ಹಾವೇರಿ

ಡಾ.ಅಂಬೇಡ್ಕರ್‌ಗೆ ಅವಮಾನ, ಶಿಕ್ಷಣ ಇಲಾಖೆಯ ಆಯುಕ್ತರ ಅಮಾನತು ಗೊಳಿಸಲು ಹಾವೇರಿ ಜಿಲ್ಲಾ ಜಯ ಕರ್ನಾಟಕ ಸಂಘಟನೆ ಆಗ್ರಹ

ಹಾವೇರಿ: ರಾಜ್ಯ ಸರಕಾರದ ಶಿಕ್ಷಣ ಇಲಾಖೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಅವಹೇಳನ ಮಾಡಲಾಗಿದ್ದು , ೨೦೧೯-೨೦ರ ಶೈಕ್ಷಣಿಕ ಸಾಲಿನಲ್ಲಿ, ರಾಜ್ಯ ಸರ್ಕಾರ ನವೆಂಬರ್ ೨೬ ಸಂವಿಧಾನದ ದಿನವನ್ನು ವಿಶೇಷವಾಗಿ ಆಚರಿಸಲು ಸಂವಿಧಾನದ ದಿನ – ಶಾಲೆಗಳಲ್ಲಿ ಜಾಗೃತಿ ಅಭಿಯಾನ ಎಂಬ ಹೆಸರಿನಲ್ಲಿ ಅಭಿಯಾನದ ಮಾರ್ಗದರ್ಶಿಯನ್ನು ತಯಾರು ಮಾಡಿದ್ದು, ಆ ಮಾರ್ಗದರ್ಶಿ ಪುಸ್ತಕದಲ್ಲಿ ಡಾ.ಅಂಬೇಡ್ಕರ ಅವರನ್ನು ಅಮಾನತು ಮಾಡಲಾಗಿದ್ದು, ಶಿಕ್ಷಣ ಇಲಾಖೆಯ ಆಯುಕ್ತರನ್ನು ಅಮಾನತುಗೊಳಿಸುವಂತೆ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕ ಅಪರಜಿಲ್ಲಾಧಿಕಾರಿಗಳಿಗೆ ಬುಧವಾರ ಮನವಿ ಅರ್ಪಿಸಿ ಆಗ್ರಹಿಸಿದೆ.
ಶಾಲೆಯ ಮಕ್ಕಳಿಗೆ ನಾಟಕದ ರೂಪದಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಲು ಪಠ್ಯ ತಯಾರು ಮಾಡಿದ್ದು ಅದರಲ್ಲಿ ಅಂಬೇಡ್ಕರ್ ಒಬ್ಬರೇ ಸಂವಿಧಾನವನ್ನ ರಚನೆ ಮಾಡಿಲ್ಲ ಎಂಬ ಬರಹವನ್ನು ಉಲ್ಲೇಕಿಸಿದ್ದು, ಸಂವಿಧಾನದ ರಚನೆಯಲ್ಲಿ ಅಂಬೇಡ್ಕರ್ ಶ್ರಮವಹಿಸಿಲ್ಲ . ಅವರೊಟ್ಟಿಗಿನ ಕರಡು ಸಮಿತಿಯ ಸದಸ್ಯರು ರಚನೆ ಮಾಡಿದ್ದನ್ನು ಅಂಬೇಡ್ಕರ್ ಕೂತು ಸಹಿ ಹಾಕಿದ್ದಾರೆ ಎಂಬರ್ಥದಲ್ಲಿ ಬಿಂಬಿಸಿ ಶಿಕ್ಷಕರ ಮತ್ತು ಮಕ್ಕಳ ಮನಸಲ್ಲಿ ಅಂಬೇಡ್ಕರ್ ಬಗ್ಗೆ ಮತ್ತು ಸಂವಿಧಾನದ ರಚನೆಯ ಬಗ್ಗೆ ದೊಡ್ಡ ಗೊಂದಲವನ್ನ ಸೃಷ್ಟಿ ಮಾಡಿದ್ದಾರೆ.
