ರಾಜ್ಯ

ಕಾರ್ಯರೂಪಕ್ಕೆ ತರಲಾದ ಸಲಹೆ ಕೊಟ್ಟರೇ ಹೇಗೆ ಸಹಿಸಲಿ: ಹರಿಹರ ಘಟನೆಯಬಗ್ಗೆ ನರಸಿಪುರದಲ್ಲಿ ಸಿಎಂ ಬಿಎಸ್‌ವೈ ಹೇಳಿಕೆ

ಹಾವೇರಿ: ಹರಿರದ ಹರಜಾತ್ರೆಯಲ್ಲಿ ನಿನ್ನೆ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಬುಧವಾರ ಮುಖ್ಯಮಂತ್ರಿ ಯಡೆಯೂರಪ್ಪನವರು ತಾಲೂಕಿನ ನರಸಿಪುರದಲ್ಲಿನ ಅಂಬಿಗರ ಚೌಡಯ್ಯನವರ ಜಯಂತಿ ಸಮಾರಂಭದಲ್ಲಿ ಪ್ರಸ್ಥಾಪಿಸಿ ಈ ರೀತಿಯ ಘಟನಾವಳಿಗಳು ನಡೆದಾಗ ಅದನ್ನು ಎದುರಿಸೋದು ನನಗೆ ಅನಿವಾರ್ಯವಾಗಿದೆ. ರಾಜ್ಯದ ವಾಸ್ತವಿಕ ಸ್ಥಿತಿಗತಿಗಳನ್ನು ಅರ್ಥೈಸದೆ ಸಲಹೆಗಳನ್ನು ಕೊಟ್ಟರೆ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ.
ಇದೇ ರೀತಿ ನಿನ್ನೆ ಗೊಂದಲ ಉಂಟಾಗಿದ್ದು ನಿಜ. ೧೭ ಮಂದಿ ರಾಜೀನಾಮೆ ಕೊಟ್ಟು ೬ ತಿಂಗಳು ವನವಾಸ ಅನುಭವಿಸಿದ್ದೇ. ಅವರ ರಾಜೀನಾಮೆಯ ಕಾರಣಕ್ಕೆ ನಾನಿವತ್ತು ಸಿಎಂ ಆಗಿ ಕುಳಿತಿದ್ದೇನೆ. ಹೀಗಾಗಿ ಅವರನ್ನೆಲ್ಲಾ ಮಂತ್ರಿ ಮಾಡಬೇಕಿದೆ. ಅವರನ್ನು ಮಂತ್ರಿಮಾಡಲು ಈಗಲೇ ಒದ್ದಾಡುತ್ತಿದ್ದೇನೆ. ಈ ಬಗ್ಗೆ ನಾನು ಯೋಚನೆ ಮಾಡುತ್ತಿದ್ದೇನೆ. ಇಂಥ ಸಂದರ್ಭದಲ್ಲಿ ಒಂದೊಂದು ಸಮಾಜ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟರೆ ಬೇಡಿಕೆ ಈಡೇರಿಸುವುದು ಕಷ್ಟವಾಗುತ್ತದೆ. ಹೀಗಾಗಿ ವಚನಾನಂದಶ್ರೀಗಳಿಗೆ ತಾವು ಈ ರೀತಿಯಾಗಿ ಮಾತನಾಡಿದರೆ ಸರಿ ಅನ್ನಿಸುವುದಿಲ್ಲ ಎಂದು ಈಗಾಗಲೇ ತಿಳಿಸಿರುವುದಾಗಿ ಸಿಎಂ ಹೇಳಿದರು.

Show More

Related Articles

Leave a Reply

Your email address will not be published. Required fields are marked *

Back to top button
Close