ಹಾವೇರಿ : ಕೊರೊನಾ ಲಾಕ್ಡೌನ್ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ಇಲ್ಲಿನ ನಾಗೇಂದ್ರನಮಟ್ಟಿಯ ವಾರ್ಡನಂ೫ರಲ್ಲಿನ ನೂರಾರು ಬಡ ಕುಟುಂಬಗಳಿಗೆ ದಿನನಿತ್ಯ ಅಗತ್ಯ ಇರುವ ದಿನಸಿ ಪದಾರ್ಥಗಳನ್ನು ಮೇ.೧೨ರಂದು ಮಂಗಳವಾರ ೫ನೇವಾರ್ಡಿನ ನಗರಸಭಾ ಸದಸ್ಯ ಐ.ಯು.ಪಠಾಣ ತಮ್ಮ ಅನೇಕ ಬೆಂಬಲಿಗರೊಂದಿಗೆ ವಿತರಿಸುವ ಮೂಲಕ ಮಾನವೀಯತೆ ಮೆರೆದರು.
ಈಸಂದರ್ಭದಲ್ಲಿ ನಗರಸಭೆಯ ಸದಸ್ಯ ಐ.ಯು.ಪಠಾಣ ಮಾತನಾಡಿ, ತಾವು ಪ್ರತಿನಿಧಿಸುವ ೫ ನೇ ವಾರ್ಡಿನಲ್ಲಿಯ ಎಲ್ಲವರ್ಗದ ಬಡಕುಟುಂಬಗಳಿಗೆ ದಿನಬಳಕೆಗೆ ಬೇಕಾಗುವ ಅಕ್ಕಿ, ಸಕ್ಕರೆ, ಅಡುಗೆ ಎಣ್ಣಿ, ಚಾಹಾಪುಡಿ, ಸೋಪು ಸೇರಿದಂತೆ ವಿವಿಧ ವಸ್ತುಗಳನ್ನು ವಿತರಿಸಲಾಗಿದೆ. ಪ್ರತಿ ದಿನ್ ೧೦೦ ಕುಟುಂಬಗಳಿಗೆ ಅಗತ್ಯವಸ್ತುಗಳನ್ನು ವಿತರಿಸಲಾಗುತ್ತಿದೆ. ೧೦ ದಿನಗಳ ವರೆಗೆ ಅಗತ್ಯವಸ್ತುಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಸರಕಾರ ಮುಂಜಾಗ್ರತಾ ಕ್ರಮವಾಗಿ ಲಾಕ್ಡೌನ್ ಘೋಷಣೆ ಮಾಡಿದಾಗಿನಿಂದ ದುಡಿಯುವ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿರು ೫ನೇ ವಾರ್ಡಿನಲ್ಲಿ ಅನೇಕ ಕುಟುಂಬಗಳಿಗೆ ತೀವೃ ತೊಂದರೆಯಾಗಿದೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನಮ್ಮಿಂದಾದ ಸಹಾಯವನ್ನು ಮಾಡುತ್ತಿರುವುದಾಗಿ ಅವರು ತಿಳಿಸಿದರು.
ಈಸಂದರ್ಭದಲ್ಲಿ ಮುಖಂಡರಾದ ದಾಸಪ್ಪ ಕರ್ಜಗಿ, ಸಂಗಪ್ಪ ಪಂಪಣ್ಣವರ್, ದ್ಯಾಮಣ್ಣ ಅರಸನಾಳ, ಶಿವಬಸಪ್ಪ ದೊಡ್ಡತಾಳವಾರ, ಉಮೇಶ್ ರೇವಣಕರ್, ಇಲಿಯಾಸ್ ದಾರುದ್ವಾಲ್, ಶಿವಾ ಗೋಸಾವಿ, ನಸರು ಮುಲ್ಲಾ, ಇಭ್ರಾಹೀಮ್ ಮುಲ್ಲಾ, ಜಿಲಾನಿ ಕ್ವಾಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.