ಹಾವೇರಿ

ಹಾವೇರಿ ಜಿಲ್ಲೆಯ ಪ್ರಥಮ ಕೊರೊನಾ ಸೋಂಕಿತ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

೬ರಿಂದ ೪ಕ್ಕಿಳಿದ ಕೊರೊನಾ ಸೋಂಕಿತರ ಸಂಖ್ಯೆ

ಹಾವೇರಿ: ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೩೨ ವರ್ಷದ P-೬೩೯ ವ್ಯಕ್ತಿಯು ಗುಣಮುಖನಾದ ಕಾರಣ ಆಸ್ಪತ್ರೆಯಿಂದ ಮೇ.೨೬ರಂದು ಮಂಗಳವಾರ ಬೆಳಿಗ್ಗೆ ೧೧-೨೦ ರಸುಮಾರಿಗೆ ಬಿಡುಗಡೆ ಮಾಡಲಾಯಿತು.
ಮೂಲತಃ ಸವಣೂರ ತಾಲೂಕಿನ ಎಸ್.ಎಮ್. ಕೃಷ್ಣ ನಗರದ ನಿವಾಸಿಯಾದ P-೬೩೯ ವ್ಯಕ್ತಿಯು ಮುಂಬೈನಿಂದ ಜಿಲ್ಲೆಗೆ ಆಗಮಿಸಿದ್ದು ಮೇ ೪ ರಂದು , ಈತನಿಗೆ ಸೋಂಕು ದೃಢಪಟ್ಟಿತ್ತು. ಜಿಲ್ಲೆಯ ಮೊದಲ ಕೊರೊನಾ ಪ್ರಕರಣ ಇದಾಗಿತ್ತು. ಈತನೊಂದಿಗೆ ಮುಂಬೈನಿಂದ ಆಗಮಿಸಿದ್ದ ೪೦ ವರ್ಷ ಸಹೋದರನಿಗೂ (P-೬೭೨ ) ಸೋಂಕು ದೃಢಪಟ್ಟಿತ್ತು.
ಆದರೆ ಇವನಿಗಿಂತ ಮೊದಲೇ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದನು. ಒಟ್ಟಾರೆ ಜಿಲ್ಲೆಯಲ್ಲಿ ಈವರೆಗೆ ಆರು ಜನರಿಗೆ ಕೋವಿಡ್ ಸೋಂಕು ದೃಢಗೊಂಡಿದ್ದು, ಈ ಪೈಕಿ ಎರಡು ಜನರು ಬಿಡುಗಡೆಗೊಂಡಿದ್ದಾರೆ. ನಾಲ್ಕು ಜನ ಸೋಂಕಿತರಿಗೆ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಬಿಡುಗಡೆಗೊಂಡ ಇಬ್ಬರನ್ನು ಗೃಹಪ್ರತ್ಯೇಕತೆಯಲ್ಲಿರಿಸಲಾಗುತ್ತಿದೆ.
ಮಂಗಳವಾರ ಬೆಳಿಗ್ಗೆ ಆಸ್ಪತ್ರೆಯಿಂದ P-೬೩೯ ವ್ಯಕ್ತಿ ಬಿಡುಗಡೆ ಸಂದರ್ಭದಲ್ಲಿ ಕೋವಿಡ್ ಆಸ್ಪತ್ರೆಯ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ಹಾಗೂ ಗುಲಾಬಿ ಹೂ ನೀಡಿ ಸರ್ಕಾರಿ ಅಂಬ್ಯುಲೆನ್ಸ್ ಮೂಲಕ ಮನೆಗೆ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ವಿವರವನ್ನು ಹಂಚಿಕೊಂಡ ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್ ಹಾವನೂರ ಅವರು, ಮುಂಬೈನಿಂದ ಜಿಲ್ಲೆಗೆ ಆಗಮಿಸಿದ್ದ P-೬೩೯ ವ್ಯಕ್ತಿಗೆ ಕೋವಿಡ್ ಸಓಂಕು ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈತನ ಅಂತಿಮ ವರದಿ ನೆಗಟಿವ್ ಬಂದ ಹಿನ್ನೆಲೆಯಲ್ಲಿ ಇಂದು ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಆರು ಸೋಂಕಿತರ ಪೈಕಿ ಎರಡು ಜನರು ಗುಣಮುಖಹೊಂದಿ ಬಿಡುಗಡೆಯಾಗಿದ್ದಾರೆ. ಉಳಿದಂತೆ ನಾಲ್ಕು ಜನ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಸೋಂಕತರಿಗೆ ಯಾವುದೇ ಸಮಸ್ಯೆಯಾಗದಂತೆ ಆರೋಗ್ಯ ಇಲಾಖೆ ಹೆಚ್ಚಿನ ನಿಗಾವಹಿಸಿದೆ ಎಂದು ತಿಳಿಸಿದರು.
ಕೊರೊನಾ ಸೋಂಕು ಹರಡುವ ಸಾಧ್ಯತೆಗಳಿದ್ದು, ಜನರು ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ ಧರಿಸಬೇಕು. ಸತ್ವಯುತ ಆಹಾರವನ್ನು ಸ್ವೀಕರಿಸಬೇಕು. ಜೊತಗೆ ಸರಕಾರ ಸೂಚಿಸುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ.ವಿಶ್ವನಾಥ ಸಾಲಿಮಠ, ಡಾ.ಸುರೇಶ ಪೂಜಾರ, ದಾದಿಯರು ಇತರೆ ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗುಣಮುಖನಾದ P-೬೩೯ ವ್ಯಕ್ತಿಯನ್ನು ೧೦೮ ವಾಹದಲ್ಲಿ ಚಾಲಕ ತೌಫಿಕ ಪಠಾಣ ಹಾಗೂ ಸ್ಟಾಪ್ ನರ್ಸ ಶಂಕರ ಲಮಾಣಿಯವರು ಅಂಬುಲನ್ಸ್ ವಾಹನದಲ್ಲಿ ಇತನ ಮೂಲ ಸ್ಥಾನಕ್ಕೆ ಕರೆದೊಯ್ದರು.

Show More

Related Articles

Leave a Reply

Your email address will not be published. Required fields are marked *

Back to top button
Close