ಹಾವೇರಿ: ಕೊರೊನಾ ವೈರಸ್ ರೋಗ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಿದ ನಿಷೇಧಾಜ್ಞೆಯನ್ನು ಕೆಲವೊಂದು ಸಡಿಲಿಕೆ ನೀಡಿ ಜೂನ್ ೩೦ ವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಮೂಲಕ ಹೊರಡಿಸಲಾದ ಮಾರ್ಗಸೂಚಿಗಳ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಸಾರಿಗೆ ಸಂದರ್ಭಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು. ವಿವಾಹ ಕಾರ್ಯಕ್ರಮದಲ್ಲಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ನಡೆಸಲು ಅನುಮತಿ ನೀಡಿದೆ. ವಿವಾಹ ಸಮಾರಂಭ ನಡೆಸಲು ಅನುಮತಿಗಾಗಿ ತಾಲ್ಲೂಕು ಕಛೇರಿಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ತಹಶೀಲ್ದಾರ್ ರಿಗೆ ಈ ಬಗ್ಗೆ ಮುಚ್ಚಳಿಕೆ ನೀಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ಶವ ಸಂಸ್ಕಾರದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು, ಹಾಗೂ ೨೦ ಕ್ಕಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಿದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಪಾನ್ ಬಿಡಾ, ಗುಟಕಾ ಹಾಗೂ ತಂಬಾಕು ಸೇವೆನೆಯನ್ನು ನಿಷೇಧಿಸಿದೆ. ಮದ್ಯ ಮಾರಾಟ ಅಂಗಡಿ, ಪಾನ್/ ಬಿಡಾ/ ಗುಟಕಾ/ ತಂಬಾಕು ಮಾರಾಟದ ಅಂಗಡಿಗಳ ಬಳಿ ಕನಿಷ್ಟ ೦೬ ಅಡಿ ಅಂತರ ಕಾಪಾಡುವುದು ಹಾಗೂ ಅಂಗಡಿಗಳ ಬಳಿ ಐದಕ್ಕಿ ಜನಕ್ಕಿಂತ ಹೆಚ್ಚಿನ ಜನ ನಿಲ್ಲದಂತೆ ಮಾಲಿಕರು ಕ್ರಮ ವಹಿಸಬೇಕು.
ಹಂತ ಹಂತವಾಗಿ ಲಾಕಡೌನ್ ನಿರ್ಬಂಧಗಳನ್ನು ತೆರವು: ಧಾರಕ ವಲಯ (ಅoಟಿಣಚಿiಟಿmeಟಿಣ Zoಟಿes) ಗಳ ಹೊರಗಿನ ಪ್ರದೇಶಗಳನ್ನು ಹಂತ ಹಂತವಾಗಿ ಪುನ: ತೆರೆಯುವುದು.
ಹಂತ-೧: ದಿನಾಂಕ ೦೮-೦೬-೨೦೨೦ ರ ನಂತರ ಸಾರ್ವಜನಿಕ ಧಾರ್ಮಿಕ ಸ್ಥಳಗಳು/ ಪೂಜಾ ಸ್ಥಳಗಳು, ಹೋಟೆಲಗಳು, ರೆಸ್ಟೋರೆಂಟ್ ಗಳು ಮತ್ತು ಇತರ ಆತಿಥ್ಯ ಸೇವೆಗಳು ಹಾಗೂ ಶಾಪಿಂಗ್ ಮಾಲ್‌ಗಳು ತೆರಲು ಅನುಮತಿಸಲಾಗುವುದು.
ಹಂತ-೨: ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ, ತರಬೇತಿ, ತರಬೇತಿ ಸಂಸ್ಥೆ ಇತ್ಯಾದಿಗಳನ್ನು ತೆರೆಯುವುದು. ರಾಜ್ಯ ಸರ್ಕಾರವು ಪೋಷಕರು ಮತ್ತು ಇತರ ಪಾಲುದಾರರೊಂದಿಗೆ ಸಂಸ್ಥೆಯ ಮಟ್ಟದಲ್ಲಿ ಸಮಾಲೋಚನೆಯನ್ನು ನಡೆಸುತ್ತದೆ. ಪ್ರತಿಕ್ರಿಯೆಯ ಆಧಾರದ ಮೇಲೆ ಈ ಸಂಸ್ಥೆಯನ್ನು ಪುನಃ ತೆರೆಯುವ ಬಗ್ಗೆ ಜುಲೈ ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು.
