ಬೈಕ್‌ಗೆ ಸಿಕ್ಕು ಸಾವನ್ನಪ್ಪಿದ ನಾಯಿಮರಿ, ತಾಯಿಯ ಮೂಖರೋಧನ ….ಹಾವೇರಿಯಲ್ಲೋಂದು ಮನಕಲಕುವ ಘಟನೆ
ತಾಯಿ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಮುನುಷ್ಯರಿಗಿಂತ ಪ್ರಾಣಿಗಳಲ್ಲಿ ಮರಿಗಳ ಬಗ್ಗೆ ಮಮಕಾರ ಹೆಚ್ಚು ಎನ್ನುವ ಬಗ್ಗೆ ನಗರದಲ್ಲಿ ಒಂದು ಘಟನೆಗೆ ನಡಿದೆ. ಇಲ್ಲಿನ ಹರ್ಷ-ವರ್ಷ ಬಿಲ್ಡಿಂಗ್ ಬಳಿ ಬುಧವಾರ ಸಂಜೆ ಬೈಕ್‌ಗೆ ಸಿಕ್ಕು ನಾಯಿಮರಿಯೊಂದು ಸಾವನ್ನಪ್ಪಿತ್ತು. ಸಾವನ್ನಪ್ಪಿದ ನಾಯಿಮರಿಯ ಶವವನ್ನು ಪ್ರಾಣಿಪ್ರೀಯರಾದ ಇಲ್ಲಿನ ನ್ಯಾಯವಾದಿ ಜೆ.ವೆಂಕಟೇಶ ಅವರು ಮಣ್ಣಲ್ಲಿ ಹೂತು ಬಂದಿದ್ದರು. ಈ ವೇಳೆ ಈ ನಾಯಿಮರಿಯ ತಾಯಿಯು ಸಹ ಜೊತೆಗಿತ್ತು.
ಇತ್ತ ವೆಂಕಟೇಶವರ ಮನೆಗೆ ಮರಳುತ್ತಿದ್ದಂತಯೇ ಬುಧವಾರ ಸಂಜೆ-೭-೩೦ಎ ಸುಮಾರಿಗೆ ಮಣ್ಣಲ್ಲಿ ಹೂಳಲಾಗಿದ್ದ ತನ್ನ ಮರಿಯ ಶವವನ್ನು ಬಾಯಲ್ಲಿಕಚ್ಚಿಕೊಂಡು ಅಫಘಾತ ನಡೆದ ಸ್ಥಳದಲ್ಲಿ ತಂದು ಇಷ್ಟು ಕೊಂಡು ಬುಧವಾರ ರಾತ್ರಿಯಿಂದಲೇ ತಾಯಿನಾಯಿ ದುಃಖಭರಿತವಾಗಿ ಮೌನರೋಧನಮಾಡುತ್ತಿದೆ. ಕಳದರಾತ್ರಿಯಿಂದ ಶವದೊಂದಿಗೆ ಕದಲದ ಒಂದು ರೀತಿ ನಾಯಿ ತನ್ನಮರಿಯ ಸಾವಿನ ಬಗ್ಗೆ ಪ್ರತಿಭಟನೆ ನಡೆಸುತ್ತಿದಯೇನೋ? ಎನಿಸುತ್ತಿದೆ.
ಬುಧವಾರ ಸಂಜೆ ೭-೩೦ರಿಂದ ಮರಿಯ ಶವವನ್ನು ಗ್ರೀನ್‌ಕೋರ್ಟ ಮುಂಭಾಗದರಸ್ತೆಯಲ್ಲಿಟ್ಟುಕೊಂಡು ತಾಯಿ ನಾಯಿ ನಿರಶನ ಆರಂಭಿಸಿದೆ. ಸ್ಥಳೀಯರು ಎಷ್ಟೇ ಗದರಿ, ಹೊಡೆಯಲು ಹೋದರು ಸಹ ನಾಯಿ ಮರಿಯ ಶವವನ್ನು ಬಿಟ್ಟು ತಾಯಿ ನಾಯಿ ಕದಲುತ್ತಿಲ್ಲ. ಜೊತೆ ಈನಾಯಿಯ ರಡು ಪುಟ್ಟಮರಿಗಳು ಸಹ ಇಲ್ಲಿ ಓಡಾಡುತ್ತಿವೆ.
