ಬೆಂಗಳೂರು: ಕೊರೊನಾ ಸೋಂಕುಹರಡದಂತೆ ಘೋಷಣೆ ಮಾಡಲಾಗಿರುವ ಲಾಕ್ಡೌನ್ರಾಜ್ಯದಲ್ಲೂ ಮುಂದುವರಿಕೆಯಾಗಿರುವ ಕಾರಣ ಸಂಕಷ್ಟದಲ್ಲಿರುವವರಿಗೆ ಒಟ್ಟು ೧,೬೧೦ ಕೋಟಿ ವಿಶೇಷ ಪ್ಯಾಕೇಜ್ನ್ನು ಮುಖ್ಯಮಂತ್ರಿ ಬಿ.ಎಸ್.ಯಡೆಯೂರಪ್ಪ ವಿಧಾನಸೌಧದಲ್ಲಿ ಘೋಷಣೆ ಮಾಡಿದ್ದಾರೆ.
ಮೇ.೬ರಂದು ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು ಹೂ ಬೆಳೆಗಾರರ ಒಂದು ಹೆಕ್ಟೇರ್ಗೆ ೨೫ ಸಾವಿರ ರೂ ಪರಿಹಾರ ಧನ, ಆಟೋ ರಿಕ್ಷಾ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರಿಗೆ ೫ ಸಾವಿರ ಪರಿಹಾರ ಹಾಗೂ ಮಡಿವಾಳರು , ಕ್ಷೌರಿಕರಿಗೆ ೫ ಸಾವಿರ ವಿಶೇಷ ಪರಿಹಾರ ನೀಡಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ.
ಸಣ್ಣ ಹಾಗೂ ಮಧ್ಯಮ ಉದ್ಯಮಿಗಳ ವಿದ್ಯುತ್ ಬಿಲ್ ಎರಡು ತಿಂಗಳ ಪೂರ್ತಿ ಮನ್ನಾ, ತರಕಾರಿ, ಹಣ್ಣು ಬೆಳೆಗಾರರ ಸಂಕಷ್ಟದಲ್ಲಿದ್ದು ಅವರಿಗೆ ನೆರವು ನೀಡಲಿದ್ದೇವೆ. ವಿದ್ಯುತ್ಬಿಲ್ ಮುಂಗಡವಾಗಿ ತುಂಬವವರಿಗೆ ರಿಯಾಯತಿ ನೀಡಲು ನಿರ್ಧಾರ, ಕಟ್ಟಡ ಕಾರ್ಮಿಕರಿಗೆ ಹೆಚ್ಚುವರಿ ೩ ಸಾವಿರ ರೂಪಾಯಿ ಹಣಒಟ್ಟು ೫ ಸಾವಿರ ರೂಪಾಯಿ ನೇರವಾಗಿ ಬ್ಯಾಂಕ್ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ನೇಕಾರ ಸಮ್ಮಾನ್ ಯೋಜನೆ ಘೋಷಿಸಿದ ಸಿಎಂ ನೇಕಾರರಿಗೆ ಪ್ರತಿ ವರ್ಷ ೨ ಸಾವಿರ ರೂಪಾಯಿ, ನಾಳೆಯವರೆಗೆ ಉಚಿತ ಬಸ್ ವ್ಯವಸ್ಥೆ ಎಂದ ಬಿಎಸ್ವೈ ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳು ಲಾಕ್ ಡೌನ್ ನಿಂದಾಗಿ ತೊಂದರೆಗೆ ಸಿಲುಕಿದ್ದು, ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ೨ ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡುವುದಾಗಿ ಸಿಎಂ ಪ್ರಕಟಿಸಿದ್ದಾರೆ.
ಬೃಹತ್ ಕೈಗಾರಿಕೆಗಳಿಗೆ ೨ ತಿಂಗಳು ವಿದ್ಯುತ್ ಬಿಲ್ ಕಟ್ಟದಿದ್ದರೆ ಬಡ್ಡಿ ಇಲ್ಲ. ಅವರಿಗೆ ಯಾವುದೇ ದಂಡ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಗ್ರಾಹಕರು ವಿದ್ಯುತ್ ಬಿಲ್ ನ್ನು ಸರಿಯಾದ ಸಮಯಕ್ಕೆ ಪಾವತಿಸಿದರೆ, ಅಂತಹವರಿಗೆ ಒಟ್ಟು ಬಿಲ್ ಮೊತ್ತದ ಶೇ.೧ರಷ್ಟು ರಿಯಾಯಿತಿ ನೀಡಲಾಗುವುದು. ಇದರೊಂದಿಗೆ ವಿದ್ಯುತ್ ಬಿಲ್ ನ್ನು ಮುಂಗಡವಾಗಿ ಪಾವತಿಸುವ ಗ್ರಾಹಕರಿಗೂ ರಿಯಾಯಿತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಲಾಕ್ ಡೌನ್ ನಿಂದ ಎಲ್ಲ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದ ಕಾರಣ, ಕಳೆದ ೨ ದಿನಗಳಿಂದ ಕೊಂಚ ಸಡಿಲಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ನಿಯಮ ಪಾಲಿಸುವುದು ಅತ್ಯವಶ್ಯಕವಾಗಿದೆ. ಈವರೆಗೆ ೧ ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ೩೫೦೦ ಬಸ್ ಹಾಗೂ ರೈಲುಗಳಲ್ಲಿ ಅವರವರ ಸ್ಥಳಗಳಿಗೆ ಕಳುಹಿಸಲಾಗಿದೆ. ತಮ್ಮ ತಮ್ಮ ಊರುಗಳಿಗೆ ತೆರಳಲು ವಲಸೆ ಕಾರ್ಮಿಕರಿಗೆ ಉಚಿತ ಬಸ್ ಸೇವೆ ನಾಳೆ ಅಂತ್ಯಗೊಳ್ಳಲಿದೆ.
ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಇತರೇ ಕೆಲಸಗಳು ಪ್ರಾರಂಭಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾರ್ಮಿಕರು, ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕಿದೆ. ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಪರಿಸ್ಥಿತಿ ಸರಿಯಿಲ್ಲದಿದ್ದರೂ ಸಂಕಷ್ಟದಲ್ಲಿದ್ದವರ ನೆರವಿಗೆ ಸರ್ಕಾರ ಧಾವಿಸುವುದು ಕರ್ತವ್ಯ, ಹೀಗಾಗಿ ೧೬೧೦ ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಲಾಕ್ ಡೌನ್ ನಿಂದಾಗಿ ಎಲ್ಲ ದೇವಾಲಯಗಳು ಮುಚ್ಚಿವೆ. ಹೀಗಾಗಿ ಮದುವೆ, ಹಬ್ಬ, ಸಮಾರಂಭ ನಡೆದಿಲ್ಲ. ಹೀಗಾಗಿ ವಿಶೇಷವಾಗಿ ಹೂ ಬೆಳೆಗಾರರು ಬೇಡಿಕೆಯಿಲ್ಲದೇ ಸಂಕಷ್ಟಕ್ಕೆ ಅನುಭವಿಸಿ ಕಂಗಾಲಾಗಿದ್ದಾರೆ. ಒಟ್ಟು ೧೧,೬೮೭ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಹೂಗಳು ಮಾರಾಟವಾಗದೇ ರೈತರು ನಷ್ಟ ಅನುಭವಿಸಿದ್ದಾರೆ. ಈ ಸಂಕಷ್ಟವನ್ನು ಸರ್ಕಾರ ಅರ್ಥ ಮಾಡಿಕೊಂಡಿದ್ದು, ರೈತರಿಗೆ ನೆರವಾಗಲು ಸರ್ಕಾರ ಕನಿಷ್ಟ ೧ ಹೆಕ್ಟೇರ್ ಗೆ ೨೫ ಸಾವಿರ ರೂ.ಯಂತೆ ಪರಿಹಾರ ನೀಡಬೇಕೆಂದು ತೀರ್ಮಾನಿಸಿದ್ದೇವೆ.
ಆತಂಕದಲ್ಲಿದ್ದ ಹೂ ಬೆಳೆಗಾರರಿಗೆ ಇದರಿಂದ ಕೊಂಚ ಅನುಕೂಲವಾಗಲಿದೆ. ಇನ್ನು ರಾಜ್ಯದಲ್ಲಿ ಈ ಬಾರಿ ತರಕಾರಿ ಹಾಗೂ ಹಣ್ಣುಗಳ ಇಳುವರಿ ಉತ್ತಮವಾಗಿದೆ. ಆದರೆ, ಲಾಕ್ ಡೌನ್ ನಿಂದಾಗಿ ನಮ್ಮ ರೈತರು ಬೆಳೆದ ಬೆಳೆಗೆ ಸರಿಯಾದ ದರ ಸಿಗದೇ ಕಷ್ಟ ಅನುಭವಿಸಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ವಿಶೇಷ ಪ್ಯಾಕೇಜ್ ನ್ನು ಸದ್ಯದಲ್ಲೇ ಘೋಷಿಸಲಾಗುವುದು ಎಂದರು. ಈ ಕೊರೊನಾ ಪರಿಸ್ಥಿತಿಯಿಂದಾಗಿ ರೈತರು ಮಾತ್ರವಲ್ಲದೇ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಆಗಸರು, ಕ್ಷೌರಿಕರು ತಮ್ಮ ಆದಾಯ ಕಳೆದುಕೊಂಡಿದ್ದಾರೆ.
ರಾಜ್ಯದ ೬೦ ಸಾವಿರ ಅಗಸರು ಹಾಗೂ ೨,೩೦,೦೦೦ ಕ್ಷೌರಿಕರಿಗೆ ಒಂದು ಬಾರಿ ಪರಿಹಾರವಾಗಿ ೫ ಸಾವಿರ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇನ್ನು ಆಟೋ, ಟ್ಯಾಕ್ಸಿ ಚಾಲಕರು ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ ೭,೭೫೦೦ ಚಾಲಕರಿದ್ದು, ಅವರಿಗೆ ೫ ಸಾವಿರ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಸಿಎಂ ತಿಳಿಸಿದರು.