ರೈತರು ಕೃಷಿಭೂಮಿಯಲ್ಲದೇ ಕೃಷಿ ತ್ಯಾಜ್ಯಗಳನ್ನು ಉಪಯೋಗಿಸಿ ಕಡಿಮೆ ಖರ್ಚಿನಲ್ಲಿ ರಾಸಾಯನಿಕ ರಹಿತವಾದ ಸಾವಯವ ಕೃಷಿ ಪದ್ದತಿಯಲ್ಲಿ ಮನೆಯಲ್ಲಿಯೇ ಬೆಳೆಯಬಹುದಾದ ಬೇಸಾಯ
ಅಣಬೆ ಬೇಸಾಯವಾಗಿದೆ. ೨೪ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸುಲಭವಾಗಿ ಬೇಸಾಯ
ಮಾಡಬಹುದಾದ್ದರಿಂದ ಇತ್ತೀಚೆಗೆ ಕೃಷಿಕರು ಇದರೆಡೆಗೆ ವಿಶೇಷ ಆಸಕ್ತಿ ತೋರುತ್ತಿದ್ದಾರೆ. ಹೆಚ್ಚು ಬಂಡವಾಳವಿಲ್ಲದೇ ಮನೆಯಲ್ಲಿ ಲಭ್ಯವಿರುವ ಜಾಗದಲ್ಲೇ ಅಣಬೆ ಬೇಸಾಯವಾಗಿದೆ ಮಾಡಬಹುದು.
ನಮಗೆ ೧ಕೆ.ಜಿ ಧಾನ್ಯ ಬರಬೇಕಾದರೆ ೨ಕೆ.ಜಿ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಒಂದು
ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಸುಮಾರು ೩೫೦ ಮಿಲಿಯನ್ ಟನ್‌ಕೋಟಿ ಕೃಷಿ
ತ್ಯಾಜ್ಯ ನಿರ್ಮಾಣವಾಗುತ್ತದೆ. ಆದ್ದರಿಂದ ಕೃಷಿ ತ್ಯಾಜ್ಯವನ್ನು ಮರುಬಳಕೆ ಮಾಡಿ,
ಪೋಷಕಾಂಶಯುಕ್ತ ಆಹಾರದ ಕೊರತೆಯನ್ನು ನೀಗಿಸಿ ಆರ್ಥಿಕವಾಗಿಯು ಕೂಡಾ ಸುಧಾರಣೆಯಾಗಲು
ಕಂಡುಕೊಂಡತಹ ಹಲವಾರು ಉದ್ಯೋಗಗಳಲ್ಲಿ ಅಣಬೆ ಬೇಸಾಯವು ಕೂಡಾ ಇಂದು ಮಹತ್ವದ
ಕೃಷಿಯಾಗಿದೆ.
ಮರುಬಳಕೆಗೆ ಉಪಯುಕ್ತವಾದ ಕೃಷಿ ತ್ಯಾಜ್ಯ ವಸ್ತುಗಳು ೧) ಭತ್ತದ ಹುಲ್ಲು ೨)
ಗೋದಿಹುಲ್ಲು.೩)ತೆಂಗಿನಕಾಯಿಸಿಪ್ಪೆ ೪)ಮರಗಳ ಎಲೆಗಳು ೫)ರಾಗಿ ಹುಲ್ಲು, ೬) ಭತ್ತದ
ಹುಲ್ಲು, ಕಬ್ಬಿನ ಸಿಪ್ಪೆ, ಸಜ್ಜಿ ಹುಲ್ಲು ಇತ್ಯಾದಿಗಳು. ಅಣಬೆಯ ವೈಜ್ಞಾನಿಕ ಹೆಸರು
ಫಂಗಸ್ ಆಗ್ಯಾರಿಕಸ್, ಅಣಬೆ ಒಂದು ರುಚಿಕರ ಹಾಗೂ ಆರೋಗ್ಯಕ್ಕೆ ಉತ್ತಮವಾದ
ಆಹಾರವಾಗಿದೆ. ಬಹಳಷ್ಟು ಔಷಧಿಗುಣಗಳನ್ನು ಹೊಂದಿದೆ. ಅಣೆಬೆಯಲ್ಲಿ ಸಾಕಷ್ಟು
ಪ್ರಮಾಣದಲ್ಲಿ ನಾರಿನ ಅಂಶ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಣಬೆಯಲ್ಲಿರುವ ವಿಟಾಮಿನ್ ಬಿ೨ ಆಹಾರವನ್ನು ಗ್ಲುಕೋಜ್ ಆಗಿ ಪರಿವರ್ತಿಸಿ ಶಕ್ತಿಯನ್ನು ನೀಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಪಚನಕ್ರಿಯೆಗೆ ಸಹಾಯವಾಗುತ್ತದೆ.
