ರಾಜ್ಯ

ಏತ ನೀರಾವರಿ ಯೋಜನೆಗಳ ಮೂಲಕ ರೈತರ ಸಂಕಷ್ಟ ನಿವಾರಿಸಲಾಗುವುದು ಹಿರೇಕೆರೂರಲ್ಲಿ ಸಿಎಂ ಬಿಎಸ್‌ವೈ ಹೇಳಿಕೆ

ಸಾಲಮನ್ನಾಕ್ಕೆ ಸಂಬಂದಿಸಿದ ದಾಖಲೆಗಳನ್ನು ನೀಡಿದರೆ ೨೪ ಗಂಟೆಯೋಳಗೆ ರೈತರ ಮನ್ನಾ

ಹಿರೇಕೆರೂರ: ನಾಡಿನ ರೈತ ಸಮುದಾಯ ಅನೇಕ ಕಾರಣಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿರುವದನ್ನು ನಾವು ಗಮನಿಸಿದ್ದು ರೈತರು ನೆಮ್ಮದಿಯಿಂದ ಬದುಕ ಬೇಕು ಎಂಬ ಕಾರಣದಿಂದಾಗಿ ರಾಜ್ಯದ ರೈತ ಸಮುದಾಯಕ್ಕಾಗಿ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಬಜೆಟ್‌ನಲ್ಲಿ ೫೦೦೦ ಕೋಟಿ ರೂಗಳನ್ನು ರೈತ ಸಮುದಾಯಕ್ಕೆ ಮಿಸಲಿಡಲಾಗಿದೆ. ಏತ ನೀರಾವರಿ ಯೋಜನೆ ಮೂಲಕ ರೈತರ ಸಂಕಷ್ಟಗಳನ್ನು ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಿಳಿಸಿದರು.
ಶನಿವಾರ ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ಕೆ ಆರ್ ಇ ಐ ಎಸ್ ವತಿಯಿಂದ ೧೮ ಕೋಟಿ ರೂಗಳ ವೆಚ್ಚದಲ್ಲಿ ಕಿತ್ತೂರ ರಾಣಿ ಚನ್ನಮ್ಮ ವಸತಿಶಾಲೆ ಹಾಗೂ ೧೭.೭೮ ಕೋಟಿ ರೂ ವೆಚ್ಚದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ನೂತನ ಕಟ್ಟಡಗಳನ್ನು ಉದ್ಘಾಟಿಸಿ, ತುಂಗಾ ಮೇಲ್ದಂಡೆ ಕಾಲುವೆಯಿಂದ ಹಿರೇಕೆರೂರ ಹಾಗೂ ರಟ್ಟಿಹಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ೧೮೫ ಕೋಟಿ ರುಗಳ ಹಾಗೂ ಇಂದಿರಾಗಾಂದಿ ವಸತಿ ಶಾಲೆ ಸಮುಚ್ಚಾಲಯ ನಿರ್ಮಾಣ ಸೇರಿದಂತೆ ವಿವಿಧ ಇಲಾಖೆಗಳ ಹಲವಾರು ಯೋಜನೆಗಳಿಗೆ ಒಟ್ಟು ೨೮೬.೨೮ ಕೋಟಿ ರೂಗಳಿಗೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ರೈತರಿಗೆ ತಾವು ಬೇಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಹಾಗೂ ಹೂಲಗಳಿಗೆ ನೀರು ಕೊಟ್ಟಾಗ ರೈತರು ನೆಮ್ಮದಿಯಿಂದ ಸ್ವಾವಲಂಬಿಯಾಗಲು ಸಾಧ್ಯವಿದೆ. ಸ್ವಾತಂತ್ರ ಬಂದು ಇಷ್ಟು ವರ್ಷಗಳು ಆದರು ಸಹ ಅನೇಕ ಕಾರಣಗಳಿಂದಾಗಿ ಈ ನಾಡಿನ ರೈತ ಸಮುದಾಯ ಅನೇಕ ಸಂಕಷ್ಟದಲ್ಲಿ ಸಿಲುಕಿರುವುದನ್ನು ಗಮನಿಸಲಾಗಿದೆ. ರೈತಸಮುದಾಯ ಹೇಗಾದರು ಮಾಡಿ ನೆಮ್ಮದಿಯಿಂದ ಬದುಕಬೇಕೆಂಬುದು ನಮ್ಮ ಸಂಕಲ್ಪವಾಗಿದ್ದು, ಆ ನೀಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸರ್ವಜ್ಞ ಕೆರೆ ತುಂಬಿಸುವ ಯೋಜನೆಗೆ ೧೮೫ ಕೋಟಿ ರೂ ಗಳ ವೆಚ್ಚದಲ್ಲಿ ೮೮ ಕೆರೆಗಳನ್ನು ತುಂಬಿಸಲಿದ್ದು ಇದರಿಂದಾಗಿ ೪೩ ಗ್ರಾಮಗಳಿಗೆ ಅನುಕೂಲವಾಗಲಿದೆ. ಹಿರೇಕೆರೂರ ತಾಲೂಕಿನ ೫೮ ಗ್ರಾಮ ಹಾಗೂ ರಟ್ಟಿಹಳ್ಳಿ ತಾಲೂಕಿನ ೩೦ ಗ್ರಾಮಗಳಿಗೆ ಅನು ಕೂಲವಾಗಲಿದ್ದು ಈ ಕೆಲಸಗಳನ್ನು ಶೀಘದಲ್ಲಿ ಪ್ರಾರಂಭ ಮಾಡಲಾಗುವುದು. ಇದರಿಂದಾಗಿ ಅಂರ್ತಜಲ ಕುಸಿಯುವುದನ್ನು ತಪ್ಪಿಸಿ ರೈತರ ನೆಮ್ಮದಿ ಜೀವಕ್ಕೆ ಜೀವವನ್ನು ತುಂಬಿದಂತಾಗುತ್ತದೆ. ಆ ದೃಷ್ಟಿಯಿಂದ ಈ ಕೆಲಸವನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಹಾವೇರಿ ಜಿಲ್ಲೆಗೆ ಸರ್ವಜ್ಞ ಪ್ರಾಧಿಕಾರ, ಜವಳಿ ಪಾರ್ಕ, ಸಂತ ಶಿಶುನಾಳರ ಶರೀಫಗಿರಿಯನ್ನು ಹಾಗೂ ಕನಕದಾಸ ಕಾಗಿನೆಲೆ ಅಭಿವೃದ್ಧಿ ಸೇರಿದಂತೆ ಅನೇಕ ಯೋಜನೆಗಳಿಗೆ ಆದ್ಯತೆಯನ್ನು ಬಜಟ್ಟಿನಲ್ಲಿ ನೀಡಲಾಗಿದೆ. ಸಾಲ ಮನ್ನಾಗೆ ಸಂಬಂಧಿಸಿದಂತೆ ಅರ್ಹತಾ ಪಟ್ಟಿಯನ್ನು ಪರಿಶೀಲಿಸಲಾಗುತ್ತಿದ್ದು ಯಾವ ರೈತರು ಅದಕ್ಕೆ ಸಂಬಂದಿಸಿದ ದಾಖಲೆಗಳನ್ನು ನೀಡಿದ್ದಾರೆಯೋ ಅಂತವರಿಗೆ ೨೪ ಗಂಟೆಯೋಳಗೆ ಸಾಲವನ್ನು ಮನ್ನಾ ಯೋಜನೆ ಜಾರಿಗೆ ಮಾಡಿ ಅವರಿಗೆ ಹಣವನ್ನು ತಲುಪಿಸಲಾಗುವುದು ಎಂದು ಸಿಎಂ ಬಿಎಸ್‌ವೈ ಅಭಯ ನೀಡಿದರು.
ತುಂಗಭದ್ರಾ ನದಿ ಹಾವೇರಿ ಜಿಲ್ಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಸರ್ವಜ್ಞ ಎತನೀರಾವರಿ ಯೋಜನೆ ಬಹಳ ದಿನದ ಕನಸಾಗಿ ಉಳಿದಿದ್ದು ಅದನ್ನು ಕಾರ್ಯ ರೂಪಕ್ಕೆ ತರಲಾಗಿದೆ. ಹಿರೇಕೆರೂತ ತಾಲೂಕಿನ ಕೆರೆಗಳಿಗೆ ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಅಂರ್ತಜಲ ಹೆಚ್ಚಾಗುವುದಕ್ಕಾಗಿ ಕುಮದ್ವತಿ ನದಿಗೆ ಅಡ್ಡಲಾಗಿ ಬ್ಯಾರೇಜ್ ಹಾಗೂ ಸೇತುವೆ ನಿರ್ಮಾಣಕ್ಕೆ ೧೭ ಕೋಟಿ ಹಾಗೂ ಮಳೆಯಿಂದಾಗಿ ಶೀತಲಗೊಂಡಂತ ೩೫ ಸರ್ಕಾರಿ ಶಾಲೆಗಳಿಗೆ ೪ಕೋಟಿ ೭೩ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳಿಗೆ ಇಂದಿರಾಗಾಂಧಿ ವಸತಿ ನಿಲಯಕ್ಕೆ ಚಾಲನೆ ನೀಡಲಾಗಿದೆ , ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ನಾವು ನಿಮ್ಮ ಜೊತೆಯಲ್ಲಿ ಇದ್ದೇವೆ. ಅದರಂತೆ ಈ ಜಿಲ್ಲೆ ಹಾಗೂ ತಾಲೂಕಿನ ಸರ್ವಾಂಗೀಣ ಅಬಿವೃದ್ಧಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡೆಯೂರಪ್ಪನವರು ತಿಳಿಸಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ ನಾವು ರಾಜೀನಾಮೆ ನೀಡಿ ಬಂದ ನಂತರ ಚುನಾವಣೆ ಪ್ರಚಾರಕ್ಕೆ ಬಂದಾಗ ಬಿ.