ಹಾವೇರಿ: ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ ೩ರಿಂದ ೭.೫ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಕಳೆದ ಹಲವಾರು ವರ್ಷಗಳಿ ವಾಲ್ಮೀಕಿ ಸಮಾಜ ಬಂಧುಗಳು ಹೋರಾಟದ ಮೂಲಕ
ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸುವ ಬಗ್ಗೆ ನೇಮಿಸಲಾಗಿದ್ದ
ನ್ಯಾ.ನಾಗಮೋಹನದಾಸ ಸಮಿತಿಯು ಸರ್ಕಾರಕ್ಕೆ ವರದಿ ನೀಡಿ ಮೀಸಲಾತಿಯನ್ನು ಹೆಚ್ಚಿಸಬಹದು
ಎಂದು ಶಿಪಾರಸು ಮಾಡಿದೆ. ಸರ್ಕಾರ ಪರಿಶಿಷ್ಟ ಪಂಗಡಕ್ಕೆ ೭.೫ ಮೀಸಲಾತಿಯನ್ನು
ಹೆಚ್ಚಿಸಲು ಸಂಪುಟಸಭೆಯಲ್ಲಿ ನಿರ್ಣಯ ಕೈಗೊಂಡು ಜಾರಿಗೊಳಿಸುವಂತೆ ಜಿಲ್ಲಾ ವಾಲ್ಮೀಕಿ
ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಸರ್ಕಾರವನ್ನುಆಗ್ರಹಿಸಿದ್ದಾರೆ.
ಸೋಮವಾರ ಇಲ್ಲಿನ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿದ ಅವರು ಆಳುವ ಸರ್ಕಾರಗಳು ಪರಿಶಿಷ್ಟ ಪಂಗಡಕ್ಕೆ ಸಮರ್ಪಕ ಮೀಸಲಾತಿ ನೀಡದ ಕಾರಣ ಶಿಕ್ಷಣ, ಉದ್ಯೋಗ, ಸಾಮಾಜಿಕ, ಆರ್ಥಿಕವಾಗಿ ಅನ್ಯಾಯವಾಗುತ್ತಿದೆ. ಕೇಂದ್ರ
ಸರ್ಕಾರ ಜಾರಿಗೊಳಿಸಿರುವ ಶೇ ೭.೫ ಮೀಸಲಾತಿಯನ್ನು ಜಾರಿಗೊಳಿಸದ ರಾಜ್ಯ ಸರ್ಕಾರ ಕೇವಲ ಶೇ ೩ ಮೀಸಲಾತಿ ನೀಡಿ ವಾಲ್ಮೀಕಿ ಸಮಾಜಕ್ಕೆ ಅನ್ಯಾಯ ಮಾಡಿದೆ. ಈ ಮೀಸಲಾತಿಯನ್ನು ಶೇ೭.೫ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿ ಹಲವು ವರ್ಷಗಳಿಂದ ಹೋರಾಡುತ್ತಾ ಬೇಡಿಕೆ ಸಲ್ಲಿಸುತ್ತಾ ಬಂದರೂ ರಾಜ್ಯ ಸರ್ಕಾರ ಗಮನಹರಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ಯಾವುದೇ ಸರ್ಕಾರಗಳು ಬಂದರೂ ಪರಿಶಿಷ್ಟ ಪಂಗಡಕ್ಕೆ ಶೇ ೭.೫ ಮೀಸಲಾತಿ ಕೊಡಲೇಬೇಕು.