ಹಂತ-೩:
ಪರಿಸ್ಥಿತಿಯ ಪರಿಶೀಲನೆಯ ಆಧಾರದ ಮೇಲೆ ಈ ಕೆಳಗಿನ ಚಟುವಟಿಕೆಗಳನ್ನು ಮರುಪ್ರಾರಂಭಿಸಲು ದಿನಾಂಕ ನಿರ್ಧರಿಸಲಾಗುತ್ತದೆ.
೧. ಸಿನೆಮಾ ಹಾಲ್ ಗಳು, ಜಿಮ್ನಾಷಿಯಿಂ, ಈಜಿಕೊಳಗಳು, ಮನರಂಜನಾ ಉದ್ಯಾನವನಗಳು, ಚಿತ್ರಮಂದಿರಗಳು, ಬಾರಗಳು ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್ ಗಳು ಮತ್ತು ಅಂತಹುದೇ ಸ್ಥಳಗಳು.
೨. ಎಲ್ಲಾ ಸಾಮಾಜಿಕ/ ರಾಜಕೀಯ/ಕ್ರೀಡೆ/ಮನರಂಜನೆ/ಶೈಕ್ಷಣಿಕ/ ಸಾಂಸ್ಕ್ರತಿಕ/ಧಾರ್ಮಿಕ ಕಾರ್ಯಕ್ರಮಗಳು/ಇತರೆ ಗುಂಪುಗೂಡಿವಿಕೆ/ದೊಡ್ಡ ಸಭೆಗಳನ್ನು ಕಟ್ಟನುಟ್ಟಾಗಿ ನಿಷೇದಿಸಿದೆ.
ಕೋವಿಡ್-೧೯ ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು: ಕೋವಿಡ್-೧೯ ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳೂ ಅನುಬಂಧ-೧ ರಲ್ಲಿ ನಿರ್ದಿಷ್ಟಪಡಿಸಿದಂತೆ, ಜಿಲ್ಲೆಯಾದ್ಯಾಂತ ಅನುಸರಿಸುವುದು.
ರಾತ್ರಿ ಕರ್ಫ್ಯೂ : ಜಿಲ್ಲೆಯಾದ್ಯಾಂತ ಪ್ರತಿ ದಿನ ರಾತ್ರಿ ೦೯ ರಿಂದ ಬೆಳಿಗ್ಗೆ ೦೫ ರವರೆಗೆ ಎಲ್ಲಾ ಚಟುವಟಿಕೆಗಳ ಹಾಗೂ ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.
ಲಾಕ್ ಡೌನ್ ಧಾರಕ ವಲಯ (ಅoಟಿಣಚಿiಟಿmeಟಿಣ Zoಟಿes) ಗಳಿಗೆ ಸೀಮಿತವಾಗಿದೆ:
ಲಾಕ್ ಡೌನ್ ಆದೇಶವು ೩೦ ಜೂನ್ ೨೦೨೦ ರವರೆಗೆ ಧಾರಕ ವಲಯ (ಅoಟಿಣಚಿiಟಿmeಟಿಣ Zoಟಿes)ಗಳಲ್ಲಿ ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತದೆ.
ಧಾರಕ ವಲಯಗಳಲ್ಲಿ, ಅಗತ್ಯ ಚಟುವಟುಕೆಗಳನ್ನು ಮಾತ್ರ ಅನುಮತಿಸಲಾಗುವುದು, ವೈದ್ಯಕೀಯ ತುರ್ತುಸ್ಥಿತಿಗಳನ್ನು ಹೊರತುಪಡಿಸಿ ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆಯನ್ನು ಕಾಪಾಡಿಕೊಳ್ಳಲು ಈ ವಲಯಗಳಲ್ಲಿ ಅಥವಾ ಹೊರಗೆ ಜನರ ಚಲನೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಪರಿಧಿಯ ನಿಯಂತ್ರಣವಿರುತ್ತದೆ. ಧಾರಕ ವಲಯಗಳಲ್ಲಿ ಅಗತ್ಯವಿರುವಂತೆ ತೀವ್ರವಾದ ಸಂಪರ್ಕ ಪತ್ತೆ ಹಚ್ಚುವಿಕೆ, ಮನೆ-ಮೆನಗೆ ಕಣ್ಗಾವಲು ಮತ್ತು ಇತರ ಕ್ಲಿನಿಕಲ್ ಹಸ್ತಕ್ಷೇಪ ಇರುತ್ತದೆ. ಮೇಲಿನ ಉದ್ದೇಶಕ್ಕಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸರಬೇಕು.
