Breaking News

ಹಾವೇರಿ:ಅತಿವೃಷ್ಟಿ-ಪ್ರವಾಹ ನಿರ್ವಹಣೆಗೆ ನೋಡಲ್ ಅಧಿಕಾರಿಗಳ ನೇಮಕ- ಕಂಟ್ರೋಲ್ ರೂಮ್ ಸ್ಥಾಪನೆ

ಹಾವೇರಿ:ಜಿಲ್ಲೆಯಲ್ಲಿ ಆಗುತ್ತಿರುವ ಅಧಿಕ ಮಳೆ ಹಾಗೂ ಪ್ರವಾಹ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಈ ಕೆಳಗಿನ ಸಹಾಯವಾಣಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿರುವರು.
>> ಕಂಟ್ರೋಲ್ ರೂಂ
ಹಾವೇರಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ೦೮೩೭೮-೨೪೯೧೦೨/೧೦೭೭, ಹಾವೇರಿ ತಹಶೀಲ್ದಾರ ಕಛೇರಿ ೦೮೩೭೫-೨೩೨೪೪೫, ಬ್ಯಾಡಗಿ ತಹಶೀಲ್ದಾರ ಕಛೇರಿ ೦೮೩೭೬-೨೨೮೪೨೮, ರಾಣೆಬೆನ್ನೂರ ತಹಶೀಲ್ದಾರ ಕಛೇರಿ ೦೮೩೭೩-೨೬೬೪೫೦, ಹಿರೇಕೆರೂರ ತಹಶೀಲ್ದಾರ ಕಛೇರಿ ೦೮೩೭೬-೨೮೨೨೩೧, ಸವಣೂರ ತಹಶೀಲ್ದಾರ ಕಛೇರಿ ೦೮೩೭೮-೨೪೧೬೨೬, ಶಿಗ್ಗಾಂವ ತಹಶೀಲ್ದಾರ ಕಛೇರಿ ೦೮೩೭೮-೨೫೫೦೪೪, ಹಾನಗಲ್ ತಹಶೀಲ್ದಾರ ಕಛೇರಿ ೦೮೩೭೯-೨೬೨೨೪೧ ಕಂಟೋಲ್ ರೂಂ ಸ್ಥಾಪಿಸಲಾಗಿದೆ.
>> ನೋಡಲ್ ಅಧಿಕಾರಿಗಳ ವಿವರ
ಜಿಲ್ಲೆಯ ಪ್ರವಾಹ ಪಿಡಿತ ಪ್ರದೇಶಗಳ ಸಮರ್ಥ ನಿರ್ವಹಣೆ ಹಿನ್ನೆಲೆಯಲ್ಲಿ ಹಾವೇರಿ ತಾಲೂಕಿಗೆ ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಚೈತ್ರಾ (ಮೊ:೯೪೮೦೮೪೩೦೩೬) ಮತ್ತು ಹಾವೇರಿ ತಾ.ಪಂ ಇಓ (ಮೊ.೯೪೮೦೮೬೮೧೧೦) ಹಾಗೂ ಹೆಚ್ಚುವರಿ ನೋಡಲ್ ಅಧಿಕಾರಿಯಾಗಿ ಯುವಜನ ಮತ್ತು ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ (ಮೊ:೯೪೮೨೪೫೫೬೬೩) ಅವರನ್ನು ನೇಮಕ ಮಾಡಲಾಗಿದೆ.
ರಾಣೇಬೆನ್ನೂರ ತಾಲೂಕಿಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗುಡ್ಡಪ್ಪ ಜಿ (ಮೊ:೯೯೦೦೯೭೭೮೭೬) ಮತ್ತು ರಾಣೇಬೆನ್ನೂರು ತಾ.ಪಂ ಇಓ ಹಾಗೂ ಹೆಚ್ಚುವರಿ ನೋಡಲ್ ಅಧಿಕಾರಿಯಾಗಿ ರೇಷ್ಮೆ ಮತ್ತು ಕೃಷಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಬಿ.ಎಲ್ (ಮೊ:೯೪೮೨೧೫೫೧೧೯) ಅವರನ್ನು ನೇಮಕ ಮಾಡಲಾಗಿದೆ.