ಮೀಸಲಾತಿ ಹಕ್ಕೊತ್ತಾಯಕ್ಕಾಗಿ ರಾಜ್ಯದಾದ್ಯಂತ ರಾಜನಹಳ್ಳಿ ಮಹರ್ಷಿ ವಾಲ್ಮೀಕಿಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡು ಬ್ರಹತ್ ಪ್ರತಿಭಟನೆ ನಡೆಸಲಾಯಿತು. ಆವೇಳೆ ರಚಿಸಲಾದ ನ್ಯಾ.ನಾಗಮೋಹನದಾಸ ಸಮಿತಿ ರಾಜ್ಯಾದ್ಯಂತ ಸಂಚರಿಸಿ ಜನಾಭಿಪ್ರಾಯ ಸಂಗ್ರಹಿಸಿ ಮೀಸಲಾತಿ ಹೆಚ್ಚಳಕ್ಕೆ ಶಿಪಾರಸು ಮಾಡಿದೆ. ಆದರೆ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳಕ್ಕೆ ಹಿಂದೇಟು ಹಾಕುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಎಸ್‌ಟಿ ಮೀಸಲಾತಿ ಹೆಚ್ಚಳಕ್ಕಾಗಿ ವಾಲ್ಮೀಕಿ ಸಮಾಜವು ಬಹಳ ದೊಡ್ಡ ಹೋರಾಟ ಮಾಡಿದೆ.
ಎಸ್ ಟಿ ಕ್ಷೇತ್ರದಿಂದ ಆಯ್ಕೆಯಾದ ಜನಪ್ರತಿನಿಧಿಗಳು ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೇ ರಾಜೀನಾಮೆ
ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ ಯಾರೋಬ್ಬರು ಸಹ ಈಬಗ್ಗೆ ರಾಜೀನಾಮೆ
ನೀಡುತ್ತಿಲ್ಲ. ಸಮಾಜದ ಬಗ್ಗೆ ಇವರಿಗೆ ನಿಜವಾದ ಕಳಕಳಿ ಇದ್ದರೇ ಎಸ್‌ಟಿ ಮೀಸಲಾತಿ
೭.೫ಕ್ಕೆ ಹೆಚ್ಚಿಸಲು ಆಗ್ರಹಿಸಿ ತಕ್ಷಣ ರಾಜೀನಾಮೆ ನೀಡಬೇಕು, ಆಮೂಲಕ ಸರ್ಕಾರಕ್ಕೆ
ಒತ್ತಡ ತರಬೇಕೆಂದು ರಮೇಶ ಆನವಟ್ಟಿ ಆಗ್ರಹಿಸಿದರು.
ಈ ಹಿಂದಿನಂತೆ ಸಮಾಜದ ಜನರು ಇಲ್ಲ. ಈಗ ಎಲ್ಲರೂ ಜಾಗ್ರತವಾಗಿದ್ದಾರೆ. ಮೀಸಲಾತಿ
ವಿಷಯದಲ್ಲಿ ನಡೆದ ಹೋರಾಟದಲ್ಲಿ ಬೆಂಗಳೂರಲ್ಲಿ ಸ್ವಯಂ ಪ್ರೇರಿತವಾಗಿ ಲಕ್ಷಾಂತರ ಜನ
ಸೇರಿದ್ದರು. ಸರ್ಕಾರ ತಕ್ಷಣ ಸಂಪುಟ ಸಭೆ ಕರೆದು ೭.೫ಮೀಸಲಾತಿಯನ್ನು ಹೆಚ್ಚಿಸುವ
ಬಗ್ಗೆ ನಿರ್ಣಯ ಅಂಗೀಕರಿಸಿ ವಾಲ್ಮೀಕಿ ಸಮಾಜಕ್ಕೆ ನ್ಯಾಯವದಗಿಸಿಕೊಡಬೇಕು. ಹೀಗೆ
ತಡಮಾಡುತ್ತಾ ಹೋದರೆ ಮುಂಭರುವ ದಿನಗಳಲ್ಲಿ ೭.೫ ಮೀಸಲಾತಿ ಹೆಚ್ಚಳಕ್ಕಾಗಿ ವಾಲ್ಮೀಕಿ ಜಗದ್ಗುರು ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ನೇತೃತ್ವದಲ್ಲಿ ಮತ್ತೊಮ್ಮೆ
ಬಹುದೊಡ್ಡ ಹೋರಾಟಕ್ಕೆ ಸಮಾಜವು ಮುಂದಾಗಬೇಕಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡದೇ ವಾಲ್ಮೀಕಿ ಸಮಾಜದ ತಾಳ್ಮೆಯನ್ನು ಸರ್ಕಾರ ಪರಿಕ್ಷೀಸದೇ ತಕ್ಷಣ ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದರು.