ಇದು ಸಂಪೂರ್ಣ ಅಂಬೇಡ್ಕರ್ ರವರ ಬಗ್ಗೆ ಮಕ್ಕಳ ಮನಸಲ್ಲಿ ಕೀಳರಿಮೆ ಹುಟ್ಟಿಸಲು ಮಾಡಿರುವ ಕುತಂತ್ರ ಹಾಗೂ ದೇಶದ ಇತಿಹಾಸವನ್ನು ತಿರುಚುವ ಪ್ರಯತ್ನ ನಡಿಯುತ್ತಿದೆ ಎಂದು ಮೇಲ್ನೋಟಕ್ಕೆ ನೋಡಿದ ಪ್ರತಿಯೊಬ್ಬರಿಗೂ ಅರ್ಥ ಆಗುವಂತಹ ವಿಚಾರವೆ. ಹಾಗೆ ದೇಶದ ಸಂವಿಧಾನವನ್ನು ಬದಲಾಯಿಸಲು ಸೃಷ್ಠಿಸಿರುವ ವಾಮ ಮಾರ್ಗ ಇದಾಗಿದೆ.
ದೇಶದ ಪ್ರತಿಯೊಬ್ಬರಿಗೂ ಸಂವಿಧಾನದ ಶಿಲ್ಪಿ ಯಾರೆಂದರೆ ಹೇಳುವ ಒಂದೇ ಮಾತು ಡಾ.ಬಿ ಆರ್ ಅಂಬೇಡ್ಕರ್ ಎಂದು, ಆದರೆ ಕುತಂತ್ರಿ ರಾಜಕಾರಣದ ಶಡ್ಯಂತ್ರ ಮತ್ತು ದೇಶದ ಪರವಾಗಿ ದನಿಯಾಗಿದ್ದ ಅಂಬೇಡ್ಕರ್ ರವರವನ್ನು ಮೂಲೆ ಗುಂಪು ಮಾಡಿದರೆ ಇಡೀ ದೇಶದಲ್ಲಿ ದಲಿತರನ್ನು ಮೂಲೆ ಗುಂಪಾಗಿಸಬಹುದು ಎಂಬ ದೊಡ್ಡ ಶಡ್ಯಂತ್ರ ಇದರ ಹಿಂದಿದೆ, ಆದರೆ ಅಂಬೇಡ್ಕರ್ ರವರು ದಲಿತರಿಗೆ ಮಾತ್ರ ಸಂವಿಧಾನವನ್ನ ಮೀಸಲಾತಿಯನ್ನ ನೀಡಲಿಲ್ಲ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂಬುವ ನಿಟ್ಟಿನಲ್ಲಿ ಹೋರಟವನ್ನು ಮಾಡಿದರು.
ಸಾಲದು ಎಂಬಂತೆ ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೆ ರಚಿಸದರು ಎಂದು ಸಂಪೂರ್ಣವಾಗಿ ಒಪ್ಪಲು
ನಮ್ಮ ಸಂವಿಧಾನ ಎಂಬ ಪುಸ್ತಕದಲ್ಲಿ ಸಂವಿಧಾನ ಕರಡು ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಭಾರತದ ಮಾಜಿ ಸಂಸದರು ಮತ್ತು ಸಚಿವರಾದ ಟಿ.ಟಿ ಕೃಷ್ಣಮಾಚಾರಿಯವರ ಹೇಳಿಕೆಗಳು,ಅಂದಿನ ಪ್ರಧಾನಮಂತ್ರಿ ಜವಹರಲಾಲ್ ನೆಹರು ರವರ ಉಲ್ಲೇಖಗಳನ್ನು ತಾವು ಗಮನಿಸಬಹುದಾಗಿದೆ.
