ಸಿನೆಮಾರಂಗ

ಚಿತ್ರ ವಿಮರ್ಶೆ: ಕಾಸಿಗೆ ಮೋಸ ಮಾಡದ ಅವನೇ ಶ್ರೀಮನ್ನಾರಾಯಣ

ಬಹು ನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಚಿತ್ರ ಶುಕ್ರವಾರ ತರೆಕಂಡಿದ್ದು, ಈಚಿತ್ರ ಪ್ರೇಕ್ಷಕನಿಗೆ ವಿಭಿನ್ನ ಅನುಭವ ನೀಡುತ್ತದೆ. ಅದ್ಭುತ ಮೇಕಿಂಗ್ ಹೊರತಾಗಿಯೂ ಸಿನೆಮಾದ ಅವಧಿ ತುಸು ಹೆಚ್ಚಾಯಿತು ಎನಿಸಿದರು ಕೊಟ್ಟ ಕಾಸಿಗೆ ಮೋಸಮಾಡುವುದಿಲ್ಲ.
ಕಿರಿಕ್ ಪಾರ್ಟಿ ಚಿತ್ರದ ಮೂಲಕ ದೊಡ್ಡ ಗೆಲುವನ್ನು ದಾಖಲಿಸುವ ಮೂಲಕ ಹೊಸಭರವಸೆ ಮೂಡಿಸಿದ್ದ ರಕ್ಷಿತ್ ಶೆಟ್ಟಿ ತೆರೆ ಮೇಲೆ ಬಹುದಿನಗಳ ನಂತರ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಸಿನೇಮಾದ ಪಾತ್ರ ಇವರ ಹಿಂದಿನ ಚಿತ್ರಗಳ ಪಾತ್ರಗಳಿಗಿಂತ ಭಿನ್ನವಾಗಿದೆ. ರಕ್ಷಿತ್ ತೆರೆಯನ್ನು ಆವರಿಸಿಕೊಂಡಿದ್ದಾರೆ. ನಿರ್ದೇಶಕ ಸಚಿನ್ ರವಿ ತಮ್ಮ ಮೊದಲ ನಿರ್ದೇಶನದ ಸಿನೆಮಾದಲ್ಲೇ ಭರವಸೆ ಮೂಡಿಸುತ್ತಾರೆ.
ಖಳನಾಯಕರ ಪಾತ್ರಗಳ ಅಬ್ಬರ ಸಿನೆಮಾದ ತುಂಬೆಲ್ಲ ಅಬ್ಬರಿಸಿದೆ. ಸಿನೆಮಾದಲ್ಲಿ ಗಂಭೀರತೆಯಿಲ್ಲ. ಚಿನಕುರಳಿ ಮಾತು ಹಾಗೂ ಚೇಷ್ಟೆಗಳ ಮೂಲಕ ಮೂರು ಗಂಟೆ ಅವಧಿಯ ಸಿನೆಮಾವನ್ನು ರಕ್ಷಿತ್‌ಶೆಟ್ಟಿ ಏಕಾಂಗಿಯಾಗಿ ಹೊತ್ತು ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಅವರಿಗೆ ಅಲ್ಲಲ್ಲಿ ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ ಹಾಗೂ ಅಚ್ಯುತ್ ಕುಮಾರ್ ಸಾಥ ನೀಡಿದ್ದಾರೆ. ನಾಯಕಿ ಶಾನ್ವಿ ಶ್ರೀವಾತ್ಸವ್ ಪಾತ್ರ ಸಿನೆಮಾದುದ್ದಕ್ಕೂ ಕಾಣಿಸಿಕೊಂಡರು ಅಂತ ಛಾಪು ಮೂಡಿಸುವ ದೃಶ್ಯಗಳಿಲ್ಲ.
ಅವನೇ ಶ್ರೀಮನ್ನಾರಾಯಣ ಸಿನೆಮಾ ಕನ್ನಡಲ್ಲಿ ಮತ್ತೊಂದು ವಿನೂತನ ಶೈಲಿಯ ಸಿನೆಮಾ ಎನ್ನಲಡ್ಡಿಯಿಲ್ಲ. ಅಮರಾವತಿ ಎನ್ನುವ ಊರು, ಅಲ್ಲೊಂದು ದರೋಡೆ, ಅಲ್ಲಿರುವ ಅಭೀರರು, ಗಾದಿಗಾಗಿ ದಶಕಗಳ ಕಾಳಗ, ನಾಟಕ ತಂಡ ಹಾಗು ಕಳ್ಳ ಪೋಲಿಸ್ ಆಟ! ಉಳಿದದ್ದನ್ನೆಲ್ಲ ಬೆಳ್ಳಿ ಪರದೆಯ ಮೇಲೆ ನೋಡಿಯೇ ಆನಂದಿಸಬೇಕು. ಈ ಕೌಬಾಯ್ ಸಿನೆಮಾ ಸ್ಥಳೀಯ ಸೊಗಡನ್ನು ಮೆತ್ತಿಕೊಂಡೆ ತೆರೆಯ ಮೇಲೆ ಮೂಡಿ ಬಂದಿದೆ. ಚಿತ್ರದ ಕೆಲವು ಕಡೆಗಳಲ್ಲಿ ಗ್ರಾಫಿಕ್ಸ್ ಸಹಜತೆಯಿಂದ ದೂರವಿದ್ದಂತೆ ಕಾಣಿಸುತ್ತದೆ. ತಾಂತ್ರಿಕವಾಗಿ ಅದ್ಧೂರಿತನವಿದೆ. ಚಿತ್ರಕಥೆಗೆ ಇನ್ನೊಂದಿಷ್ಟು ವೇಗಕ್ಕೆ ನೀಡಬಹುದಿತ್ತು. ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಚಿತ್ರಕತೆಗೆ ಪುರಕವಾಗಿದೆ. ಹಾಡು ಗುನುಗುವ ಗುಣ ಹೊಂದಿವೆ. ದೊಡ್ಡ ಬಜೆಟ್ಟಿನ ಸಿನೆಮಾ ಇದಾಗಿರುವುದರಿಂದ ಈಚಿತ್ರ ದೊಡ್ಡಮಟ್ಟದಲ್ಲಿ ಗೆಲ್ಲಬೇಕು, ಈಚಿತ್ರದಲ್ಲಿ ಮನರಂಜನೆಯ ಹೂರಣವಿದೆ.

Show More

Leave a Reply

Your email address will not be published. Required fields are marked *

Back to top button
Close