Breaking News

೨೦ ಲಕ್ಷಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಪ್ರಧಾನಿ ಮೋದಿ ಘೋಷಣೆ , ಹೊಸರೂಪ, ಹೊಸ ನಿಯಮದೊಂದಿಗೆ ಮೇ.18ರೊಳಗೆ ಲಾಕ್‌ಡೌನ್ ೪.೦


ನವದೆಹಲಿ: ಪ್ರಧಾನಿ ಮೋದಿ ಮೇ.೧೨ರಂದು ರಾತ್ರಿ ೮ ಗಂಟೆಗೆ ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡಿದರು. ಕಳೆದ ನಾಲ್ಕು ತಿಂಗಳಿಂದ ದೇಶ ಕೊರೊನಾ ವಿರುದ್ಧ ಹೋರಾಡುತ್ತಿದೆ. ವಿಶ್ವದಲ್ಲೇ ೪೨ ಲಕ್ಷ ಜನ ಸೋಂಕಿಗೊಳಗಾಗಿದ್ದಾರೆ. ಹಲವಾರು ಭಾರತೀಯರು ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡಿದ್ದಾರೆ. ಈ ಸೋಂಕಿನ ವಿರುದ್ಧ ನಾವೆಲ್ಲರೂ ಹೋರಾಡಿ ಗೆಲ್ಲಬೇಕಿದೆ, ಎಲ್ಲರೂ ತಮ್ಮ ಸಂಕಲ್ಪವನ್ನು ಇನ್ನೂ ಗಟ್ಟಿಗೊಳಿಸಬೇಕಿದೆ ಎಂದು ಪ್ರಧಾನಿ ಮೋದಿಯವರು ೨೦ ಲಕ್ಷಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದರು.
೨೦ ಲಕ್ಷಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್‌ನಿಂದ ದೇಶದ ಬಹುತೇಕ ವಲಯಗಳಿಗೆ ಅನುಕೂಲವಾಗಲಿದೆ. ಬಡವರಿಗೆ. ಸಂಘಟಿತರಿಗೆ, ಅಸಂಘಟಿತರಿಗೆ, ವಲಸೆ ಕಾರ್ಮಿಕರಿಗೆ ಎಲ್ಲರಿಗೂ ಅನುಕೂಲವಾಗಲಿದೆ ಎಂದರು. ಹೊಸರೂಪ, ಹೊಸ ನಿಯಮದೊಂದಿಗೆ ಲಾಕ್‌ಡೌನ್ ೪.೦ ಘೋಷಿಸಿದ ಪ್ರಧಾನಿಯವರು, ಮೇ.೧೮ರ ಮೊದಲೆ ಹೊಸನಿಯಮಗಳನ್ನು ಘೋಷಿಸಲಾಗುವುದು ಎಂದರು.
ವಿಶ್ವವೇ ಒಂದು ಕುಟುಂಬ ಎಂದು ಭಾರತೀಯರು ನಂಬಿದ್ದಾರೆ. ಈಗಾಗಲೇ ಭಾರತ ಟಿಬಿ, ಪೋಲಿಯೋ ವಿರುದ್ಧ ಹೋರಾಡಿ ಗೆದ್ದಿದೆ. ಭಾರತ ವಿಶ್ವದ ಗಮನಸೆಳೆದಿದೆ. ಭಾರತದಲ್ಲಿ ಬದಲಾವಣೆಯಾದರೆ ವಿಶ್ವವೇ ಬದಲಾಗುತ್ತೆ. ನಮ್ಮ ದೇಶದಲ್ಲಿ ಉತ್ತಮ ಪ್ರತಿಭೆಗಳಿವೆ, ನಮ್ಮಲ್ಲಿ ಉತ್ಪಾದನೆ ಹೆಚ್ಚಿದೆ, ಗುಣಮಟ್ಟವೂ ಹೆಚ್ಚಿದೆ ಎಂದು ಅವರು ಹೇಳಿದರು.
ಭಾರತ ಆತ್ಮ ನಿರ್ಭರ ದೇಶ ಆಗಬೇಕು. ಸ್ವಾವಲಂಬಿ ಭಾರತ ಎಂಬುದನ್ನು ನಾವು ತೋರಿಸಬೇಕು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ
ಆತ್ಮ ನಿರ್ಭರ ಭಾರತ ನಮ್ಮೆಲ್ಲರ ಧ್ಯೇಯವಾಗಲಿ, ಭಾರತ ಸ್ವಾವಲಂಬಿ ಎಂಬುದನ್ನು ತೋರಿಸಬೇಕಿದೆ ಎಂದು ಅವರು, ಕೋವಿಡ್ ಸಂಕಟ ಶುರುವಾದ ಸಂದರ್ಭದಲ್ಲಿ ಭಾರತದಲ್ಲಿ ಪಿಪಿಇ ಕಿಟ್ ತಯಾರಾಗುತ್ತಿರಲಿಲ್ಲ, ಎನ್ ೯೫ ಮಾಸ್ಕ್ ಗಳು ಕೆಲವು ಸಂಖ್ಯೆಯಲ್ಲಿ ಮಾತ್ರವೇ ಉತ್ಪಾದನೆಯಾಗುತ್ತಿತ್ತು. ಈಗ ಭಾರತದಲ್ಲಿ ದಿನಂಪ್ರತಿ ೨ ಲಕ್ಷ ಪಿಪಿಇ ಕಿಟ್ ಹಾಗೂ ಎನ್ ೯೫ ಮಾಸ್ಕ್ ಗಳನ್ನು ತಯಾರಿಸುತ್ತಿದೆ ಎಂದರು.
.
ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್ ದೇಶದ ಜಿಡಿಪಿಯ ಶೇ.೧೦ ರಷ್ಟು ಇರಲಿದೆ. ಈ ಆರ್ಥಿಕ ಪ್ಯಾಕೇಜ್ ದೇಶದ ಕಾರ್ಮಿಕರು, ದೇಶದ ರೈತರು, ತೆರಿಗೆಯನ್ನು ಪ್ರಾಮಾಣಿಕವಾಗಿ ಪಾವತಿಸಿ, ದೇಶದ ಅಭಿವೃದ್ಧಿಗೆ ಸಹಕರಿಸುವ ಮಧ್ಯಮ ವರ್ಗಕ್ಕಾಗಿ ಘೋಷಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಸ್ವಾವಂಬಿ ಭಾರತ ಆಗಬೇಕಾದರೆ ದೇಶದ ಜನತೆ ಖಾದಿ, ಹ್ಯಾಂಡ್ ಲೂಮ್ ರೀತಿಯ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ಅದನ್ನು ಹೆಚ್ಚು ಪ್ರಚಾರ ಮಾಡುವಂತೆ ದೇಶದ ಜನತೆಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
Close