ಹೀಗಾಗಿ ಇಷ್ಟು ಸೂಕ್ಷ್ಮವಾದ ವಿಚಾರವನ್ನು ಗಮನಿಸದೆ ದೇಶಕ್ಕೆ ಸುಳ್ಳನ್ನೆ ಸತ್ಯವೆಂಬಂತೆ ಬಿಂಬಿಸಲು ಹೊರಟಿರುವ ರಾಜ್ಯ ಸರ್ಕಾರ ಈಗಲಾದರು ತನ್ನ ತಪ್ಪಿನ ಅರಿವನ್ನು ಮಾಡಿಕೊಂಡು ಈ ಅವಘಡಕ್ಕೆ ಕಾರಣರಾದ ರಾಜ್ಯ ಸಂಪುಟದ ಶಿಕ್ಷಣ ಸಚಿವರನ್ನು ಸಚಿವ ಸ್ಥಾನದಿಂದ , ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದ ಉಮಾಶಂಕರ್ ರವರವನ್ನು ತಮ್ಮ ತಮ್ಮ ಸ್ಥಾನಗಳಿಂದ ವಜಾಗೊಳಿಸಿ ದೇಶದ್ರೋಹ ಮತ್ತು ಅಂಬೇಡ್ಕರ್ ರವರನ್ನ ಅಲ್ಲೆಗಳೆದು ಸಂವಿಧಾನದ ಬಗ್ಗೆ ಸುಳ್ಳುಗಳನ್ನು ಹಬ್ಬಿಸಿದ ವಿಚಾರವಾಗಿ ಇವರನ್ನು ಜೈಲು ಶಿಕ್ಷೆಗೆ ಗುರಿಯಾಗಿಸಬೇಕೆಂದು ಮನವಿ ಯಲ್ಲಿ ಆಗ್ರಹಿಸಲಾಗಿದೆ.
ಸರಕಾರ ತಕ್ಷಣ ತಪ್ಪಿತಸ್ಥರಮೇಲೆ ಕ್ರಮ ಜರುಗಿಸಬೇಕು, ಶಿಕ್ಷಣ ಇಲಾಖೆಯ ಆಯುಕ್ತರನ್ನು ಅಮಾನತುಗೊಳಿಸಬೇಕು, ಈ ಕೆಲಸವನ್ನು ಮಾಡದೆ ಹೋದಲ್ಲಿ ರಾಜ್ಯವ್ಯಾಪ್ತಿಯಲ್ಲಿ ಮುಷ್ಕರವನ್ನು ಸರ್ಕಾರದ ವಿರುದ್ಧವಾಗಿ ಹೋರಟ ಮಾಡಬೇಕಾಗುತ್ತದೆ ಎಂದು ಹಾವೇರಿ ಜಿಲ್ಲಾ ಜಯ ಕರ್ನಾಟಕ ಸಂಘಟನೆ ಯ ಜಿಲ್ಲಾಧ್ಯಕ್ಷ ಸುಭಾಸ ಬೆಂಗಳೂರು, ರಾಜ್ಯ ಸಂಚಾಲಕ ರಮೇಶ ಆನವಟ್ಟಿ, ಜಿಲ್ಲಾಗೌರವಾಧ್ಯಕ್ಷ ಟಿ.ಈ.ಮೋಹನ, ಸದಾನಂದ, ಜಿಲ್ಲಾ ಕಾರ್ಯಾಧ್ಯಕ್ಷ ರಮೇಶ ಜಾಲಿಹಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮೂಗದೂರ, ಜಿಲ್ಲಾ ಉಪಾಧ್ಯಕ್ಷ ಸಂಜಯಗಾಂಧಿ ಸಂಜೀವಣ್ಣನವರ, ಸತೀಶ ಮಡಿವಾಳರ, ಸಚಿನ ಉಪ್ಪಾರ, ಶಾಹೀದ್ ದೇವಿಹೊಸೂರ, ಮೌನೇಶಗೌಡ ಪಾಟೀಲ, ಸೇರಿದಂತೆ ಅನೇಕರು ಹಾಜರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button
Close