ರಾಜ್ಯ

ಪರಿಶಿಷ್ಟ ಪಂಗಡದ ಕುಂದುಕೊರತೆ ಪರಿಹರಿಸಲು ಪ್ರತ್ಯೇಕ ಸಚಿವಾಲಯ

ವಾಲ್ಮೀಕಿ ಗುರುಪೀಠದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ

ಹರಿಹರ: ಗಾಂಧಿ ಬಯಸಿದ ರಾಮರಾಜ್ಯದ ಪರಿಕಲ್ಪನೆ ನಮಗೆ ಲಭ್ಯವಾಗಿದ್ದು ರಾಮಾಯಣದಿಂದ, ಸರ್ವರಿಗೂ ಸಮಪಾಲು. ವರ್ಣ ರಹಿತ ಸಮಾಜ, ಸಮಾನ ಅವಕಾಶ, ಸಮಾಜವೇ ರಾಮರಾಜ್ಯ ಎಂದು ಮಹರ್ಷಿ ವಾಲ್ಮಿಕೀ ಯವರು ರಾಮಾಯಣದ ಮೂಲಕ ತಿಳಿಸಿದ್ದಾರೆ ಎಂದು ಮುಖ್ಯ ಮಂತ್ರಿ ಯಡಿಯೂರಪ್ಪ ಹೇಳಿದರು.
ಫೆ. ೯ರಂದು ಹರಿಹರದ ರಾಜನಹಳ್ಳಿಯಲ್ಲಿ ವಾಲ್ಮೀಕಿ ಗುರುಪೀಠದಲ್ಲಿ ಲಿಂಗೈಕ್ಯ ಜಗದ್ಗುರು ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ ೧೩ನೇ ವರ್ಷದ ಪುಣ್ಯಾರಾಧನೆ
ಮಠದ ೨೨ನೇ ವಾರ್ಷಿಕೊತ್ಸವ ಹಾಗೂ ದ್ವೀತಿಯ ವರ್ಷದ ವಾಲ್ಮೀಕಿ ಜಾತ್ರೆಯನ್ನು ಉದ್ಘಾಟಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು.
ನಮ್ಮ ಸರ್ಕಾರದಿಂದ ವಾಲ್ಮೀಕಿ ಸಮುದಾಯಕ್ಕೆ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ದಿ ಹೊಂದಲು ಅನೇಕ ರೀತಿಯಲ್ಲಿ ಸೌಲಭ್ಯ ಕಲ್ಪಿಸುತ್ತಿದೆ. ಸ್ವ ಉದ್ಯೂಗ ಕೈಗೊಳ್ಳಲು ಸಾಲ ಹಾಗೂ ಸಹಾಯಧನ ನೀಡುವುದರ ಮೂಲಕ ಸಮುದಾಂಯಕ್ಕೆ ಆರ್ಥಿಕ ಸ್ವಾಲಂಬನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ.
ಕೃಷಿಕರಿಗೆ ನೀರಾವರಿ ಮತ್ತು ಭೂಮಿ ಖರೀದಿಸಲು ನೆರವು, ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತಿದೆ. ಸಮುದಾಯದ ಮಹಿಳೆಯರು, ಮಕ್ಕಳು, ಯುವಜನರು ಈ ಎಲ್ಲಾ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಸಮುದಾಯದ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬುವುದೇ ನಮ್ಮ ಸರ್ಕಾರದ ಉದ್ದೇಶವಾಗಿದ ಎಂದರು.
ವಾಲ್ಮೀಕಿ ಸಮಾಜದ ಬೇಡಿಕೆಯಾದ ಮೀಸಲಾತಿ ಹೆಚ್ಚಳದ ಬಗ್ಗೆ ವರದಿ ನೀಡಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ಕಮಿಷಗೆ ವರದಿ ಸಲ್ಲಿಸಲು ಮನವಿ ಮಾಡಿದ್ದೇನೆ, ರಾಜ್ಯದಲ್ಲಿ ೩೫ ವರ್ಷಗಳಿಂದ ನೆನೆಗುದಿಗೆ ಬಿದ್ದಂತಹ ಪರಿವಾರ ಮತ್ತು ತಳವಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ರ್ಸೇಪಡೆ ಮಾಡಲು ಸೂಚಿಸಿದ್ದೇವೆ. ಡಾ. ರಂಗರಾಜ್ ವನದುರ್ಗ ಅವರನ್ನು ಎಸ್.ಟಿ. ಸಮೂದಾಯದಿಂದ ಕರ್ನಾಟಕ ಲೋಕಸೇವಾ ಅಯೋಗದ ಸದ್ಯಸ್ಯರನ್ನಾಗಿ ನೇಮಕ ಮಾಡಿದ್ದೇನೆ ಎಂದು ತಿಳಿಸಿದರು.
