ್ಷರೂಗಳ ಸಾಲ ನೀಡಬೇಕು, ಕೆರೆ-ಕಟ್ಟೆಗಳನ್ನು ತುಂಬಿಸಬೇಕು, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು, ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಹಾಗೂ ಪ್ರತ್ಯೇಕ ಹಾಲು ಒಕ್ಕೂಟವನ್ನು ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.
ರೈತ ಸಮಾವೇಶದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ, ಗೌರವಾಧ್ಯಕ್ಷ ಚಾಮರಸಮಾಲಿಪಾಟೀಲ, ಪ್ರಧಾನ ಕಾರ್ಯದರ್ಶಿ ಬಡಗಲ ನಾಗೇಂದ್ರ, ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಚುಕ್ಕಿನಂಜುಂಡಸ್ವಾಮಿ, ನಂದಿನಿ ಜೈರಾಮ ಸೇರಿದಂತೆ ಪ್ರಮುಖರು ಭಾಗವಹಿಸುವರು ಎಂದು ಕೆಂಚಳ್ಳೇರ ತಿಳಿಸಿದರು.
ಈಸಂದರ್ಭದಲ್ಲಿ ಸಂಘದ ಪ್ರಮುಖರಾದ ಮಲ್ಲಿಕಾರ್ಜುನ ಬಳ್ಳಾರಿ, ಅಡಿವೆಪ್ಪ ಆಲದಕಟ್ಟಿ, ಸುರೇಶ ಚಲವಾದಿ, ಎಚ್.ವಿ.ಚಪ್ಪರದಹಳ್ಳಿ ಮತ್ತಿತರರು ಇದ್ದರು.

Show More

Related Articles

Leave a Reply

Your email address will not be published. Required fields are marked *

Back to top button
Close