ಅಣಬೆ ಒಂದು ಯಾಂಟಿ ಏಕ್ಸಿಡೆಂಟ್ ಕೂಡಾ ಹೌದು, ಇದು ದೇಹದಲ್ಲಿರುವ ವಿಷಕಾರಿ
ವಸ್ತುಗಳನ್ನು ಹೊರಹಾಕಿ ರೋಗ ನಿರೋಧಕ ಶಕ್ತಿ ಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ
ನೈಸಂರ್ಗಿಕ ಇನ್ಸುಲಿನ್ ಮತ್ತು ಎಂಜೈಮ್‌ಗಳು ಸೇವಿಸಿದ ಆಹಾರದಲ್ಲಿರುವ ಸಕ್ಕರೆ
ಅಂಶವನ್ನು ತಗೆದುಹಾಕಿ ಮಧುಮೇಹವನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ಹೆಚ್ಚು
ಪೋಷಕಾಂಶಯುಕ್ತ ಅಣಬೆಯಲ್ಲಿ ಪ್ರೋಟಿನ್ ಮತ್ತು ಕ್ಯಾಲ್ಸಿಯಂ ಭಾರಿ
ಪ್ರಮಾಣದಲ್ಲಿರುತ್ತದೆ. ಮೊಣಕಾಲು ನೋವಿರುವವರು, ಶುಗರ್, ಬಿಪಿ ಇರುವವರ ಆರೋಗ್ಯಕ್ಕೂ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.
ಅಣಬೆಯಲ್ಲಿರುವ ಪ್ರಮುಖ ಖನಿಜಾಂಶವಾದ ಕ್ಯಾಲ್ಸಿಯಂ ಹಾಗೂ ದೇಹಕ್ಕೆ ಬೇಕಾದ ತಾಮ್ರ
ಪೊಟ್ಯಾಶಿಯಂಮ್, ಮಾಗ್ನಿಸಿಯಂ, ಮತ್ತು ಜಿಂಕ್‌ನಂಹತ ಪೋಷಕಾಂಶಗಳ ಕೊರತೆಯನ್ನು
ನಿವಾರಿಸುತ್ತದೆ. ಒಂದು ಅಂದಾಜಿನ ಪ್ರಕಾರ ಜಗತ್ತಿನಲ್ಲಿ ಸುಮಾರು ೫೦ಸಾವಿರಕ್ಕೂ
ಹೆಚ್ಚು ಜಾತಿಯ ಅಣಬೆಗಳಿದ್ದು, ಇವುಗಳನ್ನು ೩ ಗುಂಪಾಗಳಾಗಿ ವಿಂಗಡಿಸಬಹುದು, ಒಂದು
ತಿನ್ನಲು ಯೋಗ್ಯವಾದ ಅಣಬೆಗಳು, ಇನ್ನೊಂದು ವಿಷಕಾರಿ ಅಣಬೆಗಳು, ಔಷಧಿಯ ಗುಣಗಳನ್ನು
ಹೊಂದಿರುವ ಅಣಬೆಗಳು. ಸುಮಾರು ೨೦ ಜಾತಿಯ ಅಣಬೆಗಳು ತಿನ್ನಲು ಉಪಯುಕ್ತವಾಗಿದ್ದು, ೭೦
ರಿಂದ ೮೦ ಜಾತಿಯ ವಿಷಕಾರಿ ಅಣಬೆಗಳಿವೆ. ೧೦೦ಕ್ಕೂ ಹೆಚ್ಚು ಜಾತಿಯ ಅಣಬೆಗಳು ಔಷಧಿಯ ಗುಣಗಳನ್ನು ಹೊಂದಿವೆ.
ಅಣಬೆಗಳು ನೈರ್ಗಿಕವಾಗಿ, ತಿಪ್ಪೆಗುಂಡಿ, ಹೊಲಗದ್ದೆ, ಕೌಂಪಂಡ ಗೋಡೆ ಹಾಗೂ ಹುತ್ತದ
ಮೇಲೆ ಹಾಗೂ ಕಾಡುಗಳಲ್ಲಿ ಬೆಳೆಯುತ್ತವೆ. ತಂತ್ರಜ್ಞಾವನ್ನು ಬಳಸಿ ಕೃತಕವಾಗಿ
ಮನೆಯಲ್ಲಿ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ತಂತ್ರಜ್ಞಾವನ್ನು ಬಳಿಸಿ ಕೃತಕವಾಗಿ
ಒಟ್ಟು ಮೂರುಜಾತಿಯ ಅಣಬೆಗಳನ್ನು ಬೆಳೆಯಲಾಗುತ್ತದೆ. ೧) ಡಿಂಗ್ರಿ ಅಥವಾ ಚಿಪ್ಪು
ಅಣಬೆ ೨) ಬಿಳಿಗುಂಡಿ ಅಣಬೆ ೩) ಭತ್ತದ ಹುಲ್ಲಿನ ಅಣಬೆ.