ಸಮುದಾಯದ ಒಳಿತಿಗಾಗಿ ಕುಂದುಕೋರತೆಗಳನ್ನು ಪರಿಹರಿಸಲು ನಮ್ಮ ಸರ್ಕಾರ ಪ್ರತ್ಯೇಕ ಸಚಿವಾಲಯ ಪ್ರಾರಂಭ ಮಾಡುತ್ತದೆ. ನಾಗಮೋಹನ್‌ದಾಸ್ ವರದಿ ಬಂದ ತಕ್ಷಣ ಅದನ್ನು ಕಾರ್ಯರೂಪಕ್ಕೆ ತರಲು ನಮ್ಮ ಸರ್ಕಾರ ಸಿದ್ದವಿದೆ ಬರುವ ದಿನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ದಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತೇವೆ ಎಂದರು.
ಗಂಗಾ ಕಲ್ಯಾಣ ಯೋಜನೆಯಲ್ಲಿ ೧೦.೦೦೦ ಕೊಳವೆ ಬಾವಿಗಳ ನಿರ್ಮಾಣವಾಗಿದೆ ರಾಜ್ಯದಲ್ಲಿ ಪ್ರತಿ ಗ್ರಾಮೀಣ ಪ್ರದೇಶದಲ್ಲಿ ೬೯೦೦ ಅಂಬೇಡ್ಕರ್, ವಾಲ್ಮೀಕಿ, ಸೇವಾಲಾಲ್ ಭವನಗಳು ನಿರ್ಮಾಣ ಆಗಿದೆ. ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಭೂ ಒಡೆತನ ಯೋಜನೆಯಲ್ಲಿ ೮೭೪ ಎಕರೆ ಭೂಮಿ ನೀಡಿದ್ದೆವೆ ವಾಲ್ಮೀಕಿ ಸಮಾಜ ಅಭಿವೃದ್ದಿಯಾಗಲೆಂದು ಎಸ್.ಇ.ಪಿ ಮತ್ತು ಟಿ.ಎಸ್.ಪಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಹಾಗೂ ವಿದೇಶಗಳಿಗೆ ತೆರಳಿ ಉನ್ನತ ವಿದ್ಯಾಭ್ಯಾಸ ನಡೆಸಲು ವಿದ್ಯಾರ್ಥಿ ವೇತನ ಸೌಲಭ್ಯ ನೀಡಲಾಗುವುದು. ಇನ್ನು ಮುಂದಿನ ೩ ವರ್ಷಗಳಲ್ಲಿ ಪ.ಜಾತಿ ಮತ್ತು ಪ.ಪಂಗಡದ ಸೌಲಭ್ಯಗಳಿಗಾಗಿ ನನ್ನ ಶಕ್ತಿ ಮಿರಿ ಕೆಲಸ ಮಾಡುತ್ತೆನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವಾಲ್ಮೀಕಿ ಪ್ರಸಾನ್ನಾನಂದ ಸ್ವಾಮೀಜಿಗಳು ಅಧ್ಯಕ್ಷತೆ ವಹಿಸಿದ್ದರು. ಬಸವಕೇಂದ್ರ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳು, ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರುಪೀಠದ ಶ್ರೀವಚನಾನಂದ ಸ್ವಾಮಿಗಳು ಆರ್ಶೀವಚನ ನೀಡಿದರು.
ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಶಾಸಕರಾದ ಸತೀಶ ಜಾರತಿಹೊಳಿ, ಮಾಜಿ ಸಂಸದರಾದ ವಿ.ಎಸ್ ಉಗ್ರಪ್ಪ, ಚಿತ್ರ ನಟರಾದ ಶಶಿಕುಮಾರ್ ಮಾತಾನಾಡಿದರು.
ಸಚಿವ ಬಿ.ಸಿ.ಪಾಟೀಲ, ಬಳ್ಳಾರಿ ಸಂಸದ ವೈ. ದೇವೆಂದ್ರಪ್ಪ, ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ. ಲಿಂಗಣ್ಣ, ಜಗಳೂರು ಶಾಸಕ ಎಸ್.ವಿ ರಾಮಚಂದ್ರಪ್ಪ, ಶಾಸಕ ಅರುಣಕುಮಾರ ಪೂಜಾರ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಯು.ಬಿಬಣಕಾರ, ಸೇರಿದಂತೆ ಇತರೆ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
(ಫೋಟೊ ಇದೆ)
====

Show More

Related Articles

Leave a Reply

Your email address will not be published. Required fields are marked *

Back to top button
Close