ಬ್ಯಾಡಗಿ ತಾಲೂಕಿಗೆ ಜಿಲ್ಲಾ ನೊಂದಣಾಧಿಕಾರಿ ಡೊಂಬರಮತ್ತೂರ (ಮೊ:೯೮೮೦೧೨೨೦೯೯) ಮತ್ತು ಬ್ಯಾಡಗಿ ತಾ.ಪಂ ಇಓ ಹಾಗೂ ಹೆಚ್ಚುವರಿ ನೋಡಲ್ ಅಧಿಕಾರಿಯಾಗಿ ಜಿ.ಪಂ ಸಹಾಯಕ ಕಾರ್ಯದರ್ಶಿ ಜಾಫರ್ ಸುತಾರ (ಮೊ:೯೪೮೦೪೬೧೭೭೦ ಅವರನ್ನು ನೇಮಕ ಮಾಡಲಾಗಿದೆ.
ಹಿರೇಕೆರೂರ ಮತ್ತು ರಟ್ಟೀಹಳ್ಳಿ ತಾಲೂಕಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಮಖಾನೆ (ಮೊ:೭೯೭೫೫೫೨೩೩೬) ಮತ್ತು ಹಿರೇಕೆರೂರು ತಾ.ಪಂ ಇಓ ಹಾಗೂ ಹೆಚ್ಚುವರಿ ನೋಡಲ್ ಅಧಿಕಾರಿಯಾಗಿ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರನ್ನು(ಮೊ:೯೪೪೮೪೧೪೦೮೯) ನೇಮಕ ಮಾಡಲಾಗಿದೆ.
ಸವಣೂರ ತಾಲೂಕಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಜಿಲ್ಲಾ ಅಧಿಕಾರಿ ನಾಗರಾಜ (ಮೊ:೯೯೧೬೬೪೮೩೩೯) ಮತ್ತು ಸವಣೂರು ತಾ.ಪಂ ಇಓ ಹಾಗೂ ಹೆಚ್ಚುವರಿ ನೋಡಲ್ ಅಧಿಕಾರಿಯಾಗಿ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಿ.ವೈ.ಶೆಟ್ಟಪ್ಪನವರ (ಮೊ:೯೪೮೦೦೨೨೯೬೯) ಅವರನ್ನು ನೇಮಕಮಾಡಲಾಗಿದೆ.
ಶಿಗ್ಗಾಂವ ತಾಲೂಕಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ (ಮೊ:೯೮೮೬೬೩೫೪೯೯) ಮತ್ತು ಶಿಗ್ಗಾಂವ ತಾ.ಪಂ ಇಓ ಹಾಗೂ ಹೆಚ್ಚುವರಿ ನೋಡಲ್ ಅಧಿಕಾರಿಯಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ವಿನಾಯಕ ಜೋಷಿ (ಮೊ:೯೪೪೮೮೨೬೮೭೧) ಅವರನ್ನು ನೇಮಕ ಮಾಡಲಾಗಿದೆ.
ಹಾನಗಲ್ ತಾಲೂಕಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುಭಾಸಗೌಡ್ರ (ಮೊ:೯೯೧೬೫೬೫೩೬೧) ಮತ್ತು ಹಾನಲ್ ತಾ.ಪಂ ಇಓ ಹಾಗೂ ಹೆಚ್ಚುವರಿ ನೋಡಲ್ ಅಧಿಕಾರಿಯಾಗಿ ಪಶುಪಾಲನೆ ಮತ್ತು ಪಶು ವೈದ್ಯ ಸೇವೆಯ ಸಹಾಯಕ ನಿರ್ದೇಶಕ ರಾಜು ಕೂಲೇರ (ಮೊ:೭೭೬೦೬೨೭೨೭೨) ಅವರನ್ನು ನೇಮಕಮಾಡಲಾಗಿದೆ ಎಂದು ತಿಳಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
Close