ಸಾವಿರಾರು ಜನ ನಕಲಿ ಪ್ರಮಾಣ ಪತ್ರದ ಮೇಲೆ ಉದ್ಯೋಗ ಪಡೆದು ಸರಕಾರಿ ನೌಕರಿ ಪಡೆದು
ನಿಜವಾದ ಎಸ್ ಟಿ ಜನರ ಸೌಲಭ್ಯವನ್ನೇ ಕಬಳಿಸಿ ಅರಾಮಾಗಿದ್ದಾರೆ. ಇದರ ಬಗ್ಗೆ ತನಿಖೆ
ನಡೆಸಬೇಕು. ಸಮುದಾಯ ಬಹಳ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿ ಮೀಸಲಾತಿ ಹೆಚ್ಚಳದ ವಿಷಯವನ್ನು ಅಸೆಂಬ್ಲಿ ಬಾಗಿಲು ತನಕ ಮುಟ್ಟಿಸಿದೆ. ಈ ಅಸೆಂಬ್ಲಿಯಲ್ಲಿ ಸಮಾಜದ
ಜನಪ್ರತಿನಿಧಿಗಳು ಧ್ವನಿ ಎತ್ತಬೇಕಾಗಿದೆ. ಆ ಧ್ವನಿಗಳಿಗಾಗಿ ಸಮುದಾಯ ಎದುರು
ನೋಡುತ್ತಿದೆ ಎಂದು ರಮೇಶ ಆನವಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಶೇಖರ
ಕಳ್ಳಿಮನಿಮಾತನಾಡಿ, ಹಾವೇರಿನಗರದಲ್ಲಿ ಜಿಲ್ಲಾ ವಾಲ್ಮೀಕಿ ಭವನ ಅಪೂರ್ಣಗೊಂಡಿದ್ದರು,
ಸರ್ಕಾರ ಇದಕ್ಕೆ ಅಗತ್ಯ ಅನುದಾನ ಬಿಡುಗಡೆಮಾಡುವ ಮೂಲಕ ಭವನದ ಕಾಮಗಾರಿಯನ್ನು
ಪೂರ್ಣಗೊಳಿಸಬೇಕು. ಜೊತೆಗೆ ಪಿಡಬ್ಲೂಡಿ ಕ್ವಾಟರ್ಸ್ ಬಳಿ ನಿರ್ಮಾಣವಾಗುತ್ತಿರುವ
ವಾಲ್ಮೀಕಿ ಪುತ್ಥಳಿಯ ಸ್ಥಾಪನೆಗೆ ನಿರ್ಮಿಸಲಾಗುತ್ತಿರುವ ಕಾಮಗಾರಿಯನ್ನು ಅ.೩೧ರಂದು ನಡೆಯುವ ವಾಲ್ಮೀಕಿ ಜಯಂತಿಯೊಳಗೆ ತ್ವರಿತವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಶ್ರೀಧರ ದೊಡ್ಡಮನಿ, ಮಹರ್ಷಿ
ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಹಾವೇರಿ ತಾಲೂಕಾ ಅಧ್ಯಕ್ಷ ಅಶೋಕ ಹರನಗಿರಿ,
ರಾಣೇಬೆನ್ನೂರು ತಾಲೂಕಾ ಅಧ್ಯಕ್ಷ ಚಂದ್ರಣ್ಣ ಬೇಡರ, ಪ್ರಮುಖರಾದ ಬಸವರಾಜ ಸವೂರ,
ಮಾರುತಿ ಕನವಳ್ಳಿ ಮತ್ತಿತರರು ಹಾಜರಿದ್ದರು.