ಬ್ಯಾಡಗಿ

ಕೋಳಿ ಪಾರಂಗೆ ನುಗ್ಗಿ ೧೫೦ಕ್ಕೂ ಹೆಚ್ಚುಕೋಳಿಗಳನ್ನು ಕದ್ದಿದ್ದಾರೆ ಕೋಳಿಕಳ್ಳರು…!


ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಲ್ಲೂರ ಗ್ರಾಮದ ಬಳಿಯ ಕೋಳಿಪಾರಂಗೆ ನುಗ್ಗಿದ ಕೋಳಿಕಳ್ಳರು ಪಾರಂನಲ್ಲಿದ್ದ ೧೫೦ಕ್ಕೂ ಹೆಚ್ಚುಕೋಳಿಗಳನ್ನು ಕದ್ದು ಪರಾರಿಯಾಗಿರುವ ಘಟನೆ ಮೇ.೧೭-೧೮ರ ನಡುವಿನ ಅವಧಿಯಲ್ಲಿ ನಡೆದಿದೆ.
ಕೊಳಿ ಫಾರಂಗೆ ದಿನಾಂಕ: ೧೭-೦೫-೨೦೨೦ ರಂದು ರಾತ್ರಿ ೧೦-೦೦ ಗಂಟೆಯಿಂದ
ದಿನಾಂಕ: ೧೮-೦೫-೨೦೨೦ ಬೆಳಗಿನ ಜಾವ ೦೫-೩೦ ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕೋಳಿ ಫಾರಂಗೆ ಸುತ್ತಲೂ ಕಟ್ಟಿದ ಜಾಲರಿಯನ್ನು ಒಂದು ಬಾಗದಲ್ಲಿ ಕಿತ್ತು ಕೋಳಿ ಫಾರಂ ಒಳಗೆ ನುಗ್ಗಿ ಅಂದಾಜು ೨೩,೫೦೦/- ಮೌಲ್ಯದ ಸುಮಾರು ೧೫೦-೧೮೦ ಕೋಳಿಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಬ್ಯಾಡಗಿ ಪೊಲೀಸ್‌ಠಾಣೆಯಲ್ಲಿ ದೂರುದಾಖಲಾಗಿದೆ.

Show More

Leave a Reply

Your email address will not be published. Required fields are marked *

Back to top button
Close