ಪ್ರಸ್ತುತ ಸಂದರ್ಭದಲ್ಲಿ ಮಹಾಮಾರಿ ಕಿಲ್ಲರ್ ಕೊರೊನಾದಿಂದ ವಿಶ್ವದಲ್ಲಿ , ದೇಶ,
ರಾಜ್ಯ, ಜಿಲ್ಲೆಯಲ್ಲಿ ಜನರು ಸಾವಿಗೆ ತುತ್ತಾಗಿದ್ದಾರೆ. ಹಿರಿಯ ವೈದ್ಯರ ಪ್ರಕಾರ
ದೇಹದಲ್ಲಿ ಇಮುನಿಟಿ ಪಾವರ್ ಕಡಿಮೆ ಇರುವವರು ಈ ರೋಗಕ್ಕೆ ತುತ್ತಾಗಿ ಮರಣ
ಹೊಂದಿದ್ದಾರೆ. ಅಂತಹ ರೋಗಿಗಳಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಸುವ ಸಾಮರ್ಥ
ಅಣಬೆಯಲ್ಲಿದೆ. ಅಲ್ಲದೇ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಸಾವಿರಾರು
ನಿರುದ್ಯೋಗಿ ಯುವಕರಿಗೆ ಉದ್ಯೋಗವದಗಿಸುವ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸುಲಭ ವಿಧಾನವಾಗಿದೆ.
ಇದೀಗ ಹಾವೇರಿಜಿಲ್ಲೆಯಲ್ಲಿ ಅಣಬೆ ಬೇಸಾಯದತ್ತ ಕೃಷಿಕರು, ಕೃಷಿಕ ಮಹಿಳೆಯು
ಮುಖಮಾಡಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಶಿದ್ದಾಪುರ ಗ್ರಾಮದ ಯುವ ರೈತ
ಮಲ್ಲಿಕಾರ್ಜುನ ಹನುಂತಪ್ಪ ಕಚವಿ ಅಣಬೆ ಬೆಳೆದು ಯಶಸ್ವಿಯಾಗಿದ್ದು, ಅಣಬೆ ಬೆಳೆದು
ಜಿಲ್ಲೆಯ ಯುವಕರಿಗೆ ಮಾದರಿಯಾಗಿದ್ದಾರೆ. ಇವರು ಬೆಳೆದ ಅಣಬೆಯನ್ನು ಬ್ಯಾಡಗಿ,
ರಾಣೇಬೆನ್ನೂರು, ಸವಣೂರು, ದಾವಣಗೆರೆ, ಹುಬ್ಬಳ್ಳಿಯಿಂದ ನೆರನೇರವಾಗಿ ಗ್ರಾಹಕರು
ಖರೀದಿಸುತ್ತಾರೆ.
ಗ್ರಾಹಕರು ಸಹ ಇವರು ಬೆಳೆದ ಅಣಬೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ,
ಮಾರುಕಟ್ಟೆಯಲ್ಲಿ ಅಣಬೆಗೆ ಬೇಡಿಕೆ ಇದೆ. ಮನೆಯಲ್ಲಿ ಕುಳಿತು ಹೆಚ್ಚು ಶ್ರಮವಿಲ್ಲದೇ
ಉತ್ತಮ ಲಾಭ ಮಾಡಬಹುದಾದ ಉದ್ಯೋಗ ’ಅಣಬೆ ಬೇಸಾಯ’. ಹೀಗಾಗಿ, ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದರೆಡೆಗೆ ವಾಲುತ್ತಿದ್ದಾರೆ. ಮಾರುಕಟ್ಟೆಗೂ ಯಾವುದೇ ಸಮಸ್ಯೆ
ಇಲ್ಲದಿರುವುದರಿಂದ ಹೆಚ್ಚು ಬಂಡವಾಳವಿಲ್ಲದೇ ಲಾಭ ಪಡೆಯಬಹು.