ಎಸ್. ಯಡಿಯುರಪ್ಪನವರು ಬಿಜೆಪಿ ಪಕ್ಷವನ್ನು ಗೆಲ್ಲಿಸಿದರೆ ತಾಲೂಕಿನ ಸರ್ವಾಗಿಂಣ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ ಹಾಗೆಯೇ ಇಂದು ತಾಲೂಕಿಗೆ ಅಭೂತಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ಅದರಂತೆ ತಾಲೂಕಿಕೆ ಸರ್ವಜ್ಞ ಎತ ನೀರಾವರಿ ಯೋಜನೆ ಜಾರಿಗೆ ಮಾಡುವ ಮೂಲಕ ತಾಲೂಕಿನ ರೈತರನ್ನು ಎತ್ತಿ ಹಿಡಿದಿದ್ದಾರೆ. ವಿವಿಧ ಇಲಾಖೆಗಳಿಗೆ ೪೦೦ ಕೋಟಿ ರೂಗಳ ಕಾಮಗಾರಿಗೆ ಇಂದು ಚಾಲನೆ ನೀಡುವ ಮೂಲಕ ರೈತರ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಎಂದು ತಿಳಿಸಿದ ಅವರು, ಸರ್ವಜ್ಞ ಪ್ರಾಧಿಕಾರಕ್ಕೆ ಹಾಗೂ ರೈತರು ಬೆಳೆದ ಗೋವಿನ ಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ಸಿ.ಎಂ ಅವರಿಗೆ ಮನವಿ ಮಾಡಿದರು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ ಕರ್ನಾಟಕದಲ್ಲಿ ೮೨೬ ವಸತಿ ಶಾಲೆಗಳನ್ನು ಹೊಂದಿದ್ದು ೪೨೬ ಶಾಲೆಗಳು ಸ್ವಂತ ಕಟ್ಟಡಗಳನ್ನು ಹೊಂದಿದ್ದು, ಅದರಲ್ಲಿ ೧೨೬ ಶಾಲೆಗಳು ನಿರ್ಮಾಣ ಹಂತದಲ್ಲಿ ಇವೆ. ಹಾವೇರಿ ಜಿಲ್ಲೆಗೆ ೨೬ ವಸತಿ ಶಾಲೆಗಳನ್ನು ಮಂಜುರು ಮಾಡಿದ್ದು , ೧೩೭ ಕೋಟಿರೂಗಳಲ್ಲಿ ನಿರ್ಮಾಣ ವಾಗಲಿವೆ ಎಂದು ತಿಳಿಸಿದ ಅವರು, ದೂದಿಹಳ್ಳಿ ಗ್ರಾಮಕ್ಕೆ ಒಂದು ಪಿ.ಯು. ಕಾಲೇಜ ನಿರ್ಮಾಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮಾತನಾಡಿ ಬಿ.ಎಸ್.ವೈ ಅಂದರೆ ಅಭಿವೃದ್ಧಿ, ಅಭಿವೃದ್ಧಿ ಅಂದರೆ ಅದು ಬಿ.ಎಸ್.ವೈ ತಾಲೂಕಿನ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ನೀಡುವ ಮೂಲಕ ರೈತರಿಗೆ ಬೆನ್ನೇಲುಬಾಗಿ ನಿಂತಿದ್ದಾರೆ, ಅದರಂತೆ ತಾಲೂಕಿನ ಅಭಿವೃದ್ಧಿಗೋಸ್ಕರ ಬಿ.ಸಿ.ಪಾಟೀಲರ ಜೊತೆ ಕೈ ಜೋಡಿಸಲಾಗುವುದು ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಸುರೇಶ ಅಂಗಡಿ, ಗೃಹ ಸಚಿವ ಬಸವರಾಜ ಬೋಮ್ಮಾಯಿ, ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ ಶಾಸಕರಾದ ಅರುಣ ಪೂಜಾರ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿ.ಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಉಫಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ ಸೇರಿದಂತೆ ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯೆರು, ಗ್ರಾ.ಪಂ.ಅಧ್ಯಕ್ಷರು, ಸದಸ್ಯರು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಜಿಲ್ಲಾಧಿಕಾರಿ ಕೃಷ್ಣಾ ಬಾಜಪೇಯಿ ಸ್ವಾಗತಿಸಿದರು.

 

Show More

Related Articles

Leave a Reply

Your email address will not be published. Required fields are marked *

Back to top button
Close