ಈ ಹಿಂದೆ ಅಂದರೆ ಜನವರಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹರ್ಷ-ವರ್ಷಕಟ್ಟದ ಬಳಿ ಮಳೆನೀರು ನುಗ್ಗಿದ ಸಂದರ್ಭದಲ್ಲಿ ಅಧಿಗತಾನೆ ಮುರುಮರಿಗಳಿಗೆ ಜನ್ಮ ನೀಡಿದ ನಾಯಿಯ ಮರಿಗಳು ಸಾವಿನ ಸಂಕಟದಲ್ಲಿದ್ದವು. ಆಗ ತಾಯಿನಾಯಿಯ ಹಾಗೂ ಮರಿಗಳ ರೋಧನವನ್ನು ಗಮನಿಸಿದ್ದ ನ್ಯಾಯವಾದಿ ಜೆ.ವಂಕಟೇಶ ಅವರು, ಸ್ಥಳೀಯ ಅಗ್ನಿ ಶಾಮಕಠಾಣೆಗೆ ಕರಮಾಡಿ ಅವರನ್ನು ಸ್ಥಳಕ್ಕೆ ಕರೆಸಿ ಮೂರಿನಾಯಿಮರಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಮೂರುಮರಿಗಳು ತಾಯಿಯೊಂದಿಗೆ ಆಟವಾಡುತ್ತ ಬೆಳೆಯುತ್ತಿದ್ದವು. ಈಹಂತದಲ್ಲಿಯೇ ಬೈಕ್‌ಸವಾರನ ಬೈಕ್‌ಗೆ ಸಿಕ್ಕು ಮೂರುಮರಿಗಳಲ್ಲಿ ಒಂದುಮರಿ ಸಾವನ್ನಪ್ಪಿದೆ. ಇದೀಗ ಸತ್ತಿರುವ ನಾಯಿಮರಿಯ ಶವದೊಂದಿಗ ನಿರಶನ ಆರಂಭಿಸಿರುವ ತಾಯಿನಾಯಿಯ ಮೂಖರೋಧನ ಕರಳುಹಿಂಡುವಂತಿದೆ.
ಮಣ್ಣಲ್ಲಿ ಹೂಳಲಾಗಿದ್ದ ಮರಿಯ ಶವವನ್ನು ತಂದು ಅಪಘಾತನಡದ ಸ್ಥಳದಲ್ಲಿಯೇ ಅದನ್ನು ಇಟ್ಟು ರೋಧಿಸುತ್ತಿರುವ ತಾಯಿನಾಯಿಯ ತಾಯಿ ಪ್ರೀತಿ ನಿಜಕ್ಕೂ ಮನಕಲಕುತ್ತದೆ. ಈ ಬಗ್ಗ ಮಾತನಾಡಿದ ಜೆ.ವೆಂಕಟೇಶ ಅವರು ಮಳೆ ಬಂದ ಸಂದರ್ಭದಲ್ಲಿ ಬಹಳಷ್ಟು ಶ್ರಮವಹಿಸಿ ನಾಯಿಮರಿಗಳನ್ನು ರಕ್ಷಿಸಲಾಗಿತ್ತು. ಆದರೆ ಅಪಘಾತದಲ್ಲಿ ನಾಯಿಮರಿ ಸಾವನ್ನಪ್ಪಿರುವುದು , ಮಣ್ಣಲ್ಲಿ ಹೂಳಲಾಗಿದ್ದ ನಾಯಿಮರಿಯ ಶವವನ್ನು ತಂದು ತಾಯಿನಾಯಿ ರೋಧಿಸುತ್ತಿರುವುದು ಇನ್ನು ಹೆಚ್ಚಿನ ನೋವು ತಂದಿದೆ ಎಂದರು.
ಯಾರೆ ಬೈಕ್ ಸವಾರರಿರಲಿ ನಗರದಲ್ಲಿ ಬೈಕ್‌ಗಳನ್ನು ಓಡಿಸುವಾಗ ನಿಧಾನವಾಗಿ ಚಲಾಯಿಸಿ, ಮಕ್ಕಳು, ಪ್ರಾಣಿಗಳು ಓಡಾಡುತ್ತವೆ. ಜಾಗ್ರತಿಯಿಂದ ತಮ್ಮ ವಾಹನಗಳನ್ನು ಚಲಾಯಿಸಿರಿ.