ವ್ಯಕ್ತಿಗಳು ಮತ್ತು ಸರಕುಗಳ ಅನಿಯಂತ್ರಿತ ಚಲನೆ :
ವ್ಯಕ್ತಿಗಳು ಮತ್ತು ಸರಕುಗಳ ಅಂತರ-ಜಿಲ್ಲೆ ಮತ್ತು ಅಂತರ್-ರಾಜ್ಯ ಚಲನೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಅಂತಹ ಚಲನೆಗಳಿಗೆ ಪ್ರತ್ಯೇಕ ಅನುಮತಿ, ಅನುಮೋದನೆ ಮತ್ತು ಇ-ಪರವಾನಗಿ ಅಗತ್ಯವಿರುವುದಿಲ್ಲ.
ದುರ್ಬಲ ವ್ಯಕ್ತಿಗಳ ರಕ್ಷಣೆ : ೬೫ ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ-ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತುಪಡಿಸಿ ಮನೆಯಲ್ಲೆಯೇ ಇರಲು ಸೂಚಿಸಲಾಗಿದೆ.
ಆರೋಗ್ಯ ಸೇತು ಆಪ್ ಬಳಕೆ:
ಆರೋಗ್ಯ ಸೇತು ಸೋಂಕಿನ ಸಂಭವನೀಯ ಅಪಾಯವನ್ನು ಮೊದಲೇ ಗುರುತಿಸಲು ಅನುವು ಮಾಡಿಕೊಡುತ್ತದೆ. ಮತ್ತು ಇದರಿಂದ ವ್ಯಕ್ತಿಗಳು ಮತ್ತು ಸಮುದಾಯಕ್ಕೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ.
ಕಚೇರಿಯ ಮತ್ತು ಕೆಲಸದ ಸ್ಥಳಗಳಲ್ಲಿ ಸುರಕ್ಷತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಉದ್ಯೋಗದಾತರು ಆರೋಗ್ಯ ಸೇತು ಆಪ್ ಅನ್ನು ಎಲ್ಲಾ ಉದ್ಯೋಗಿಗಳು ಮೊಬೈಲ ಪೋನಗಳಲ್ಲಿ ಡೌನ್ ಲೋಡ್ ಮಾಡಿಕೊಂಡಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು :
ಎಲ್ಲಾ ಪೌರಾಯುಕ್ತರು ಮೇಲಿನ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ಘಟನ ಕಮಾಂಡರಗಳಾಗಿ (Iಟಿಛಿiಜeಟಿಣ ಅommಚಿಟಿಜeಡಿ) ನಿಯೋಜಿಸಲಾಗಿದೆ. ಈ ಘಟನಾ ಕಮಾಂಡರಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಮಾರ್ಗಸೂಚಿಯ ಸಮಗ್ರ ಅನುಷ್ಠಾನಕ್ಕೆ ಜವಾಬ್ದಾರರಾಗಿರುತ್ತಾರೆ.
ದಂಡನೀಯ ಉಪಬಂಧಗಳು : ಕೋವಿಡ್-೧೯ ನಿರ್ವಹಣೆಯ ಲಾಕಡೌನ ಕ್ರಮಗಳನ್ನು ರಾಷ್ಟ್ರೀಯ ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು, ವಿಪತ್ತು, ನಿರ್ವಹಣಾ ಕಾಯ್ದೆ ೨೦೦೫ ಸೆಕ್ಷನ ೫೧ ರಿಂದ ೬೦ ರ ಉಪಬಂಧಗಳು ಅಲ್ಲದೇ ಭಾರತೀಯ ದಂಡ ಸಂಹಿತೆ ಸೆಕ್ಷನ ೧೮೮ರ ಅಡಿಯಲ್ಲಿನ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಅವರ ವಿರುದ್ಧ ಕ್ರಮ ಜರುಗಸಬಹುದಾಗಿದೆ.
ಈ ಮೇಲ್ಕಂಡ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೋಳಿಸಲು ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ ಐದು ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ಮಾತ್ರ ತೆರೆಯಲು ಅವಕಾಶನೀಡಲಾಗಿದೆ ಎಂದು ತಿಳಿಸಿದ್ದಾರೆ.