ಡಾ.ಜಿ. ಎಸ್. ಕುಲಕರ್ಣಿ
ಸಾವಯವ ಕೃಷಿ ತಜ್ಞರು, ಕೋಣನತಂಬಿಗೆ. ತಾ.ಹಾವೇರಿ.
ಕೃಷಿ ವಿಧಾನ ಹೇಗೆ:
೧೨ ಇಂಚು ಉದ್ದ, ೮ ಇಂಚು ಅಗಲ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ೨-೩ ಇಂಚಿನಷ್ಟು ಭತ್ತದ
ಹುಲ್ಲು ಇಲ್ಲವೇ ಮೇಲೆ ಹೇಳಿದಮತೆ ಯಾವುದಾದರು ಹುಲ್ಲು ತುಂಬಿ ಅದರ ತುದಿಯಲ್ಲಿ ಬೀಜ ಉದುರಿಸಬೇಕು. ಇದೇ ರೀತಿ ನಾಲ್ಕೈದು ಪೊದರು ಹುಲ್ಲು ಮತ್ತು ಬೀಜ ಹಾಕಬೇಕು. ನಂತರ ಬ್ಯಾಗಿನ ಕೆಳಗೆ ಮತ್ತು ಸುತ್ತ ಚುಚ್ಚಿ ೪-೫ ರಂಧ್ರ ಮಾಡಬೇಕು. ೨೦ ದಿನ ಹಾಗೆಯೇ ಬಿಟ್ಟು ೨೧ನೇ ದಿನಕ್ಕೆ ನಿತ್ಯ ೨-೩ ಸಲ ನೀರು ಸಿಂಪಡಿಸಬೇಕು. ೨೪ನೇ ದಿನಕ್ಕೆ ತೇವಾಂಶ
ಮತ್ತು ತಾಪಮಾನಕ್ಕೆ ಅನುಗುಣವಾಗಿ ನೀರುಣಿಸಬೇಕು. ೨೫, ೩೦ ಮತ್ತು ೩೫ನೇ ದಿನಕ್ಕೆ, ಅಣಬೆ ಬಾಗಿದಂತಾದಾಗ ಕಟಾವು ಮಾಡಬೇಕು. ೧ ಕೆಜಿ ಅಣಬೆ ಬೀಜಕ್ಕೆ ೮೦ ರೂಪಾಯಿ ಇದೆ. ಐದು ಬ್ಯಾಗ್‌ನಷ್ಟು ಬೇಸಾಯ ಮಾಡಬಹುದು. ಒಂದು ಬ್ಯಾಗ್‌ನಲ್ಲಿ ಸುಮಾರು ೧ರಿಂದ ಒಂದೂವರೆ ಕೆಜಿ ಅಣಬೆ ಬೆಳೆಯಬಹುದು. ಐದು ಬ್ಯಾಗ್ ಸೇರಿ ಒಟ್ಟು ೨೮೦-೩೦೦ ರೂ. ಖರ್ಚಾಗುತ್ತದೆ.
ಇದರಿಂದ ನಿವ್ವಳ ಲಾಭ ಸುಮಾರು ೪೦೦ ರೂ. ಬರುತ್ತದೆ. ಒಂದು ಕೋಣೆಯಲ್ಲಿ ದೊಡ್ಡ
ಪ್ರಮಾಣದಲ್ಲಿ ಅಣಬೆ ಬೇಸಾಯ ಮಾಡಿದರೆ, ಉತ್ತಮ ಹಣ ಗಳಿಕೆ ಮಾಡಬಹುದು.
ಬೇಸಾಯಕ್ಕೇನು ಬೇಕು?
ಭತ್ತದ ಹುಲ್ಲನ್ನು ೩-೪ ಇಂಚು ಉದ್ದ ಕತ್ತರಿಸಬೇಕು. ತಣ್ಣೀರಿನಲ್ಲಿ ೨೪ ಗಂಟೆ
ನೆನೆಸಬೇಕು. ೧೦೦ ಡಿಗ್ರಿ ಕುದಿಯುವ ನೀರಿನಲ್ಲಿ ಹುಲ್ಲನ್ನು ಸೋಂಕು ತಪ್ಪಿಸುವ
ಸಲುವಾಗಿ ಅರ್ಧ ಗಂಟೆ ಕುದಿಸಬೇಕು. ಕುದಿಸಲಾದ ಹುಲ್ಲನ್ನು ಹಿಂಡಿದರೂ ನೀರು ಬಾರದಂತೆ ನೆರಳಿನಲ್ಲಿ ಒಣಗಿಸಬೇಕು. ಅಣಬೆ ಹುಲುಸಾಗಿ ಬೆಳೆಯಲು ಇದು ಸಹಕಾರಿ.