ಹಾವೇರಿ: ಜಗತ್ತುಕಂಡು ಮಾಹಾನ ದಾರ್ಶನಿಕ, ಜಗಜ್ಯೋತಿ ವಿಶ್ವಗುರು ಬಸವೇಶ್ವರರ ಜಯಂತಿ ಅಂಗವಾಗಿ ಮಂಗಳವಾರ ನಗರದಲ್ಲಿ ಬಸವೇಶ್ವರರ ವಚನಗಳ ಪಠಣ, ಬಸವೇಶ್ವರರ ಪುತ್ಥಳಿ ಅನಾವರಣ, ಅಶ್ವಾರೋಹಿಬಸವೇಶ್ವರರ ಪುತ್ಥಳಿ ಅನಾವರಣ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಜರುಗುವ ಮೂಲಕ ಸರ್ವಂ ಬಸವಮಯಂ ಎನ್ನವಂತೆ ಬಸವಣ್ಣನವರ ಸ್ಮರಣೆ ನಡೆಯಿತು.
ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಬಸವಪ್ರಭಾತಪೇರೆಯು ಮಂಗಳವಾರ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಬಸವೇಶ್ವರನಗರದಲ್ಲಿರುವ ಬಸವೇಶ್ವರ ಉದ್ಯಾನವನಕ್ಕೆ ಆಗಮಿಸಿತು. ಇಲ್ಲಿ ಹೊಸಮಠದ ಬಸವಶಾಂತಲಿಂಗಶ್ರಿ, ಹಾಗೂ ಹುಕ್ಕೇರಿಮಠದ ಸದಾಶಿವಶ್ರೀಗಳ ಸಾನಿಧ್ಯದಲ್ಲಿ ಶಾಸಕ ನೆಹರು ಓಲೇಕಾರ ಅವರು ಬಸವೇಶ್ವರರ ಪುತ್ಥಳಿಯನ್ನು ಅನಾವರಣ ಗೊಳಿಸಿದರು.
ನಂತರ ಇಲ್ಲಿನ ಬಸವಭವನದಲ್ಲಿ ಉಭಯಶ್ರೀಗಳು ಹಾಗೂ ಶಾಸಕರು ಅಶ್ವಾರೋಢ ಬಸವೇಶ್ವರರ ಪುತ್ಥಳಿಯನ್ನು ಅನಾವರಣಗೊಳಿಸಿದರು. ನಂತರ ಬಸವಬಳಗದವರು ಎರ್ಪಡಿಸಿದ್ದ ಷಟಸ್ಥಲ ದ್ವಜಾರೋಹಣವನ್ನು ಉಭಯಶ್ರೀಗಳು ಹಾಗೂ ಶಾಸಕರು ನೆರವೇರಿಸಿದರು.
ಈಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿಮಠದ ಸದಾಶಿಶ್ರೀ, ವಿಶ್ವಕ್ಕೆ ವಚನ ಸಂದೇಶಗಳನ್ನು ನೀಡುವ ಮೂಲಕ ಮಹತ್ವವಾದ ಕಾರ್ಯವನ್ನು ಮಾಡಿದ್ದಾರೆ. ಶರಣರ ಕಾಯಕ ಹಾಗೂ ದಾಸೋಹ ತತ್ವವನ್ನು ನಾವು ಅಳವಡಿಸಿಕೊಳ್ಳುವ ಮೂಲಕ ಶರಣರ ಸಂದೇಶಗಳನ್ನು ಅನುಷ್ಟಾನ ಗೊಳಿಸುವ ಮೂಲಕ ಜನತೆಯ ಬದುಕು ಹಸನಾಗಿಸಲು ಯತ್ನಿಸಬೇಕೆಂದರು.
ಈಸಂದರ್ಭದಲ್ಲಿ ಮಲ್ಲಣ್ಣ ಕೊಳ್ಳಿ,ಕೆ.ಆರ್.ಬಸೇಗೆಣ್ಣಿ, ಸಂಜೀವಕುಮಾರ ನೀರಲಗಿ, ಗಿರೀಶ ತುಪ್ಪದ, ಶಿವಯೋಗಿ ಬೆನ್ನೂರು, ಮಹಾಮತಪ್ಪ ಮಾಸೂರ, ಗಂಗಣ್ಣ ಮಾಸೂರ, ಶಿವಬಸಪ್ಪ ಮುದ್ದಿ, ಮುರುಗೆಪ್ಪ ಕಡೆಕೊಪ್ಪ, ಶಿವರಾಜ ಮರ್ತೂರ, ವಿಜಯಕುಮಾರ ಚಿನ್ನಿಕಟ್ಟಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ಎಮ್.ಎಸ್.ಕೋರಿಶೆಟ್ಟರ, ಶಿವಯೋಗಿ ಹೂಲಿಕಂತಿಮಠ, ಶೋಭಾತಾಯಿ ಮಾಗಾವಿ, ಶಿವಬಸಪ್ಪ ಹಲಗಣ್ಣನವರ ಸೇರಿದಂತೆ ಅನೇಕರು ಹಾಜರಿದ್ದರು.